Subscribe to Gizbot

ರೂ.10,999 ಒಂದಲ್ಲ ಎರಡಲ್ಲ ನಾಲ್ಕು ಕ್ಯಾಮೆರಾ: ಹೇಗಿದೆ ಹಾನರ್ 9 ಲೈಟ್..?

Written By:
Honor 9 Lite with four cameras (KANNADA)

ಹುವಾವೆ ಕಂಪನಿಯೂ ಜಾಗತಿಕವಾಗಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿದ್ದು, ಭಾರತದಲ್ಲಿ ಹಾನರ್ ಬ್ರಾಂಡಿನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿರುವ ಇತ್ತೀಚೆಗೆ ಬಿಡುಗಡೆಯಾಗಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ತನ್ನ ಕ್ಯಾಮರಾ ವಿಶೇಷತೆಯಿಂದಲೇ ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಉತ್ತಮ ಗುಣಮಟ್ಟದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಪಾತ್ರವಾಗಿದೆ.

ರೂ.10,999 ಒಂದಲ್ಲ ಎರಡಲ್ಲ ನಾಲ್ಕು ಕ್ಯಾಮೆರಾ: ಹೇಗಿದೆ ಹಾನರ್ 9 ಲೈಟ್..?

ಕೊಡುವ ಬೆಲೆಗೆ ಹೆಚ್ಚಿನ ಆಯ್ಕೆಗಳನ್ನೇ ನೀಡುತ್ತಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ರೂ.10,999 (3GB RAM)ಕ್ಕೆ ದೊರೆಯುತ್ತಿದ್ದು, ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಇತರೇ ಯಾವುದೇ ಕಂಪನಿಗಳು ಇಷ್ಟು ಬೆಲೆಗೆ ಈ ಮಾದರಿಯ ಆಯ್ಕೆಗಳನ್ನು ನೀಡುತ್ತಿಲ್ಲ ಎನ್ನಲಾಗಿದೆ. ಈ ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 13MP + 2MPಯ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ನೋಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನಿನ ವಿಶೇಷತೆಗಳೇನು ಎಂಬುದನ್ನು ನಿಮಗೆ ತಿಳಿಸುವ ಪ್ರಯತ್ನ ಇದಾಗಿದೆ. ಅದರಲ್ಲೂ ನಾಲ್ಕು ಕ್ಯಾಮೆರಾಗಳು ಯಾವ ರೀತಿಯಲ್ಲಿ ಕಾರ್ಯುನಿರ್ವಹಿಸಲಿದೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

ಓದಿರಿ: ರೂ.20000ಕ್ಕೆ ಆಪಲ್ ಮ್ಯಾಕ್‌ ಬುಕ್: ಜೋಕ್ ಅಲ್ಲ..! ಶೀಘ್ರ ಮಾರುಕಟ್ಟೆಗೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಮೆರಾ ವಿಶೇಷತೆಗಳು..!

ಕ್ಯಾಮೆರಾ ವಿಶೇಷತೆಗಳು..!

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಹೆಚ್ಚು ಸದ್ದು ಮಾಡುತ್ತಿರುವುದೇ ತನ್ನ ಕ್ಯಾಮೆರಾ ವಿಭಾಗದಿಂದಾಗಿ, ಈ ಸ್ಮಾರ್ಟ್‌ಫೋನ್‌ ನಲ್ಲಿ ಒಟ್ಟು ನಾಲ್ಕು ಕ್ಯಾಮೆರಾವನ್ನು ನೀಡಲಾಗಿದ್ದು, ಇದು ಅದ್ಬುತವಾದ ಸೆಲ್ಫಿಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ. ಅದಲ್ಲದೇ ಉತ್ತಮ ಡೆಪ್ಡ್ ಆಫ್ ಫೀಲ್ಡ್ ಅನ್ನು ಸೆರೆಹಿಡಿಯಲಿದೆ. ಈ ಮಾದರಿಯ ಆಯ್ಕೆಗಳನ್ನು ಹೊಂದಿರುವ ಫೋನ್‌ ಬೆಲೆ ಮಾರುಕಟ್ಟೆಯಲ್ಲಿ 15000ಕ್ಕಿಂತಲೂ ಹೆಚ್ಚಾಗಿದೆ.

ಕ್ಯಾಮೆರಾ ಬಳಕೆ:

ಕ್ಯಾಮೆರಾ ಬಳಕೆ:

ಇದಲ್ಲದೇ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಕ್ಯಾಮೆರಾ ಬಳಕೆಯೂ ಅತ್ಯಂತ ಸುಲಭವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯುವ ಸಲುವಾಗಿ ಅವಶ್ಯವಿರುವ ಎಲ್ಲಾ ಆಯ್ಕೆಗಳನ್ನು ಈ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಪೋಟರೆಟ್ ಮೋಡ್, ವೈಡ್ ಆಪರ್ಚರ್ ಮೋಡ್, ಮೂವಿಂಗ್ ಪಿಚ್ಚರ್ಸ್ ಮತ್ತು ಬ್ಯೂಟಿ ಮೋಡ್ ಅನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಫೋಟೋ ಫಿಲ್ಟರ್ ಗಳು:

ಫೋಟೋ ಫಿಲ್ಟರ್ ಗಳು:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಫೋಟೋ ಫಿಲ್ಟರ್‌ಗಳನ್ನು ನಾವು ಕಾಣಬಹುದಾಗಿದೆ. ಇದರಲ್ಲಿ GPS, ಟೈಮರ್, ಟಚ್ ಕಾಪ್ಚರ್ ಸೇರಿದಂತೆ ಹಲವು ಆಯ್ಕೆಗಳು, ಫ್ರೋ ಪೋಟೋ, ವಿಡಿಯೋ, ಪ್ರೋ ವಿಡಿಯೋ, HDR, ನೈಟ್ ಶೂಟ್, ಪನೋರಾಮ ಸೇರಿದಂತೆ ಹಲವು ಫಿಲ್ಟರ್ ಗಳನ್ನು ಸಹ ಕಾಣಬಹುದಾಗಿದೆ. ಇದಲ್ಲದೇ ಮುಂಭಾಗದಲ್ಲಿ ಗ್ರೂಪ್ ಸೆಲ್ಪಿ ಹಾಗೂ ಸಿಂಗಲ್ ಸೆಲ್ಪಿಗೆ ಬೇರೆ ಬೇರೆ ಆಧ್ಯತೆಯನ್ನು ಕಾಣಬಹುದಾಗಿದೆ.

ಕ್ಯಾಮರಾ ಗುಣಮಟ್ಟ:

ಕ್ಯಾಮರಾ ಗುಣಮಟ್ಟ:

ಬಜೆಟ್ ಬೆಲೆಯಲ್ಲಿ ದೊರೆಯುತ್ತಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿರುವ ನಾಲ್ಕು ಕ್ಯಾಮೆರಾಗಳು ಉತ್ತಮ ಸೆಲ್ಫಿಗಳನ್ನು ಸೆರೆಹಿಡಿಯಲಿದ್ದು, 13MP + 2MP ಕ್ಯಾಮೆರಾಗಳು ಬಳಕೆದಾರರಿಗೆ ವಿಶಿಷ್ಠ ಫೋಟೋ ತೆಗೆಯುವ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಗುಣಮಟ್ಟದ ಫೋಟೋಗಳು ಟಾಪ್ ಎಂಡ್‌ ಫೋನ್‌ಗಳಿಗೂ ಸೆಡ್ಡು ಹೊಡೆಯುತ್ತವೆ.

ಪೋಟ್ರೆಟ್ ಮೋಡ್:

ಪೋಟ್ರೆಟ್ ಮೋಡ್:

ಸದ್ಯ ಮಾರುಕಟ್ಟೆಯಲ್ಲಿ ಪೋಟ್ರೆಟ್ ಮೋಡ್ ನಲ್ಲಿ ಫೋಟೋ ತೆಗೆಯುವ ಪೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಇದೇ ಮಾದರಿಯಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಉತ್ತಮ ಪೋಟ್ರೆಟ್ ಫೋಟೋಗಳನ್ನು ನಾವು ಸೆರೆಹಿಡಿಯಬಹುದಾಗಿದೆ.

ನೈಸರ್ಗಿಕ ಬಣ್ಣಗಳು:

ನೈಸರ್ಗಿಕ ಬಣ್ಣಗಳು:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ನಮ್ಮ ಕಣ್ಣಿಗೆ ಕಾಣುವ ಮಾದರಿಯಲ್ಲಿಯೇ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ ಎನ್ನಲಾಗಿದೆ. ಬೇರೆ ಕ್ಯಾಮೆರಾಗಳಿಗೆ ಹೋಲಿಕೆ ಮಾಡಿಕೊಂಡರೆ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಇರುವ ಕ್ಯಾಮೆರಾಗಳು ಉತ್ತಮ ಗುಣಮಟ್ಟದಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಫೋಟೋ ಗಳನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ. ಅಲ್ಲದೇ ಕಡಿಮೆ ಬೆಳಕಿನಲ್ಲಿಯೂ ಉತ್ತಮ ಚಿತ್ರಗಳನ್ನು ಇದು ಸೆರೆಹಿಡಿಯಲಿದೆ.

ಕೊನೆ ಮಾತು:

ಕೊನೆ ಮಾತು:

ಕೊಡುವ ಕಾಸಿಗಂತೂ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಮೋಸವಿಲ್ಲ ಎನ್ನಬಹುದು. ಸೆಲ್ಫಿ ಮತ್ತು ಹೆಚ್ಚಿನ ಫೋಟೋಗಳನ್ನು ಕ್ಲಿಕಿಸುವವರಿಗೆ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಹೇಳಿ ಮಾಡಿಸಿದ್ದು ಎಂದರೆ ತಪ್ಪಾಗುವುದಿಲ್ಲ. ಇದರಲ್ಲಿರುವ ಕ್ಯಾಮೆರಾಗಳು ಉತ್ತಮವಾಗಿದ್ದು, ಇದರೊಂದಿಗೆ ವಿನ್ಯಾಸ ಸಹ ಅದ್ದೂರಿಯಾಗಿದೆ. ಈ ಹಿನ್ನಲೆಯಲ್ಲಿ ಬೆಲೆಯ ವಿಚಾರದಲ್ಲಿ ಈ ಸ್ಮಾರ್ಟ್‌ಫೋನ್ ಉತ್ತಮವಾಗಿಯೇ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Honor 9 Lite offers the most feature packed camera in its price point. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot