ಹೋನರ್ ಸ್ಮಾರ್ಟ್‌ಫೋನ್ ಚಿಪ್‌ಸೆಟ್ ಏಕೆ ಅತ್ಯದ್ಭುತ

By Shwetha
|

ಹೋನರ್ ಸ್ಮಾರ್ಟ್‌ಫೋನ್ ಹೊಸದಾಗಿ 5ಸಿ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಇದರ ವಿಶೇಷತೆಗಳು ಮತ್ತು ಫೀಚರ್ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತಿದೆ. ಹುವಾವೆ ಸ್ಪೆಸಿಫಿಕ್ ಆನ್‌ಲೈನ್ ಬ್ರ್ಯಾಂಡ್, ಹೋನರ್ ಸಂಸ್ಥೆಯು ಹೋನರ್ 5ಸಿಯನ್ನು ಲಾಂಚ್ ಮಾಡಿದ್ದು ಇದು ಕಿರಿನ್ 650 ಚಿಪ್‌ಸೆಟ್ ಅನ್ನು ಹೊಂದಿದ್ದು, ರೂ 10,999 ಕ್ಕೆ ಲಭ್ಯವಾಗುತ್ತಿದೆ. ಈ ಬೆಲೆಯಲ್ಲಿ, ಹೋನರ್ 5ಸಿ ಫೀಚರ್‌ಗಳು ಆಕರ್ಷಣೀಯ ಎಂದೆನಿಸಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

ಹೋನರ್ 5ಸಿ ಸ್ಮಾರ್ಟ್‌ಫೋನ್ ಕಿರಿನ್ 650 ಸಿಪಿಯುವನ್ನು ಒಳಗೊಂಡಿದ್ದು ಇದು ಹೆಚ್ಚು ಶಕ್ತಿಶಾಲಿ, ವೇಗವಾದ ಮತ್ತು ಬ್ಯಾಟರಿ ಸಮರ್ಥ ಫೋನ್ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಕಿರಿನ್ 650 ಸಿಪಿಯು ಕುರಿತಾದ ಆಕರ್ಷಕ ಮತ್ತು ವಿಶೇಷವಾದ ಮಾಹಿತಿಯನ್ನು ನೀಡುತ್ತಿದ್ದು ಕೆಳಗಿನ ಸ್ಲೈಡರ್ ನೋಡಿ

ಓದಿರಿ: ಶ್ಯೋಮಿ ರೆಡ್ಮೀ ನೋಟ್ 3 ಯನ್ನು ಹಿಂದಿಕ್ಕಿದ ಹೋನರ್ 5ಸಿ

ಮೆಟಲ್ ಕ್ಲಾಡ್ ಸ್ಮಾರ್ಟ್‌ಫೋನ್ ಹೀಟಿಂಗ್ ಸಮಸ್ಯೆ ಇಲ್ಲ

ಮೆಟಲ್ ಕ್ಲಾಡ್ ಸ್ಮಾರ್ಟ್‌ಫೋನ್ ಹೀಟಿಂಗ್ ಸಮಸ್ಯೆ ಇಲ್ಲ

ರೂ 10,000 - ರೂ 15,000 ದವರೆಗಿನ ಬೆಲೆಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ ಫೋನ್‌ಗಳಲ್ಲಿ ಅದ್ಭುತ ವಿಶೇಷತೆಗಳನ್ನು ನೀಡುತ್ತದೆ. ಆದರೆ ಈ ಹೆಚ್ಚಿನ ಫೋನ್‌ಗಳು ಪ್ಲಾಸ್ಟಿಕ್ ದೇಹವನ್ನು ಪಡೆದುಕೊಂಡಿರುತ್ತದೆ, ಇಲ್ಲವೇ ಆಕರ್ಷಕ ವಿನ್ಯಾಸವನ್ನು ಹೊಂದಿರುವುದಿಲ್ಲ. ಆದರೆ ಹೋನರ್ 5ಸಿ, ಏರ್‌ಕ್ರಾಫ್ಟ್ - ಗ್ರೇಡ್ ಅಲ್ಯುಮಿನಿಯಮ್ ಅಲಾಯ್ ಬಾಡಿಯನ್ನು ಪಡೆದುಕೊಂಡಿದ್ದು, ನೋಡಲು ಸುಂದರವಾಗಿದ್ದು ಬೆಲೆಗೆ ತಕ್ಕುದುದಾಗಿದೆ.

