Subscribe to Gizbot

ಇದಕ್ಕಿಂತ ಬೆಸ್ಟ್‌ ಸಮಯ ಇನ್ನೊಂದಿಲ್ಲ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್ ಸೇಲ್ ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಚೀನಾ ಮೂಲದ ಹುವಾವೆ ಕಂಪನಿಯೂ ಹಾನರ್ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದ್ದು, ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಭಾರತೀಯರಿಗಾಗಿ ಹೊಸದೊಂದು ಆಫರ್ ಘೋಷಣೆ ಮಾಡಿರುವ ಹಾನರ್, ತನ್ನ ಫಾಸ್ಟ್ ಮೂವಿಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲು ಮುಂದಾಗಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್ ಸೇಲ್ ..!

ಓದಿರಿ: ಜಿಯೋದಲ್ಲಿಯೂ ಇಲ್ಲ: ಏರ್‌ಟೆಲ್‌ನಿಂದ ಅಮೆಜಾನ್ ಆಫರ್...!

ಹಾನರ್ ತನ್ನ ನೂತನ ಸ್ಮಾರ್ಟ್‌ಫೋನ್‌ಗಳಾದ ಹಾನರ್ 7X, ಹಾನರ್ 8 ಪ್ರೋ, ಹಾನರ್ 9i ಮತ್ತು ಹಾನರ್ 6X ಸ್ಮಾರ್ಟ್‌ಫೋನ್‌ಗಳ ಮೇಲೆ 'ಹಾನರ್ ಬ್ಲಾಕ್‌ಮಾಸ್ಟರ್' ಹೆಸರಿನಲ್ಲಿ ಜನವರಿ 12ರವರೆಗೂ ರಿಯಾಯಿತಿ ಸೇಲ್‌ ಅನ್ನು ಘೋಷಣೆ ಮಾಡಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಮಾತ್ರವೇ ಈ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟವಾಗಲಿವೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಫರ್‌ಗಳು:

ಆಫರ್‌ಗಳು:

ಈ ಆಫರ್ ನಲ್ಲಿ ಹಾನರ್ 7X ಖರೀದಿ ಮಾಡಿದವರಿಗೆ 12 ತಿಂಗಳ ನೋ EMI ಕಾಸ್ಟ್ ಆಫರ್ ಅನ್ನು ಅಮೆಜಾನ್‌ನಲ್ಲಿ ಕಾಣಬಹುದಾಗಿದೆ. ಇದಲ್ಲದೇ ಹಾನರ್ 8 ಪ್ರೋ ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟಿನಲ್ಲಿ ರೂ.4000 ಡಿಸ್ಕೌಂಟ್ ನೀಡಲಾಗಿದೆ.

ಹಾನರ್ 6X:

ಹಾನರ್ 6X:

ಇದರೊಂದಿಗೆ ಹಾರನ್ 6X ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಆಫರ್ ಕಾಣಬಹುದಾಗಿದ್ದು, ಈ ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟಿನಲ್ಲಿ ರೂ.2000 ಡಿಸ್ಕೌಂಟ್ ನೀಡಲಾಗಿದ್ದು, ಈ ಫೋನ್ ಖರೀದಿಗೆ ಇದೇ ಸರಿಯಾದ ಸಂದರ್ಭ ಎನ್ನಲಾಗಿದೆ.

ಹಾನರ್ 9i:

ಹಾನರ್ 9i:

ಇದಲ್ಲದೇ ಹಾನರ್ 9i ಸ್ಮಾರ್ಟ್‌ಫೋನ್‌ ಅನ್ನು ಎಕ್ಸ್‌ಚೇಂಜ್‌ನಲ್ಲಿ ಖರೀದಿ ಮಾಡಿದರೆ ಫ್ಲಿಕ್ ಕಾರ್ಟ್‌ ರೂ.2000 ಡಿಸ್ಕೌಂಟ್ ನೀಡಲಿದೆ. ಇದಲ್ಲದೇ ರೂ.17000ದ ವರೆಗೂ ಡಿಸ್ಕೌಂಟ್ ಪಡೆಯುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

How to create two accounts in one Telegram app (KANNADA)
ಹಾನರ್ 7X ರೆಡ್‌:

ಹಾನರ್ 7X ರೆಡ್‌:

ಇದಲ್ಲದೇ ಸದ್ಯದ ಹಾಟ್ ಕೇಕ್ ಎಂದು ಬಿಂಬಿತವಾಗಿರುವ ಹಾನರ್ 7X ಸ್ಮಾರ್ಟ್‌ಫೋನ್‌ನಲ್ಲಿ ರೆಡ್‌ ಬಣ್ಣವು ಕಾಣಿಸಿಕೊಳ್ಳಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಈ ಫೋನ್ ಸಹ ಲಭ್ಯವಿರಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor 7X, 8 Pro, 9i, 6X Now Available With Discounts in India; Honor 7X to Get New Red Colour Variant in India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot