ನಿಮ್ಮ ಕ್ರೆಡಿಡ್, ಡೆಬಿಟ್ ನಲ್ಲಿ ಮೈಕ್ರೋ ಚಿಪ್ ಇಲ್ಲವೇ..? ಆನ್ ಲೈನ್ ಶಾಪಿಂಗ್ ಮಾಡುವಾಗ ಎಚ್ಚರ.!!

ದಿನೇ ದಿನೇ ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಕೆಯೂ ಅಧಿಕವಾಗುತ್ತಿರುವಂತೆ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ನೋಟು ನಿಷೇಧದ ನಂತರದಲ್ಲಿ ಕಾರ್ಡ್ ಬಳಕೆಯೂ ಅಧಿಕವಾಗುತ್ತಿದೆ.

|

ನಿಮ್ಮ ಬಳಿ ಕ್ರೆಡಿಟ್‌ - ಡೆಬಿಟ್ ಕಾರ್ಡ್‌ ಇದೆ ಎಂದರೆ ಅದರೊಂದಿಗೆ ಹಲವು ಸಮಸ್ಯೆಗಳು ಇದೇ ಎಂದೇ ಅರ್ಥ. ದಿನೇ ದಿನೇ ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಕೆಯೂ ಅಧಿಕವಾಗುತ್ತಿರುವಂತೆ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ನೋಟು ನಿಷೇಧದ ನಂತರದಲ್ಲಿ ಕಾರ್ಡ್ ಬಳಕೆಯೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾರ್ಡ್ ಬಳಕೆದಾರರು ಎಚ್ಚರದಿಂದರಬೇಕು.

ನಿಮ್ಮ ಕಾರ್ಡ್ ನಲ್ಲಿ ಮೈಕ್ರೋ ಚಿಪ್ ಇಲ್ಲವೇ..?

ಓದಿರಿ: ಜಿಯೋ DTH ಶುರುವಾಗಲಿಲ್ಲ ಎಂದ್ರೂ ಚಿಂತೆ ಬೇಡ: 2020ಕ್ಕೆ ಟಿವಿ ಚಾನಲ್‌ಗಳೇ ಉಚಿತವಾಗಲಿದೆ..!!!

ನಿಮ್ಮ ಕಾರ್ಡ್ ನಲ್ಲಿ ಇರುವ ಹಣವನ್ನು ಕದಿಯಲು ಇಂದು ಕಳ್ಳರು ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ನಿಮಗೆ ಕರೆ ಮಾಡಿ ಕಾರ್ಡ್ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ, ಇಲ್ಲವೇ ನೀವು ಸ್ವೇಪ್ ಮಾಡಿದ ಸಂದರ್ಭದಲ್ಲಿಯೂ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರಲಿದೆ. ಆನ್ ಲೈನ್ ಶಾಪಿಂಗ್ ಸಂದರರ್ಭದಲ್ಲಿಯೂ ನಿಮಗೆ ಟೋಪಿ ಹಾಕಬಹುದು.

ಓದಿರಿ: ಜಿಯೋಫೈಗೆ ಪೈಫೋಟಿ ನೀಡಿದ ಏರ್‌ಟೆಲ್: 4G ಡಾಂಗಲ್ ದರ ಕಡಿತ, ಅಧಿಕ ಡೇಟಾ..!!

ಮೈಕ್ರೊಚಿಪ್ ಸಹಿತ ಕಾರ್ಡ್ ಸುರಕ್ಷಿತ:

ಮೈಕ್ರೊಚಿಪ್ ಸಹಿತ ಕಾರ್ಡ್ ಸುರಕ್ಷಿತ:

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗಿತ್ತಿದೆ. ಇಂತಹ ಕಾರ್ಡ್ ಗಳನ್ನು ಬಳಕೆ ಮಾಡಿ. ನಿಮ್ಮ ಕಾರ್ಡ್ ನಲ್ಲಿ ಮೈಕ್ರೊ ಚಿಪ್ ಇಲ್ಲವಾದರೇ ಶೀಘ್ರವೇ ನಿಮ್ಮ ಕಾರ್ಡ್ ಅನ್ನು ಬದಲಾಯಿಸಿಕೊಳ್ಳಿ.

ಕಳುವಾದರೆ ಬ್ಲಾಕ್ ಮಾಡಿಸಿ:

ಕಳುವಾದರೆ ಬ್ಲಾಕ್ ಮಾಡಿಸಿ:

ನಿಮ್ಮ ಕಾರ್ಡ್ ಗಳು ಕಳುವಾದರೆ ತಕ್ಷಣ ಅವುಗಳನ್ನು ಬ್ಲಾಕ್ ಮಾಡಿರಿ. ಕಾರ್ಡ್ ಬ್ಲಾಕ್‌ ಮಾಡುವುದೂ ಈಗ ಸರಳವಾಗಿದೆ. ಶುಲ್ಕರಹಿತ ಸಂಖ್ಯೆಗೆ ಕರೆ ಮಾಡಿ ಕಾರ್ಡ್‌ ಬ್ಲಾಕ್‌ ಮಾಡಿಸಬಹುದಾಗಿದೆ. ಇದರಿಂದ ನಿಮ್ಮ ಕಾರ್ಡ್ ದುಷ್ಟ ಕೈ ಸೇರಿ ನಷ್ಟವಾಗುವುದು ತಪ್ಪುತ್ತದೆ.

ಆನ್ ಲೈನ್ ಖರೀದಿಯ ಸಂದರ್ಭದಲ್ಲಿ ಎಚ್ಚರ:

ಆನ್ ಲೈನ್ ಖರೀದಿಯ ಸಂದರ್ಭದಲ್ಲಿ ಎಚ್ಚರ:

ಇಂದಿನ ದಿನದಲ್ಲಿ ಆನ್‌ಲೈನ್ ಖರೀದಿಯೂ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಿಮ್ಮ ಕಾರ್ಡ್ ಮಾಹಿತಿಯೂ ಲೀಕ್ ಆಗುವ ಸಾಧ್ಯತೆ ಹೆಚ್ಚಾಗಿರಲಿದೆ. ಇದರಿಂದಾಗಿ ಹೆಚ್ಚು ತಿಳಿಯದ ಜಾಲತಾಣಗಳಲ್ಲಿ ಕಾರ್ಡ್ ಬಳಕೆ ಮಾಡಿ ಪೇ ಮೆಂಟ್ ಮಾಡುವ ಬದಲು ಕ್ಯಾಷ್ ಅನ್ ಡಿಲಿವೆರಿ ಪಡೆಯಿರಿ

ನಿಮ್ಮ ಮಾಹಿತಿಯನ್ನು ಕೊಡಬೇಡಿ:

ನಿಮ್ಮ ಮಾಹಿತಿಯನ್ನು ಕೊಡಬೇಡಿ:

ನಕಲಿ ಕರೆ ಮಾಡಿ ಹಣ ಲಪಟಾಯಿಸುವವರ ಸಂಖ್ಯೆ ಈಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹೀಗಾಗಿ ಗ್ರಾಹಕರು ಕಾರ್ಡ್‌ನ ಸಂಖ್ಯೆ, ಪಿನ್‌ ಸಂಖ್ಯೆ, ವಿಳಾಸ, ಮೊಬೈಲ್‌ ಸಂಖ್ಯೆ ಮುಂತಾದ ಮಾಹಿತಿಗಳನ್ನು ಯಾರಿಗೂ ಕೊಡಬಾರದು. ಬ್ಯಾಂಕ್‌ ಪ್ರತಿನಿಧಿಗಳು ಎಂದು ಕರೆ ಮಾಡುವವರಿಗೂ ಈ ಮಾಹಿತಿಗಳನ್ನು ಕೊಡಬಾರದು.

Best Mobiles in India

Read more about:
English summary
chip cards are not only more secure, they are also simple to use. Chip cards and terminals work together to protect in-store payments. to kmow more vist kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X