Honor: ಭಾರತದಲ್ಲಿ ಆಪಲ್‌ಗೆ ಪೈಪೋಟಿ ನೀಡಲು ಬರುತ್ತಿದೆ ಹಾನರ್‌ನ ಹೊಸ ಫೋನ್! ಫೀಚರ್ಸ್ ಏನಿವೆ?
ಸ್ಮಾರ್ಟ್‌ಫೋನ್‌ಗಳ (smartphones) ವಿಭಾಗದಲ್ಲಿ ನೀವು ಸಾಕಷ್ಟು ಭಿನ್ನ ಫೀಚರ್ಸ್ ಆಯ್ಕೆಯ ಫೋನ್‌ಗಳನ್ನು ಕಂಡಿರಬಹುದು. ಆದರೆ ಕೆಲವು ಫೋನ್‌ಗಳು ಮಾತ್ರ ಜನರ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಆ ರೀತಿಯ ಫೋನ್‌ಗಳಲ್ಲಿ ಹಾನರ್ ಫೋನ್‌ಗಳು ಸಹ ಇತ್ತೀಚಿಗೆ ಹೆಚ್ಚು ಸೌಂಡ್ ಮಾಡುತ್ತಿವೆ. ಅದರಂತೆ ಕೆಲವೇ ದಿನಗಳಲ್ಲಿ ಹಾನರ್‌ನ ಪ್ರೀಮಿಯಂ ಫೋನ್ ಭಾರತದಲ್ಲಿ ಲಾಂಚ್ ಆಗಲಿದೆ.
ಹೌದು, ಹಾನರ್ ಫೋನ್‌ಗಳಿಗೆ ಭಾರತದಲ್ಲಿ ಬಹು ಬೇಡಿಕೆ ಇದ್ದು, ಈ ನಡುವೆ ಹಾನರ್ ಮ್ಯಾಜಿಕ್ 6 ಸ್ಮಾರ್ಟ್‌ಫೋನ್ (Honor Magic 6 smartphone) ಭಾರತದಲ್ಲಿ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾಧವ್ ಶೇಠ್ ಅವರು ಮಾಹಿತಿ ನೀಡಿದ್ದಾರೆ. ಈ ಫೋನ್ ಅನ್ನು ಈಗಾಗಲೇ ಚೀನಾದಲ್ಲಿ ಲಾಂಚ್ ಮಾಡಲಾಗಿದ್ದು, ಆದರೆ ಭಾರತದಲ್ಲಿ ಇನ್ನಷ್ಟು ವಿಶೇಷತೆಗಳೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಹಾಗಿದ್ರೆ ಈ ಫೋನ್ ಏನೆಲ್ಲಾ ಫೀಚರ್ಸ್ ಪಡೆಯಬಹುದು?, ಬೆಲೆ ಎಷ್ಟಿರಬಹುದು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಹಾನರ್ ಮ್ಯಾಜಿಕ್ 6 ಸ್ಮಾರ್ಟ್‌ಫೋನ್: ಹಾನರ್‌ಟೆಕ್‌ನ ಸಿಇಓ ಮಾಧವ್ ಶೇಠ್ ಭಾರತದಲ್ಲಿ ಹಾನರ್ ಮ್ಯಾಜಿಕ್ 6 ಅಲ್ಟಿಮೇಟ್ ಆವೃತ್ತಿ ಅಥವಾ ಮ್ಯಾಜಿಕ್ 6 RSR ಪೋರ್ಷೆ ಡಿಸೈನ್ ಆವೃತ್ತಿಯನ್ನು ಲಾಂಚ್ ಮಾಡಬಹುದು ಎಂಬ ಸುಳಿವನ್ನು ನೀಡಿದ್ದಾರೆ. ಈ ಫೋನ್‌ಗಳನ್ನು ಚೀನಾದಲ್ಲಿ ಈ ವರ್ಷದ ಆರಂಭದಲ್ಲೇ ಲಾಂಚ್ ಮಾಡಲಾಗಿದ್ದು, ಕ್ರಮವಾಗಿ ಈ ಫೋನ್‌ಗಳು 81,837 ರೂ. ಮತ್ತು 1,15,320ರೂ.ಗಳ ಬೆಲೆ ಹೊಂದಿವೆ.
ಇನ್ನು ಹಾನರ್ ಮ್ಯಾಜಿಕ್ 6 ಅಲ್ಟಿಮೇಟ್ ಸ್ಕ್ವೇರ್ ಕ್ಯಾಮೆರಾ ಐಸ್‌ಲ್ಯಾಂಡ್ ಆಯ್ಕೆ ಪಡೆದಿರಲಿದ್ದು, ಹಾನರ್ ಮ್ಯಾಜಿಕ್ 6 RSR ಪೋರ್ಷೆ ರಿಯರ್‌ನಲ್ಲಿ ಹೆಕ್ಸಾಗೋನಲ್ ಕ್ಯಾಮರಾ ರಚನೆಯನ್ನು ಪಡೆದಿದೆ. ಹಾಗೆಯೇ ಅಲ್ಟಿಮೇಟ್ ಆವೃತ್ತಿಯು ವೆಗಾನ್‌ಲೆದರ್ ಬ್ಯಾಕ್‌ಪ್ಲೇಟ್‌ನೊಂದಿಗೆ ಕಾಣಿಸಿಕೊಂಡಿದ್ದು, ಪೋರ್ಷೆ ಡಿಸೈನ್ ಗ್ಲಾಸ್ ಹೆಕ್ಸಾಗೋನಲ್ ಕ್ಯಾಮೆರಾ ಲೈಟ್ ಆಯ್ಕೆ ಪಡೆದಿದೆ. ಪೋರ್ಷೆ ಡಿಸೈನ್ ವೇರಿಯಂಟ್ ಹೊಸ ಡ್ಯುಯಲ್ ಲೇಯರ್ OLED ಟ್ಯಾಂಡೆಮ್ ಡಿಸ್‌ಪ್ಲೇ ಆಯ್ಕೆ ಪಡೆಯಲಿದ್ದು, ಇದು ಡಿಸ್‌ಪ್ಲೇನ ಜೀವಿತಾವಧಿಯನ್ನು 600 ಪ್ರತಿಶತದಷ್ಟು ವಿಸ್ತರಿಸಲು ವಿನ್ಯಾಸಗೊಳಿಸಲಾಗಿದೆಯಂತೆ.

ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿರುವ ಹಾನರ್ ಮ್ಯಾಜಿಕ್ ಫೀಚರ್ಸ್: ಮೊದಲೇ ತಿಳಿಸಿದಂತೆ ಈ ಫೋನ್‌ಗಳನ್ನು ಈಗಾಗಲೇ ಚೀನಾದಲ್ಲಿ ಲಾಂಚ್ ಮಾಡಲಾಗಿದ್ದು, ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ಎರಡೂ ಫೋನ್‌ಗಳು ಸಹ 6.8 ಇಂಚಿನ ಫುಲ್ ಹೆಚ್‌ಡಿ + LTPO OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1Hz ರಿಂದ 120Hz ವರೆಗೆ ಬದಲಾಗುವ ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ.
ಇದರ ಜೊತೆಗೆ ಈ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಕ್ಯಾಮೆರಾ ವಿಭಾಗದಲ್ಲಿ ಪ್ರೀಮಿಯಂ ಆಯ್ಕೆ ಆಗಿವೆ. ಅಂದರೆ 180 ಮೆಗಾಪಿಕ್ಸೆಲ್ OIS ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ನೀಡಲಾಗಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾವನ್ನು ಕಾಣಬಹುದು. ಹಾಗೆಯೇ 3D ಡೆಪ್ತ್ ಸೆನ್ಸರ್ ಜೊತೆಗೆ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.
ಇನ್ನು ಈ ಫೋನ್‌ಗಳ ಬ್ಯಾಟರಿ ವಿಚಾರಕ್ಕೆ ಬಂದರೆ ಎರಡೂ ಮಾದರಿಗಳು 5600mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 80W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 66W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿವೆ. ಈ ಮೂಲಕ ದೀರ್ಘ ಬ್ಯಾಕಪ್ ಪಡೆಯುವುದರ ಜೊತೆಗೆ ಕ್ಷಣ ಮಾತ್ರದಲ್ಲಿ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ಹಾಗೆಯೇ ಹಾನರ್ ಮ್ಯಾಜಿಕ್ 6 ಅಲ್ಟಿಮೇಟ್ ಆವೃತ್ತಿ 16GB+512GB ಮತ್ತು 16GB+1TB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯ ಇದೆ.

ಗಮನಿಬೇಕಾದ ವಿಷಯ ಏನೆಂದರೆ ಭಾರೀ ಬೇಡಿಕೆ ಪಡೆದುಕೊಂಡಿರುವ ಐಫೋನ್‌ಗಳು ಸಹ ಈ ಬೆಲೆಗಿಂತ ಕಡಿಮೆಯಲ್ಲಿ ಲಭ್ಯ ಆಗುತ್ತಿವೆ. ಅಂದರೆ ಐಫೋನ್ 15 ಅನ್ನು ಭಾರತದಲ್ಲಿ ಸೆಪ್ಟೆಂಬರ್ 12, 2023 ರಂದು ಲಾಂಚ್ ಮಾಡಲಾಗಿದ್ದು, 128GB ಸ್ಟೋರೇಜ್ ಹೊಂದಿರುವ ಮೂಲ ವೇರಿಯಂಟ್‌ಗೆ 79,900 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆದ ಕಾರಣ ಚೀನಾದಲ್ಲಿ ಲಾಂಚ್ ಆದ ಹಾನರ್ ಫೋನ್‌ನ ಬೆಲೆ ಗಮನಿಸಿದ್ರೆ ಇದು ಆಪಲ್‌ಗಿಂತ ಹೆಚ್ಚಿನ ಬೆಲೆ ಹೊಂದಿದೆ ಎಂದು ಹೇಳಬಹುದು. ಆದರೂ ಭಾರತದಲ್ಲಿ ಹಾನರ್ ಫೋನ್‌ಗಳ ಬೆಲೆ ಎಷ್ಟಿರಬಹುದು ಎಂಬ ನಿಖರ ಮಾಹಿತಿಗೆ ಗಿಜಾಬಾಟ್‌ನೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








