Subscribe to Gizbot

ರೆಡ್‌ಮಿ ನೋಟ್ 5ಗೆ ಸೆಡ್ಡು: ಹಾನರ್‌ 9 ಲೈಟ್ ಬೆಲೆಯಲ್ಲಿ ರೂ.2000 ಕಡಿತ..! ಇಂದು ಫ್ಲಾಷ್ ಸೇಲ್‌..!

Written By:

ಭಾರತೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಉತ್ತಮ ವಿನ್ಯಾಸ ಮತ್ತು ನಾಲ್ಕು ಕ್ಯಾಮೆರಾಗಳಿಂದ ಹೆಚ್ಚು ಸದ್ದು ಮಾಡಿತ್ತು. ಈ ಸ್ಮಾರ್ಟ್ ಫೋನ್ ಮತ್ತೊಮ್ಮೆ ಫ್ಲಾಷ್ ಸೇಲಿನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಬಾರಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಹಾನರ್ 9 ಲೈಟ್ ಬೆಲೆಯಲ್ಲಿ ರೂ.2000 ಕಡಿತ ಮಾಡಲಾಗಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್‌ಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

 ಹಾನರ್‌ 9 ಲೈಟ್ ಬೆಲೆಯಲ್ಲಿ ರೂ.2000 ಕಡಿತ..! ಇಂದು ಫ್ಲಾಷ್ ಸೇಲ್‌..!

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದು, 3GB RAM ಮತ್ತು 32GB ಇಂಟರ್ನಲ್‌ ಮೆಮೊರಿಯೊಂದಿಗೆ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಕ್ರಮವಾಗಿ ರೂ.10,999 ಮತ್ತು ರೂ14,999ಕ್ಕೆ ಈ ಹಿಂದೆ ಮಾರಾಟವಾಗುತಿತ್ತು. ಈ ಬಾರಿ 4GB RAM ಮತ್ತು 64GB ಆವೃತ್ತಿಯ ಬೆಲೆಯಲ್ಲಿ ರೂ.2000 ಕಡಿಮೆ ಮಾಡಿದೆ ಎನ್ನಲಾಗಿದ್ದು, ಫ್ಲಿಪ್‌ಕಾರ್ಟಿನಲ್ಲಿ ಈ ಸ್ಮಾರ್ಟ್‌ಫೋನ್ ಇಂದು 12ಕ್ಕೆ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಓದಿರಿ: ಫೇಸ್‌ಬುಕ್‌ ನಿಮ್ಮ ಮಾಹಿತಿ ಕದ್ದಿದೆಯೇ-ಇಲ್ಲವೇ..? ತಿಳಿಯುವುದು ಹೇಗೆ..?

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 5.65 ಇಂಚಿನ FHD ಗುಣಮಟ್ಟದ IPS ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದ್ದು 2.5D ಕರ್ವಡ್ ಗ್ಲಾಸ್ ವಿನ್ಯಾಸ ಹೊಂದಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಗ್ಲಾಸ್ ಫಿನಿಷಿಂಗ್ ನೀಡಲಾಗಿದ್ದು, ಬೇಗನೇ ಒಡೆಯುವುದಿಲ್ಲ ಎನ್ನಲಾಗಿದೆ.

 ಹಾನರ್‌ 9 ಲೈಟ್ ಬೆಲೆಯಲ್ಲಿ ರೂ.2000 ಕಡಿತ..! ಇಂದು ಫ್ಲಾಷ್ ಸೇಲ್‌..!

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ 13 MP + 2 MP ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಇದರೊಂದಿಗೆ ಫ್ಲಾಷ್ ಲೈಟ್ ಸಹ ಇದೆ. ಹಾಗೇ ಮುಂಭಾಗದಲ್ಲಿಯೂ ಸಹ 13 MP + 2 MPಯ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎರಡು ಕಡೆಗಳಲ್ಲಿ 1080p ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದರೊಂದಿಗೆ EMUI 8.0 ಕಾಣಬಹುದಾಗಿದೆ. ಇದರಿಂದಾಗಿ ಈ ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಇಷ್ಟು ಹತ್ತಿರವಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹಾನರ್ ನ ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಪ್ರಿಯರಿಗೆ ಇಷ್ಟವಾಗಲಿದೆ.

English summary
Alert: Honor 9 Lite flash sale today, 4GB model to cost Rs 2,000 less. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot