ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

|

ಇಂದು ಸ್ಮಾರ್ಟ್‌ಫೋನ್‌ಗಳಲ್ಲಿ ನೂತನ ತಂತ್ರಜ್ಞಾನದ ಆವಿಷ್ಕಾರ ತುಂಬಾ ವೇಗವಾಗಿ ಸಾಗುತ್ತಿದ್ದು, ಹೆಚ್ಚಾಗಿ ಅಂಚು ರಹಿತ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇಂತಹ ಅಂಚು ರಹಿತ ಡಿಸ್‌ಪ್ಲೇಯನ್ನು ಮೊದಲು ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಆದರೆ ಇದೀಗ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಸಹ ಅಂಚು ರಹಿತ ಡಿಸ್‌ಪ್ಲೇಯನ್ನು ನೀಡುತ್ತಿದ್ದಾರೆ. ಸ್ಮಾರ್ಟ್‌ಫೋನ್ ಉದ್ಯಮವಿಂದು 'ಸಂಪೂರ್ಣ ಸ್ಕ್ರೀನ್' ಕಾನ್ಸೆಪ್ಟ್ ಅನ್ನು ಹೊಂದಿದೆ.

ಹಾನರ್ ಕಂಪನಿಯು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ, ಹೈ ಎಂಡ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳವರೆಗೂ ಫೀಚರ್ಸ್ ಮತ್ತು ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ಇದೀಗ 'ಹಾನರ್ ವ್ಯೂವ್ 20', ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಕಂಪನಿ ಮುಂದಾಗಿದ್ದು, ಇದೇ ಜನವರಿ 29 ಕ್ಕೆ ಭಾರತದಲ್ಲಿ ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟಗೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್ ನೀವು ಊಹಿಸಲಾಗದಂತಹ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ. ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನಿನ ಮೊದಲ ನೋಟದಲ್ಲಿಯೇ ಗ್ರಾಹಕರನ್ನು ಸೆಳೆಯುವಂತಹ ಆಕರ್ಷಣೆಯ ರಚನೆ ಹೊಂದಿದ್ದು, ಹಾಗಾದರೇ ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್‌ ಹೊಂದಿರುವ ಪ್ರಮುಖ ಆಕರ್ಷಕ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ವಿಶ್ವದ ಮೊದಲ ಆಲ್‌ ಸ್ಕ್ರೀನ್
ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್‌ ಮೂಲಕ ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿ ''ಆಲ್ ಸ್ಕ್ರೀನ್'' ಡಿಸ್‌ಪ್ಲೇಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 18: 9 ಆಕಾರ ಅನುಪಾತವುವನ್ನು ಹೊಂದಿದ್ದು, ಶೇ.100% ಫೂರ್ಣ ಡಿಸ್‌ಪ್ಲೇ ವೀಕ್ಷಣೆಗೆ ಸಹಕರಿಸುತ್ತದೆ. ಈ ಸಂಪೂರ್ಣ ಸ್ಕ್ರೀನ್‌ನಲ್ಲಿ ಮಲ್ಟಿಮೀಡಿಯಾ ಬಳಕೆಯ ಅನುಭವ ಅತ್ಯುತ್ತಮವಾಗಿರುತ್ತದೆ. ಇದರಲ್ಲಿ ಹೈ ಡೆಫಿನಿಷನ್ ವೀಡಿಯೋಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ಆರಾಮವಾಗಿ ವೀಕ್ಷಿಸಬಹುದಾಗಿದ್ದು, ಗೇಮ್ಸ್ ಆಡುವಾಗ ಆಟದ ರೋಮಾಚಂನದ ಅನುಭವ ಪಡೆಯಬಹುದು.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

V ಆಕಾರದ ಆಕರ್ಷಣೆ
ಹಾನರ್ ಬಿಡುಗಡೆ ಮಾಡಿರುವ ನೂತನ ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನಿನ ಬಾಹ್ಯ ನೋಟ ಅತ್ಯಂತ ಆಕರ್ಷಕವಾಗಿದ್ದು, ಇದರ ರಚನೆ ಸಂಪೂರ್ಣ ಗ್ಲಾಸ್ ಮತ್ತು ಮೆಟಲ್‌ನಿಂದ ಕೂಡಿದೆ. ಇದರ ರಚನೆಯನ್ನು ಮಲೇಶಿಯಾದ ಖ್ಯಾತ ಕಲಾವಿದ ರೆಡ್ ಹಾಂಗ್ ಅವರು ಹಾನರ್‌ನ ರಿಸೈಕಲ್ ಮಾಡಲಾಗಿದ್ದ ಗ್ಲಾಸ್‌ಗಳನ್ನು ಮರುಬಳಸಿಕೊಂಡು ಈ ಸ್ಮಾರ್ಟ್‌ಫೋನಿಗೆ ಗ್ಲಾಸಿ ಲುಕ್ ಕೊಟ್ಟಿದ್ದಾರೆ. ಇನ್ನೂ ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನಿನ ಮುಖ್ಯ ಆಕರ್ಷಣೆಯೆಂದರೇ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವಿ ಆಕಾರದ ಲೈಟ್ ರಿಫ್ಲೇಕ್ಷನ್ ನೀಡಿರುವುದು, ಒಟ್ಟು ಎಂಟು ಶೈನಿಂಗ್ ಲೇಯರ್ ಗಳನ್ನು ನೀಡಲಾಗಿದ್ದು, ಇವು ಸ್ಮಾರ್ಟ್‌ಫೋನ್‌ ಅನ್ನು ಹೊರಳಾಡಿಸುವಾಗ ವಿ ಆಕಾರದಲ್ಲಿ ಲೈಟ್ ಹೊಳೆದಂತಹ ಲುಕ್ ಕಾಣಿಸಿಕೊಳ್ಳಲಿದೆ. ಇದರೊಂದಿಗೆ ಮುಂಭಾಗದಲ್ಲಿ ಅಂಚು ಇಲ್ಲದ ಡಿಸ್‌ಪ್ಲೇ ಇರುವುದು ಪೋನ್‌ ಸೌಂದರ್ಯ ಹೆಚ್ಚಿಸಿದೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

48 ಮೆಗಾಪಿಕ್ಸಲ್‌ DSLR ಮಾದರಿ ಕ್ಯಾಮೆರಾ
ಮೊದಲಿನಿಂದಲೂ ಉತ್ತಮ ಕ್ಯಾಮೆರಾ ಫಲಿತಾಂಶಕ್ಕೆ ಹೆಸರಾಗಿರುವ ಹಾನರ್ ತನ್ನ ವ್ಯೂವ್ 20 ಸ್ಮಾರ್ಟ್‌ಫೋನ್‌ ಮೂಲಕ ವಿಶ್ವ ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ಹೊಸ ಕ್ರಾಂತಿ ಮಾಡಲಿದೆ. ಸೋನಿಯ IMX586 ಮತ್ತು CMOS ಚಿತ್ರ ಸೆನ್ಸಾರ್ ಒಳಗೊಂಡಿರುವ 48ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಪರಿಚಯಿಸಲಿದೆ. AI ಕೃತಕ ಬುದ್ದಿಮತ್ತೆ ಸಹಾಯದಿಂದ ರಿಯಲ್ ಟೈಮ್‌ನಲ್ಲಿ ಸರಿಯಾಗಿ ಛಾಯಾಚಿತ್ರ ಸೆರೆಹಿಡಿಯಬಹುದು.

ಮಂದಬೆಳಕಿನಲ್ಲಿ ಸಹ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದ್ದು, ಕ್ಯಾಮೆರಾದೊಂದಿಗೆ ಪ್ರಾಥಮಿಕ ಸೆನ್ಸಾರ್ ಮತ್ತು 3D ಟೈಮ್ ಆಫ್ ಫೈಟ್ ಎಂಬ ಎರಡು ಇಮೇಜ್ ಸೆನ್ಸಾರ್ ನೀಡಲಾಗಿರುವುದು ಈ ಸ್ಮಾರ್ಟ್‌ಫೋನಿನ ಸ್ಪೆಷಲ್‌ಗಳ್ಲೊಂದು. ಇದರೊಂದಿಗೆ ಉತ್ತಮ ಫೋಟೋ ಸೆರೆಹಿಡಿಯಲು EIS ಮತ್ತು HRD ಮೋಡ್‌ ಆಟೋಮ್ಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ. ಇನ್ನೂ ವೀಡಿಯೋ ರೇಕಾರ್ಡಿಂಗ್ ಸಹ ಅತ್ಯುತ್ತಮವಾಗಿದ್ದು, 960fps ಸಾಮರ್ಥ್ಯದಲ್ಲಿ ಸ್ಲೋ ಮೋಷನ್ ವೀಡಿಯೋ ಆಯ್ಕೆ ನೀಡಿದ್ದಾರೆ. ವೀಡಿಯೋ ಔಟ್‌ಪುಟ್ ಅತ್ಯದ್ಭುತವಾಗಿ ಮೂಡಿಬರುತ್ತವೆ. ಒಟ್ಟಾರೇ ಡಿಎಸ್‌ಎಲ್ಆರ್ ಕ್ಯಾಮೆರಾ ನಂತಹ ಗುಣಮಟ್ಟ ಈ ಸ್ಮಾರ್ಟ್‌ಫೋನಿನಲ್ಲಿದೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ಅತ್ಯುತ್ತಮ ಕಿರಿನ್ 980 ಪ್ರೊಸೆಸರ್
ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನಿನಲ್ಲಿ ಅತ್ಯುತ್ತಮವಾದ ವಿಶ್ವದ ಮೊದಲ 7nm 'ಕಿರಿನ್ 980 ಪ್ರೊಸೆಸರ್' ಅನ್ನು ನೀಡಿರುವುದು ಈ ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷ. ಇದರಲ್ಲಿ ಸ್ನಾಪ್‌ಡ್ರಾಗನ್ 855 ಸಿಪಿಯು ಸಾಮರ್ಥ್ಯ ಇರುವುದರಿಂದ ಅಡೆತಡೆ ಇಲ್ಲದ ಕಾರ್ಯದಕ್ಷತೆ ಇರಲಿದೆ. 6GB ಮತ್ತು 8GB RAM LPDDR4X RAM ವೇರಿಯಂಟ್ ನೊಂದಿಗೆ 128GB ಮತ್ತು 256GB ಆಂತರಿಕ ಸಾಮರ್ಥ್ಯವನ್ನು ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್ ಹೊಂದಿರಲಿದೆ ಮತ್ತು ಅತೀ ನೂತನ ಆಂಡ್ರಾಯ್ಡ್ 9.0 + Magic UI2.0.1 ನೀಡಿರುವುದು ಪೋನಿಗೆ ವೇಗ ತಂದುಕೊಟ್ಟಿದೆ. ಇದರೊಂದಿಗೆ ನೈನ್ ಕೂಲಿಂಗ್ ಟೆಕ್ನಾಲಜಿ ಇರುವುದರಿಂದ ಸ್ಮಾರ್ಟ್‌ಫೋನ್‌ ಬಿಸಿ ಆಗುವುದಿಲ್ಲ ಮತ್ತು ಐ ಕಂಫರ್ಟ್ ಮೋಡ್‌, ಬ್ಯಾಟರಿ ಬ್ಯಾಲೆನ್ಸ್ ಮೋಡ್‌, ಮತ್ತು ಸ್ಟೋರೆಜ್ ಕ್ಲಿನಿಂಗ್ ಆಯ್ಕೆಗಳನ್ನು ಇರಲಿವೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ಎಂಜಾಯ್ ಗೇಮ್ಸ್
ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್‌ನಲ್ಲಿ ಗೇಮ್ಸ್ ಆಡುವುದಕ್ಕಾಗಿಯೇ ಅತ್ಯುತ್ತಮ ಫ್ಲಾಟ್‌ಫ್ಲಾರ್ಮ ನೀಡಲಾಗಿದ್ದು, ಗೇಮ್ಸ್ ಅನ್ನು ಸಖತ್ ಎಂಜಾಯ್ ಮಾಡಿಕೊಂಡು ಮಾಡುವ ಅನುಭವ ದೊರೆಯಲಿದೆ. ಹಾನರ್‌ ವ್ಯೂವ್ 20 ಸ್ಮಾರ್ಟ್‌ಫೋನಿನಲ್ಲಿ ನೀಡಿರುವ ಸಂಪೂರ್ಣ ಸ್ಕ್ರೀನ್ ಮತ್ತು Mali-G76 GPU, ಜೊತೆಗೆ ನೂತನ GPU Turbo 2.0 technology. ಗೇಮ್ಸ್‌ ಆಡುವಾಗ ರೋಚಕ ಅನುಭವ ನೀಡುತ್ತದೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ಉತ್ತಮ ನೆಟವರ್ಕ್ ಜಾಲ
ಮುಂದಿನ ಪೀಳಿಗೆಯ ತಂತ್ರಜ್ಞಾನ ಕಂಡು ಕೊಂಡಿದ್ದು, ಹಾನರ್‌ವ್ಯೂವ್ 20 ಸ್ಮಾರ್ಟ್‌ಫೋನಿನ ನೆಟವರ್ಕ್‌, ಕನೆಕ್ಟಿವಿಟಿ ಮತ್ತು ಇಂಟರ್‌ನೆಟ್ ಬಳಸಲು ಅತ್ಯುತ್ತಮವಾಗಿದೆ. ಯೂಟೂಬ್, ಬ್ರೌಸಿಂಗ್ ವೆಬ್‌ಪೇಜ್‌, ಆನ್‌ಲೈನ್‌ ವೀಡಿಯೋ ವೀಕ್ಷಣೆ, ಆನ್‌ಲೈನ್‌ ಲೈವ್ ಗೇಮ್ಸ್‌ ಇಂತಹ ಕೆಲಸಗಳನ್ನು ಅಡೆತಡೆ ಇಲ್ಲದೇ ಸರಳವಾಗಿ ಬಳಸುವಂತಹ ಉತ್ತಮ ಲಿಂಕ್ ಟರ್ಬೊ ನೆಟವರ್ಕ್ ಜಾಲ ಹೊಂದಿದೆ.

ಮೊದಲ ನೋಟದಲ್ಲಿಯೇ ಮನಸೆಳೆಯುವ 'ಹಾನರ್ ವ್ಯೂವ್ 20' ಸ್ಮಾರ್ಟ್‌ಫೋನ್!

ಪವರ್‌ಫುಲ್ ಬ್ಯಾಟರಿ ಬಾಳಕೆ
ಹಾನರ್ ವ್ಯೂವ್ 20 ಸ್ಮಾರ್ಟ್‌ಫೋನ್‌ 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವುದು ಇದರ ಒಂದು ಹೆಗ್ಗಳಿಕೆ. ಇದರೊಟ್ಟಿಗೆ 5V 4A ಫಾಸ್ಟ್‌ ಚಾರ್ಜಿಂಗ ಸೌಲಭ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿದ್ದು, ಇದರ ಸಹಾಯದಿಂದ ಸ್ಮಾರ್ಟ್‌ಫೋನ್‌ ಕೆವಲ ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜಿಂಗ್ ಆಗುವುದು. ಬ್ಯಾಟರಿ ಬಾಳಿಕೆ ಸಾಮರ್ಥ್ಯವು ಎರಡು ದಿನಗಳವರೆಗೆ ಬರಲಿದೆ.

Best Mobiles in India

English summary
The Honor View 20 is Honor’s first flagship smartphone for 2019, and similar to its past phones, it comes with high-end specs at a relatively affordable price tag.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X