ಬರಲಿದೆ ಹಾನರ್ 'ವ್ಯಿವ್'..ಹೆಚ್ಚಲಿದೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ಯೂ!

|

ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿಯೇ ಅತೀ ಮುಂಚೂಣಿಯಲ್ಲಿರುವ ಹುವಾಯಿ ಸಂಸ್ಥೆಯು ತನ್ನ ಹಾನರ್ ಸ್ಮಾರ್ಟ್‌ಫೋನ್ ಮಾದರಿಗಳು ಮೂಲಕ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೆಸರುವಾಸಿಯಾಗಿದೆ. ಇದೀಗ ಜನಪ್ರಿಯ ಹಾನರ್‌ ಸಂಸ್ಥೆಯ ಹೊಸ ವಿಷಯ ಏನೆಂದರೇ, ಸಂಸ್ಥೆಯು ಸ್ಮಾರ್ಟ್‌ಫೋನ್‌ ಪ್ರೇಮಿಗಳಿಗೆ ಸಿಹಿಸುದ್ದಿಯೊಂದನ್ನು ಕೊಡಲು ಸಜ್ಜಾಗಿದೆ.!

ಬರಲಿದೆ ಹಾನರ್ 'ವ್ಯಿವ್'..ಹೆಚ್ಚಲಿದೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ಯೂ!

ಹಾನರ್ ಇದುವರೆಗೂ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಿಲ್ಲೊಂದು ಸ್ಪೇಷಲ್ ಫೀಚರ್‌ಅನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಬಂದಿದೆ. ಅದರ ಮುಂದುವರಿದ ಭಾಗವಾಗಿ ಇದೀಗ ಮತ್ತೊಂದು ಅತ್ಯುತ್ತಮ ಫೀಚರ್‌ನೊಂದಿದೆ 'ಹಾನರ ವ್ಯಿವ್ 20' ಸ್ಮಾರ್ಟ್‌ಫೋನ್ ಅನ್ನು ಇದೇ ತಿಂಗಳ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ. ಇದು ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿದೆ.

ಬರಲಿದೆ ಹಾನರ್ 'ವ್ಯಿವ್'..ಹೆಚ್ಚಲಿದೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕ್ಯೂ!

ಹೌದು, ಹಾನರ್ ಬಿಡುಗಡೆ ಮಾಡುತ್ತಿರುವ ಈ ಹೊಸ ಸ್ಮಾರ್ಟ್‌ಫೋನ್ 'ಹಾನರ್ ವ್ಯಿವ್ 20' ಬ್ಯಾಕ್‌ಸೈಡ್‌ನಲ್ಲಿ 48 ಮೆಗಾಪಿಕ್ಸಲ್ ಕ್ಯಾಮರಾವನ್ನು ಹೊಂದಿರಲಿದೆ. ಇದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹಾಗಾದರೇ ಈ ಸ್ಮಾರ್ಟ್‌ಫೋನಿನ್ ಹೊಂದಿರುವ ಇನ್ನಿತರೇ ಗುಣವೈಶಿಷ್ಟತೆಗಳನ್ನು ಈ ಕೆಳಗೆ ನೀಡಲಾಗಿದೆ.

ಪ್ರೀ ಬುಕ್ಕಿಂಗ್

ಪ್ರೀ ಬುಕ್ಕಿಂಗ್

ಹಾನರ್ ವ್ಯಿವ್ ಫೋನಿನ್ ಪ್ರಮುಖ ಆಕರ್ಷಣೆಯೇ ಇದರ ಕ್ಯಾಮರಾ ಆಗಿದ್ದು, ಹಿಂಬಾಗದಲ್ಲಿ ಫ್ಲ್ಯಾಶ್‌ನೊಂದಿಗೆ 48 ಮೆಗಾಪಿಕ್ಸಲ್ ಕ್ಯಾಮರಾವನ್ನು ಹೊಂದಿದ್ದು, ಸೆಲ್ಫೀಗಾಗಿ 25 ಮೆಗಾಪಿಕ್ಸಲ್ ಕ್ಯಾಮರಾವನ್ನು ನೀಡಲಾಗಿದೆ. ಇದರೊಂದಿಗೆ 8000x6000 ಪಿಕ್ಸಲ್ ಫೋಟೋ ರೆಸಲ್ಯೂಶನ್ ಸಾಮರ್ಥ್ಯದ ಇದ್ದು, ಜತೆಗೆ ಡಿಜಿಟಲ್ ಝೂಮ್, ಫೇಸ್ ಡಿಟಕ್ಷನ್, ಆಟೋ ಫೋಕಸ್ ಹೊಂದಿದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಹಾನರ್‌ನ ಈ ಹೊಸ ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಫುಲ್ ಹೆಚ್‌ಡಿ ಪರದೆ ಇರಲಿದೆ. ಇದರೊಂದಿಗೆ 19.5:9ರ ಅನುಪಾತದಲ್ಲಿ 1080x2310 ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಸ್ಕ್ರೀನ್ ನೀಡಲಾಗಿದೆ. ಫೋನಿನ ಹೊರಭಾಗದಲ್ಲಿ ನಾಲ್ಕು ಮೂಲೆ ರೌಂಡೆಡ್ ಕರ್ವ ಇರುವುದು ಸ್ಮಾರ್ಟ್‌ಫೋನಿಗೆ ಸ್ಮಾರ್ಟ್‌ ಅಂದ ತಂದುಕೊಟ್ಟಿದೆ.

ತಾಂತ್ರಿಕ ವಿಶೇಷತೆಗಳು

ತಾಂತ್ರಿಕ ವಿಶೇಷತೆಗಳು

ಆಂಡ್ರಾಯ್ಡ್ 9 ನೊಂದಿಗೆ, ಆಕ್ಟಾಕೋರ್ ಹಿಸಿಲಿಕೊನ್ ಕಿರಿನ್ 980 ಉತ್ತಮ ಪ್ರೊಸೆಸ್ಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ 6GB/8GB RAM ಆಯ್ಕೆ ನೀಡಲಾಗಿದ್ದು, 128GB/256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಆದರೆ ಬಾಹ್ಯ ