Subscribe to Gizbot

ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್: ಫೀಚರ್‌ನಲ್ಲಿ ಬೆಸ್ಟ್-ಬೆಲೆ ಮಾತ್ರ ಲೈಟ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಸ್ಮಾರ್ಟ್‌ಫೋನ್ ಲಾಂಚ್ ಆಗುತ್ತಿದೆ. ಇದೇ ಮಾದರಿಯಲ್ಲಿ ಚೀನಾ ಮೂಲಕ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯಾದ ಹುವಾವೆ ತನ್ನ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಅನ್ನು ಜನವರಿ 17 ರಂದು ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ನಲ್ಲಿ ಮಾತ್ರವೇ ಎಕ್ಸ್‌ಕ್ಲೂಸಿವ್ ಆಗಿ ಮಾರಾಟವಾಗಲಿದೆ ಎನ್ನಲಾಗಿದೆ.

ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್: ಫೀಚರ್‌ನಲ್ಲಿ ಬೆಸ್ಟ್-ಬೆಲೆ ಮಾತ್ರ ಲೈಟ್..!

ಈ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ 18:9 ಡಿಸ್‌ಪ್ಲೇ ಅನುಪಾತದಿಂದ ಕೂಡಿರಲಿದ್ದು, ಯೂನಿಬಾಡಿ ವಿನ್ಯಾಸವನ್ನು ಹೊಂದಿದೆ. ಎಡ್ಜ್ ಟು ಎಡ್ಜ್ ಡಿಸ್‌ಪ್ಲೇ ಕಾಣಬಹುದಾಗಿದೆ. ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಉತ್ತಮ ಬೇಡಿಕೆಯನ್ನು ಸೃಷ್ಠಿಸಿಕೊಳ್ಳಲಿದೆ.

ಓದಿರಿ: ಇದಕ್ಕಿಂತ ಬೆಸ್ಟ್‌ ಸಮಯ ಇನ್ನೊಂದಿಲ್ಲ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್ ಸೇಲ್ ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ಡಿಸ್‌ಪ್ಲೇ:

ಉತ್ತಮ ಡಿಸ್‌ಪ್ಲೇ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 5.65 ಇಂಚಿನ FHD ಗುಣಮಟ್ಟದ IPS ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದ್ದು ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಯಾವುದೇ ರೀತಿಯಲ್ಲೂ ಒಡೆಯುವುದಿಲ್ಲ ಎನ್ನಬಹುದಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 3GB/4GB RAM ನೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿ ಕಿರನ್ 659 ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ ಜೊತೆಗೆ 32GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ.

ಆಂಡ್ರಾಯ್ಡ್ 8.0:

ಆಂಡ್ರಾಯ್ಡ್ 8.0:

ಆಂಡ್ರಾಯ್ಡ್ 8.0 ನಲ್ಲಿ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದರೊಂದಿಗೆ EMUI 8.0 ಕಾಣಬಹುದಾಗಿದೆ.

ನಾಲ್ಕು ಕ್ಯಾಮೆರಾ:

ನಾಲ್ಕು ಕ್ಯಾಮೆರಾ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ 13 MP + 2 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಹಾಗೇ ಮುಂಭಾಗದಲ್ಲಿ 13 MP + 2 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 1080p ವಿಡಿಯೋ ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ.

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಬೆಲೆ:

ಬೆಲೆ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ. 11,000ದ ಅಸುಪಾಸಿನಲ್ಲಿ ದೊರೆಯಲಿದೆ. ಇದೇ ಮಾದರಿಯಲ್ಲಿ 4GB RAM ಮತ್ತು 32GB ಇಂಟರ್ನಲ್ ಮೆಮೊರಿಯ ಆವೃತ್ತಿಯೂ ರೂ. 15,000ದ ಆಸುಪಾಸಿನಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Honor 9 Lite with four cameras set to launch. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot