Subscribe to Gizbot

ಬಿಡುಗಡೆ ಆಯ್ತು ಹಾನರ್ 8 ಪ್ರೋ: ಒನ್ ಪ್ಲಸ್ 5ಗೆ ನೇರಾ ಪ್ರತಿಸ್ಪರ್ಧೆ..!!

Written By:

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಖ್ಯಾತಿಗಳಿಸಿರುವ ಹುವಾವೆ ಕಂಪನಿಯೂ ಹೊಸದಾಗಿ ಹಾನರ್ 8 ಪ್ರೋ ಭಾರತದಲ್ಲಿ ಲಾಂಚ್ ಮಾಡಿದೆ. ಈ ಮೊದಲು ಚೀನಾದಲ್ಲಿ ಈ ಫೋನ್ ಹಾನರ್ V9 ಹೆಸರಿನಲ್ಲಿ ಲಾಂಚ್ ಆಗಿತ್ತು. ಈ ಸ್ಮಾರ್ಟ್‌ಪೋನ್ 6GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ಓದಿರಿ: ನಿಮ್ಮ ಕ್ರೆಡಿಡ್, ಡೆಬಿಟ್ ನಲ್ಲಿ ಮೈಕ್ರೋ ಚಿಪ್ ಇಲ್ಲವೇ..? ಆನ್ ಲೈನ್ ಶಾಪಿಂಗ್ ಮಾಡುವಾಗ ಎಚ್ಚರ.!!

ಬಿಡುಗಡೆ ಆಯ್ತು ಹಾನರ್ 8 ಪ್ರೋ: ಒನ್ ಪ್ಲಸ್ 5ಗೆ ನೇರಾ ಪ್ರತಿಸ್ಪರ್ಧೆ..!!

ಜುಲೈ 13 ರಿಂದ ಅಮೆಜಾನ್ ನಲ್ಲಿ ಈ ಫೋನ್ ಎಕ್ಸ್ ಕ್ಲೂಸಿವ್ ಆಗಿ ಹಾನರ್ 8 ಪ್ರೋ ಸೇಲ್ ಆರಂಭವಾಗಲಿದೆ. ಪ್ರೈಮ್ ಕಸ್ಟಮರ್ ಗಳಿಗೆ ಈ ಫೋನ್ ಜುಲೈ 10 ರಿಂದ ದೊರೆಯಲಿದೆ ಎನ್ನಲಾಗಿದೆ. ಇದು ನೇವಿ ಬ್ಲೂ, ಪ್ಲಾಟಿನಲ್ ಗೋಲ್ಡ್ ಮತ್ತು ಮಿಡ್ ನೈಟ್ ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವದಾದರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಹಾನರ್ 8 ಪ್ರೋ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. 12 MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ LED ಫ್ಲಾಷ್ ಲೈಟ್ ಇದ್ದು, f/2.2 ಅಪರ್ಚರ್ ಇದರಲ್ಲಿದೆ. ಆಟೋಫೋಕಸ್ ಮತ್ತು 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಬ್ಲಾಕ್-ವೈಟ್ ಫೋಟೋಗಳನ್ನು ಕ್ಲಿಕ್ ಮಾಡಲು ಇದು ಸಹಾಯಕವಾಗಿದೆ.

5.7 ಇಂಚಿನ ಕ್ಯಾಮೆರಾ:

5.7 ಇಂಚಿನ ಕ್ಯಾಮೆರಾ:

ಹಾನರ್ 8 ಪ್ರೋ ನಲ್ಲಿ 5.7 ಇಂಚಿನ QHD LCD ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಗೊರಿಲ್ಲಾ ಗ್ಲಾಸ್ ಪ್ರೋಟೆಕ್ಷನ್ ಅನ್ನು ನೀಡಲಾಗಿದೆ. ಇದರೊಂದಿಗೆ ಹುವಾವೆ 960 ಆಕ್ವಾ ಕೋರ್ ಪ್ರೋಸೆಸರ್ ಇದರಲ್ಲಿ ಕಾಣಬಹುದಾಗಿದೆ.

6GB RAM, 128 GB ಇಂಟರ್ನಲ್ ಮೆಮೊರಿ:

6GB RAM, 128 GB ಇಂಟರ್ನಲ್ ಮೆಮೊರಿ:

ಇದಲ್ಲದೇ ಹಾನರ್ 8 ಪ್ರೋ ಫೋನಿನಲ್ಲಿ 6GB RAM ಮತ್ತು 128GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

4000mAh ಬ್ಯಾಟರಿ:

4000mAh ಬ್ಯಾಟರಿ:

ಹಾನರ್ 8 ಪ್ರೋ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಿದ್ದು, ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದಲ್ಲದೇ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ EMUI 5..1 ಕಾರ್ಯಚರಣೆಯನ್ನು ಹೊಂದಿದೆ. 4G LET ಸಪೋರ್ಟ್ ಮಾಡಲಿದೆ.

ಬೆಲೆ:

ಬೆಲೆ:

ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನದಲ್ಲಿರುವ ಹುವಾವೆ ಬಿಡುಗಡೆ ಮಾಡಿರುವ ಹಾನರ್ 8 ಪ್ರೋ ಸ್ಮಾರ್ಟ್‌ಫೋನಿನ ಬೆಲೆ ರೂ, 29,999 ಆಗಲಿದೆ. ಮಾರುಕಟ್ಟೆಯಲ್ಲಿರುವ ಅನೇಕ ಸ್ಮಾರ್ಟ್‌ಫೋನ್ ಗಳಿಗೆ ಇದು ಸ್ಪರ್ಧೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
the Honor 8 Pro has been launched in India in with 6GB RAM and 128GB internal storage. Priced at Rs 29,999, the Honor 8 Pro will sell exclusively via Amazon India on July 13. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot