ಕೇವಲ ರೂ.12,000ಕ್ಕೆ 4 ಕ್ಯಾಮೆರಾ, ಫುಲ್‌ಸ್ಕ್ರಿನ್ ಡಿಸ್‌ಪ್ಲೇ ಸ್ಮಾರ್ಟ್‌ಫೋನ್..!

ಚೀನಾ ಮೂಲಕ ಸ್ಮಾರ್ಟ್‌ಫೋನ್ ತಯಾರಕ ಹಾನರ್ ಹೊಸದೊಂದು ಸ್ಮಾರ್ಟ್ ಫೋನ್ ಲಾಂಚ್ ಮಾಡುತ್ತಿದೆ. ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಅನ್ನು ಜನವರಿ 17 ರಂದು ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ಈ ಸ್ಮಾರ್ಟ್ ಫೋನ್ ನಮಗೆ ಲಭ್ಯವಾಗಿದ್ದು, ಈ ಹಿನ್ನಲೆಯಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದರ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದ್ದು, ಈ ಸ್ಮಾರ್ಟ್ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಮಾರಾಟವಾಗಲಿದೆ.
ಓದಿರಿ: ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಮ್ ಮಾದರಿ ಸ್ಲೈಡ್ ಶೋ ಮಾಡುವುದು ಹೇಗೆ..?

ಕ್ಯಾಮೆರಾ:
ಈ ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ 13 MP + 2 MP ಕ್ಯಾಮೆರಾ, ಹಾಗೇ ಮುಂಭಾಗದಲ್ಲಿ 13 MP + 2 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 1080p ವಿಡಿಯೋ ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ.

18:9 ಡಿಸ್‌ಪ್ಲೇ
18:9 ಅನುಪಾತದ ಡಿಸ್‌ಪ್ಲೇಯನ್ನು ಈ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಕಾಣಬಹುದಾಗಿದೆ. 5.65 ಇಂಚಿನ FHD ಗುಣಮಟ್ಟದ IPS ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಗೊರಿಲ್ಲಾ ಗ್ಲಾಸ್ ಸುರಕ್ಷತೆ ಸಹ ಇದೆ.

4GB RAM:
ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 4GB RAM ನೊಂದಿಗೆ ಕಾಣಿಸಿಕೊಳ್ಳಲಿದೆ. ಕಿರನ್ 659 ಪ್ರೋಸೆಸರ್ 64GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ.

ಆಂಡ್ರಾಯ್ಡ್ 8.0:
ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ EMUI 8.0 ಮತ್ತು ಆಂಡ್ರಾಯ್ಡ್ 8.0 ನಲ್ಲಿ ಕಾರ್ಯನಿರ್ವಹಿಸಲಿದೆ.
ವಿಡಿಯೋ ನೋಡಿ:
ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ ಎಂಬುದರ ವಿಡಿಯೋ ಇಲ್ಲಿದೆ.


Click it and Unblock the Notifications