ಅದ್ಭುತ ಕಾರ್ಯಕ್ಷಮತೆ

ಅದ್ಭುತ ಕಾರ್ಯಕ್ಷಮತೆ

ಕಿರಿನ್ 650 ಚಿಪ್‌ಸೆಟ್ FinFET ಪ್ಲಸ್ 16nm ಚಿಪ್ ತಂತ್ರಜ್ಞಾನವನ್ನು ಪಡೆದುಕೊಂಡಿದ್ದು, ಇದೇ ಬೆಲೆಯಲ್ಲೇ ಡಿವೈಸ್ ಅನ್ನು ಅತ್ಯುತ್ತಮ ಎಂದೆನಿಸಿದೆ. ಈ 16 ಎನ್‌ಎಮ್ ಚಿಪ್‌ಸೆಟ್ ಲೈಟಿಂಗ್ ವೇಗವಾದ ಕಾರ್ಯಕ್ಷಮತೆಯನ್ನು ಡಿವೈಸ್‌ಗೆ ನೀಡುತ್ತಿದ್ದು ಹಳೆಯ ಜನರೇಶನ್ 28 ಎನ್ಎಮ್ ಚಿಪ್‌ಸೆಟ್ ಅನ್ನು ಒದಗಿಸುತ್ತಿದೆ. ಕಿರಿನ್ 650 ಗೆ ಧನ್ಯವಾದವನ್ನು ನಾವು ಅರ್ಪಿಸಲೇಬೇಕಾಗಿದ್ದು, ನೀವು ಹೆಚ್ಚುವರಿ ಅಪ್ಲಿಕೇಶನ್‌ಗಳೊಂದಿಗೆ ಕಾರ್ಯನಿರ್ವಹಿಸತ್ತಿದ್ದರೂ 5ಸಿ ಅತ್ಯುತ್ತಮ ಎಂದೆನಿಸಿದೆ.

ಗೇಮಿಂಗ್ ಅನುಭವ

ಗೇಮಿಂಗ್ ಅನುಭವ

ನೀವು ಗೇಮಿಂಗ್ ಅಭಿಮಾನಿ ಎಂದಾದಲ್ಲಿ, ಹೋನರ್ 5ಸಿ ಯನ್ನು ನೀವು ಪರಿಗಣಿಸಲೇಬೇಕಾಗುತ್ತದೆ. ಇದು ಹೆಚ್ಚು ಶಕ್ತಿಯುತ ಮಾಲಿ T830 ಜಿಪಿಯುವನ್ನು ಒದಗಿಸುತ್ತಿದ್ದು ಅದ್ಭುತವಾದ ಗೇಮಿಂಗ್ ಅನುಭವವನ್ನು 100% ಜಿಪಿಯು ಕಾರ್ಯಕ್ಷಮತೆಯೊಂದಿಗೆ ಒದಗಿಸುತ್ತಿದೆ. ಕಿರಿನ್ 650 ಚಾಲಿತ ಹೋನರ್ 5ಸಿ ಸ್ಮಾರ್ಟ್‌ಫೋನ್ ಉತ್ತಮ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ.

ಅದ್ಭುತ ಫೋಟೋಗ್ರಫಿ ಅನುಭವ

ಅದ್ಭುತ ಫೋಟೋಗ್ರಫಿ ಅನುಭವ

ಉತ್ತಮ ಸೆನ್ಸಾರ್ ಹಾಗೂ ಕ್ಯಾಮೆರಾ ವಿಶೇಷತೆಗಳಿದ್ದರೂ ಅದ್ಭುತ ಫೋಟೋ ತೆಗೆಯುವುದು ಕಷ್ಟಾಸಾಧ್ಯವಾಗಿದೆ. ಹೆಚ್ಚು ಶಕ್ತಿಶಾಲಿ ಹಾರ್ಡ್‌ವೇರ್ ಕೂಡ ಇದಕ್ಕೆ ಅಗತ್ಯ. ಹೋನರ್ 5ಸಿ, 13 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಮುಂಭಾಗ ಕ್ಯಾಮೆರಾ 8ಎಮ್‌ಪಿಯಾಗಿದೆ. ಬಿಎಸ್‌ಐ ಸೆನ್ಸಾರ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಹತ್ತು ಭಿನ್ನ ಬ್ಯೂಟಿ ಮೋಡ್‌ಗಳೊಂದಿಗೆ ಬಂದಿದೆ.

ದೀರ್ಘ ಬ್ಯಾಟರಿ ಬಾಳಿಕೆ

ದೀರ್ಘ ಬ್ಯಾಟರಿ ಬಾಳಿಕೆ

ಕಿರಿನ್ 650 ಸಿಪಿಯು ಅದ್ಭುತ ಚಿಪ್‌ಸೆಟ್ ಎಂದೆನಿಸಿದ್ದು ಬಳಕೆದಾರರ ಡಿವೈಸ್‌ನಲ್ಲಿ ಬ್ಯಾಟರಿಯನ್ನು ಹೇಗೆ ಉಳಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಹೋನರ್ 5ಸಿ ಅದ್ಭುತ ಬ್ಯಾಟರಿ ಜೀವನವನ್ನು ಒದಗಿಸುತ್ತಿದ್ದು, ಇದರ 3000mAh ಬ್ಯಾಟರಿಯನ್ನು ನೀಡುತ್ತಿದೆ. ಇದೇ ಬೆಲೆಯಲ್ಲಿ ಇತರ ಫೋನ್‌ಗಳಲ್ಲಿ ಬ್ಯಾಟರಿ ದೀರ್ಘತೆಯನ್ನು ನಾವು ಎದುರು ನೋಡುವುದು ಕಷ್ಟವಾಗಿದೆ.

Best Mobiles in India

English summary
Honor 5C smartphone with Kirin 650 chipset, for a price of Rs 10,999. At this price point, the Honor 5C brings features of a high end smartphone, which make it quite an impressive buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X