Honor: 108MP ಕ್ಯಾಮೆರಾ.. 512GB ಸ್ಟೋರೇಜ್.. 6600mAh ಬ್ಯಾಟರಿ.. ಯಾವ ಫೋನ್ ಗೊತ್ತಾ?
ಮೊಬೈಲ್ ಪ್ರಿಯರಿಗೆ ಇಷ್ಟು ಸಾಕು! 108 ಮೆಗಾಪಿಕ್ಸೆಲ್ ಕ್ಯಾಮೆರಾ.. 6600mAh ಬ್ಯಾಟರಿ.. ಹೌದು, ಮತ್ತೊಂದು ಜಬರ್ದಸ್ತ್ ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ಹೌದು, ಶೀಘ್ರದಲ್ಲೇ ಹಾನರ್ ಮ್ಯಾಜಿಕ್ 7 ಲೈಟ್ (Honor Magic7 Lite) ಬಿಡುಗಡೆಯಾಗಲಿದೆ. ಇದು ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಪ್ರಸ್ತುತ, ಮುಂಬರುವ ಫೋನಿನ ವೈಶಿಷ್ಟ್ಯಗಳು ಮತ್ತು ಡಿಸೈನ್ ಬಹಿರಂಗವಾಗಿದೆ. ಈಗಾಗಲೇ, ಮೊಬೈಲ್ ಪ್ರಿಯರ ಗಮನ ಸೆಳೆಯುತ್ತಿದೆ. ಬನ್ನಿ, ಹಾನರ್ ಮ್ಯಾಜಿಕ್ 7 ಲೈಟ್ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ಎನ್ನುವುದನ್ನು ತಿಳಿಯೋಣ.
ಕಂಪನಿಯು ಹಾನರ್ ಮ್ಯಾಜಿಕ್ 6 ಲೈಟ್ (Honor Magic6 Lite) ಫೋನಿನ ಉತ್ತರಾಧಿಕಾರಿಯಾಗಿ ಹಾನರ್ ಮ್ಯಾಜಿಕ್ 7 ಲೈಟ್ ಅನ್ನು ಬಿಡುಗಡೆ ಮಾಡಬಹುದು. ಈ ಮೊಬೈಲ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಫೋನಿನಲ್ಲಿ 6.78 ಇಂಚಿನ ಡಿಸ್ಪ್ಲೇ ಲಭ್ಯವಿರಲಿದೆ. ಜೊತೆಗೆ 8GB RAM + 512GB ಸ್ಟೋರೇಜ್, 66W ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ ಬಿಡುಗಡೆಯ ಬಳಿಕ, ಬೂದು ಮತ್ತು ಗುಲಾಬಿ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದು ಕರ್ವ್ ಡಿಸೈನ್ ಮತ್ತು ತೆಳ್ಳಗಿರುವ ಬೆಜೆಲ್ ಹೊಂದಿದೆ. ಹಾಗೆಯೇ, ವೃತ್ತಾಕಾರದ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಎಲ್ಇಡಿ ಫ್ಲ್ಯಾಶ್‌ನೊಂದಿಗೆ ಬರುತ್ತದೆ. ಬಲ ಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್ ಇದೆ. ಈ ಫೋನ್ ಕೆಳಭಾಗದಲ್ಲಿ ಯುಎಸ್‌ಬಿ ಟೈಪ್ ಸಿ ಪೋರ್ಟ್, ಸಿಮ್ ಟ್ರೇ, ಮೈಕ್ರೊಫೋನ್ ಮತ್ತು ಸ್ಪೀಕರ್ ವೆಂಟ್ ಹೊಂದಿದೆ.
ಹಾನರ್ ಮ್ಯಾಜಿಕ್ 7 ಲೈಟ್ ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ 6.78 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 2700 x 1224 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದ ಬೆಂಬಲ ಪಡೆದಿದೆ. ಹಾನರ್ ಮ್ಯಾಜಿಕ್ 6 ಲೈಟ್ ಫೋನಿನಲ್ಲಿಯೂ ಇದೇ ಡಿಸ್ಪ್ಲೇ ಲಭ್ಯವಿದೆ.
ಪ್ರೊಸೆಸರ್ ಸಾಮರ್ಥ್ಯ
ಹಾನರ್ ಮ್ಯಾಜಿಕ್ 7 ಲೈಟ್ ಫೋನ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 6 ಜೆನ್ 1 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದು ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ ಓಎಸ್ 8.0 ನೊಂದಿಗೆ ಕೆಲಸ ನಿರ್ವಹಿಸಲಿದೆ. ಈ ಮೊಬೈಲ್ 8GB RAM + 512GB ಸ್ಟೋರೇಜ್ ಆಯ್ಕೆ ಹೊಂದಿರಲಿದೆ. ಹಾನರ್ ಮ್ಯಾಜಿಕ್ 6 ಲೈಟ್ ಫೋನ್ 8GB + 256GB ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಬಿಡುಗಡೆಯಾಗಿದೆ.
ಈ ಸುದ್ದಿ ಓದಿದ್ದೀರಾ?: Tecno: 35 ಸಾವಿರಕ್ಕಿಂತ ಕಡಿಮೆ.. ಎರಡು ದೈತ್ಯ ಫೋನ್ ಬಿಡುಗಡೆ; ನಿರೀಕ್ಷೆಗೂ ಮೀರಿದ ವೈಶಿಷ್ಟ್ಯಗಳು
ಬ್ಯಾಟರಿ ಮತ್ತು ಚಾರ್ಜ್‌ರ್
ಹಾನರ್ ಮ್ಯಾಜಿಕ್ 7 ಲೈಟ್ ಮೊಬೈಲ್ 6600mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿರಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 66W ವೈರ್ಡ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ಹಾನರ್ ಮ್ಯಾಜಿಕ್ 6 ಲೈಟ್ ಫೋನ್ 5300mAh ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಹಾನರ್ ಮ್ಯಾಜಿಕ್ 7 ಲೈಟ್ ಫೋನ್ ಫಿಂಗರ್‌ಪ್ರಿಂಟ್ ಸಂವೇದಕ ಮತ್ತು ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿರಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.1, ಯುಎಸ್‌ಬಿ ಟೈಪ್ ಸಿ ಫೋರ್ಟ್ ಮತ್ತು ಡ್ಯುಯಲ್ ಸಿಮ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.


Click it and Unblock the Notifications








