ಇನ್ನೊಂದು ಹೊಸ ಡಿವೈಸ್‌ನೊಂದಿಗೆ ಹೋನರ್ ಆಗಮನ

By Shwetha
|

ಹುವಾವೆಯ ಉಪಬ್ರ್ಯಾಂಡ್ ಹೋನರ್ ಎರಡನೇ ವಸಂತಕ್ಕೆ ಕಾಲಿರಿಸಿದ್ದು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಹೆಸರನ್ನು ಸಂಸ್ಥೆ ಗಳಿಸಿಕೊಂಡಿದೆ. ಅದೂ ಅತಿ ಕಡಿಮೆ ಸಮಯದಲ್ಲೇ ಇಂತಹ ಅಭೂತಪೂರ್ವ ಯಶಸ್ಸನ್ನು ಸಂಸ್ಥೆ ಮಾಡಿದೆ. ಗ್ರಾಹಕರೇ ಈ ಬ್ರ್ಯಾಂಡ್ ಅನ್ನು ಬೆಳೆಸಿದ್ದು ಅತಿ ಕಡಿಮೆ ಸಮಯದಲ್ಲೇ ಇಂತಹ ಅಭೂತಪೂರ್ವ ಸಾಧನೆಯನ್ನು ಮಾಡಿರಲು ಕಾರಣ ಡಿವೈಸ್ ಮೇಲೆ ಗ್ರಾಹಕರಿಗಿರುವ ಪ್ರೀತಿಯೇ ಆಗಿದೆ ಎಂಬುದಾಗಿ ಕಂಪೆನಿ ತಿಳಿಸಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ಹೋನರ್ 6 ಪ್ಲಸ್‌ನಿಂದ ಹಿಡಿದು ಹೋನರ್ 8 ರವರೆಗೆ ಈ ಬ್ರ್ಯಾಂಡ್ ಅತ್ಯಪೂರ್ಣ ಮೋಡಿಯನ್ನೇ ಬಳಕೆದಾರರ ಮೇಲೆ ಮಾಡಿದೆ. ಭಾರತಕ್ಕೆ ಹೋನರ್ ಡಿವೈಸ್ ಕಾಲಿಟ್ಟಿದ್ದು ಅಕ್ಟೋಬರ್ 2014 ರಲ್ಲಾಗಿದ್ದು ಫ್ಲಿಪ್‌ಕಾರ್ಟ್‌ನೊಂದಿಗೆ ಒಪ್ಪಂದವನ್ನು ಸಂಸ್ಥೆ ಮಾಡಿತ್ತು. ಗ್ರಾಹಕರೂ ಕೂಡ ಅದ್ವಿತೀಯ ಪ್ರತಿಕ್ರಿಯೆಯನ್ನು ಡಿವೈಸ್ ಕುರಿತಂತೆ ನೀಡಿದ್ದರು. ಇಂದಿನ ಲೇಖನದಲ್ಲಿ ಹೋನರ್ ಕುರಿತ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕೋಣ.

ಓದಿರಿ: ಹೋನರ್ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಏಕೆ ಅತ್ಯದ್ಭುತ

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಹೋನರ್‌ನ ಇನ್ನಷ್ಟ ಡಿವೈಸ್‌ಗಳಾದ ಹೋನರ್ 6 ಪ್ಲಸ್, ಹೋನರ್ 6, ಹೋನರ್ 5ಸಿ, ಹೋನರ್ 4 ಎಕ್ಸ್ ಅಂತೆಯೇ ಇತ್ತೀಚೆಗೆ ಕಾಲಿಡಲಿರುವ ಹೋನರ್ 8 ಡಿವೈಸ್‌ಗಳು ಗ್ರಾಹಕರಿಗೆ ಭರ್ಜರಿಯಾಗಿ ಮೋಡಿಯನ್ನು ಮಾಡಿದೆ. ಹೋನರ್ 8 ಡ್ಯುಯಲ್ ಕ್ಯಾಮೆರಾ ಹೊಂದಿರುವ ಸೂಪರ್ ಫೋನ್ ಎಂದೆನಿಸಿದ್ದು ಇನ್ನೇನು ಮಾರುಕಟ್ಟೆಗೆ ಕಾಲಿಡಲಿದೆ.

