Home
ಮೊಬೈಲ್

ಬಜೆಟ್ ಬೆಲೆಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್: ಹೋನರ್ ವಿಶೇಷತೆ

By Shwetha

ತಂತ್ರಜ್ಞಾನ ಕ್ಷೇತ್ರದಲ್ಲಿ ಹೋನರ್ ಯಶಸ್ಸಿನ ನಡೆಯನ್ನು ದಾಖಲಿಸುತ್ತಿದೆ. ಕಂಪೆನಿಯು ಫೋನ್ ಬಳಕೆದಾರರಿಗೆ ಅತ್ಯದ್ಭುತ ಸ್ಮಾರ್ಟ್‌ಫೋನ್ ಆಯ್ಕೆಗಳನ್ನು ನೀಡಿದ್ದು, ಬಜೆಟ್ ಬೆಲೆಯಲ್ಲಿ ಗ್ರಾಹಕರು ಅತ್ಯುತ್ತಮ ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಲಾಂಚ್ ಆದ ಹೋನರ್ 5X, ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಚಿಪ್‌ಸೆಟ್ ಏಕೆ ಹೆಚ್ಚು ಮಹತ್ವದ್ದು?

ಹೋನರ್ ಕಡಿಮೆ ದರದಲ್ಲಿ ಅತ್ಯುನ್ನತ ಫೀಚರ್‌ಗಳನ್ನು ಪೋನ್‌ನಲ್ಲಿ ಹೊರತರುತ್ತಿದ್ದು ಇತ್ತೀಚೆಗೆ ಮಾರುಕಟ್ಟೆಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಹೋನರ್ ತನ್ನ ಫೋನ್‌ಗಳಲ್ಲಿ ಪ್ರಸ್ತುತಪಡಿಸಿದೆ. ತಮ್ಮ ಫೋನ್‌ಗಳಲ್ಲಿರುವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ತಂತ್ರಜ್ಞಾನಕ್ಕಾಗಿ ಕಂಪೆನಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹೋನರ್ 5X ಬೇರೆ ಬೇರೆ ಬೆರಳಚ್ಚು ಮುದ್ರಣಗಳನ್ನು ಬಳಸಿ ಡಿವೈಸ್ ಅನ್ನು ಲಾಕ್ ಮಾಡಬಹುದಾಗಿದೆ. ಕ್ವಿಕ್ ಅಪ್ಲಿಕೇಶನ್ ಲಾಂಚ್ ಮತ್ತು ಉತ್ತಮ ಬಳಕೆದಾರ ಅನುಭವವನ್ನು ನೀಡುತ್ತಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ಫೋನ್‌ಗಳನ್ನು ಕುರಿತು ಮತ್ತಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ.

#1

#1

ಇದೇ ರೀತಿಯಲ್ಲಿ ಹೋನರ್ 7 ಕೂಡ ಹೆಚ್ಚು ಶಕ್ತಿಯುತ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಉತ್ತಮ ಫೀಚರ್‌ಗಳನ್ನು ತನ್ನಲ್ಲಿ ಪಡೆದುಕೊಂಡಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಪತ್ತೆಯಾದ ಸಂದರ್ಭದಲ್ಲಿಯೇ ಚೀನಾ ಮೂಲದ ಹುವಾವೆ ತನ್ನ ಫೋನ್‌ಗಳಲ್ಲಿ ಈ ಮಾದರಿಯನ್ನು ಪ್ರಸ್ತುತಪಡಿಸಿತು.

#2

#2

ಹೋನರ್ 7 ಸೇಫ್ ಮೋಡ್ ಅನ್ನು ಒಳಗೊಂಡಿದ್ದು, ಆಯ್ಕೆಮಾಡಿದ ಫೋಟೋಗಳು, ವೀಡಿಯೊಗಳು, ಆಡಿಯೊ ಫೈಲ್‌ಗಳು ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಪಾಸ್‌ವರ್ಡ್ ಅಥವಾ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಉಳ್ಳ ಫೋಲ್ಡರ್‌ಗೆ ಸರಿಸಿಕೊಳ್ಳಬಹುದಾಗಿದೆ.

#3

#3

ಕಿರಿನ್ 650 ಚಿಪ್‌ಸೆಟ್ ಉತ್ತಮ ಕಾರ್ಯಕ್ಷಮತೆಯನ್ನು ಡಿವೈಸ್‌ಗೆ ನೀಡುತ್ತಿದ್ದು 28 ಎನ್‌ಎಮ್ ಚಿಪ್‌ಸೆಟ್‌ಗಳಿಗೆ ಹೋಲಿಸಿದಾಗ ಇದು ಭಿನ್ನವಾಗಿದೆ. ಮಾಲಿ T830 ಜಿಪಿಯುವನ್ನು ಇದು ಪಡೆದುಕೊಂಡಿದ್ದು ಉತ್ತಮ ಗೇಮಿಂಗ್ ಅನುಭವವನ್ನು ಇದು ನೀಡುತ್ತಿದೆ. ಕಿರಿನ್ 650 ಬಳಕೆದಾರರಿಗೆ ಹೋನರ್‌ನ ಮುಂಬರಲಿರುವ ಡಿವೈಸ್‌ಗಳ ವಿಶೇಷತೆಯನ್ನು ಉಣಬಡಿಸಲಿದೆ.

#4

#4

ಕಿರಿನ್ 650 ತನ್ನ ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಅಂತೆಯೇ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಲ್ಲಾ ತಲೆಮಾರಿಗೂ ಸೂಕ್ತವಾದುದು ಎಂದೆನಿಸಿದೆ. ಶಕ್ತಿಯುತ ಚಿಪ್‌ಸೆಟ್‌ನೊಂದಿಗೆ ಈ ಡಿವೈಸ್ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ.

Best Mobiles in India

English summary
Honor has been the frontrunner in driving technology innovation. The company has given consumers brilliant smartphone options, most of which have been the best sellers in their price segment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+