ಮಧ್ಯಮ ಕ್ರಮಾಂಕದ ಮಾರುಕಟ್ಟೆ

ಮಧ್ಯಮ ಕ್ರಮಾಂಕದ ಮಾರುಕಟ್ಟೆ

ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಎಂದೆನಿಸಿರುವ ಹೋನರ್ ತನ್ನ ಗುಣಮಟ್ಟ, ಅನ್ವೇಷಣೆ ಮತ್ತು ಕೈಗೆಟಕುವ ಬೆಲೆಯಲ್ಲಿ ಮಧ್ಯಮ ಕ್ರಮಾಂಕದ ಮಾರುಕಟ್ಟೆಯಲ್ಲಿ ಅದ್ವಿತೀಯ ಹೆಸರನ್ನು ಉಂಟುಮಾಡಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಥಮ GNOC

ಪ್ರಥಮ GNOC

ಬೆಂಗಳೂರಿನಲ್ಲಿ ಕಂಪೆನಿ ಗ್ಲೋಬಲ್ ನೆಟ್‌ವರ್ಕ್ ಆಪರೇಶನ್ ಸೆಂಟರ್ (GNOC) ಅನ್ನು ಸ್ಥಾಪನೆ ಮಾಡಿದೆ. ಚೀನಾದ ನಂತರ ಕಂಪೆನಿ ಹೊಂದಿರುವ ಪ್ರಥಮ GNOC ಬೆಂಗಳೂರು ಆಗಿದೆ.

'ಮೇಕ್ ಇನ್ ಇಂಡಿಯಾ' ಯೋಜನೆ

'ಮೇಕ್ ಇನ್ ಇಂಡಿಯಾ' ಯೋಜನೆ

ಹೋನರ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಗಮವನ್ನು ಕೇಂದ್ರೀಕರಿಸಿದ್ದು 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ತನ್ನ ಕೈ ಜೋಡಿಸಿದೆ. ಕಳೆದ ಎರಡು ವರ್ಷಗಳಿಂದ ಹುವಾವೆ ಹೋನರ್ ಬ್ರ್ಯಾಂಡ್‌ನಡಿಯಲ್ಲಿ ಸಾಕಷ್ಟು ಡಿವೈಸ್‌ಗಳನ್ನು ಲಾಂಚ್ ಮಾಡಿದ್ದು ಅದರಲ್ಲೊಂದು ಹೋನರ್ 5ಸಿ ಆಗಿದೆ. ಹೋನರ್ ಸಿರೀಸ್‌ಗಳಲ್ಲಿ ಇದು ಹೆಚ್ಚು ಜನಪ್ರಿಯವಾದ ಡಿವೈಸ್ ಎಂದೆನಿಸಿದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

200 ಸರ್ವೀಸ್ ಸೆಂಟರ್‌

200 ಸರ್ವೀಸ್ ಸೆಂಟರ್‌

ಇಷ್ಟಲ್ಲದೆ ಭಾರತದಲ್ಲಿ ಕಂಪೆನಿ 200 ಸರ್ವೀಸ್ ಸೆಂಟರ್‌ಗಳನ್ನು ಆರಂಭಿಸುವ ಮೂಲಕ ತನ್ನ ಸೇಲ್ಸ್ ಸರ್ವೀಸ್‌ಗಳನ್ನು ಬಲಪಡಿಸುತ್ತಿದೆ. ದೇಶಾದ್ಯಂತ 30 ವಿಶೇಷ ಹುವಾವೆ ಸರ್ವೀಸ್ ಕೇಂದ್ರಗಳನ್ನು ಕಂಪೆನಿ ಹೊಂದಿದೆ.

ಹೆಚ್ಚಿನ ರೀಟೈಲ್ ಔಟ್‌ಲೆಟ್‌

ಹೆಚ್ಚಿನ ರೀಟೈಲ್ ಔಟ್‌ಲೆಟ್‌

2016 ರ ಕೊನೆಯಲ್ಲಿ 50,000 ಕ್ಕಿಂತಲೂ ಹೆಚ್ಚಿನ ರೀಟೈಲ್ ಔಟ್‌ಲೆಟ್‌ಗಳನ್ನು ತಲುಪುವ ಇರಾದೆಯನ್ನು ಕಂಪೆನಿ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಕಂಪೆನಿ 350 + ಡಿಸ್ಟ್ರಿಬ್ಯೂಟರ್‌ಗಳನ್ನು ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Huawei's sub brand Honor has turned two recently and has grabbed the position of one of the most quintessential brands in the Indian smartphone market - all this in a very short span.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X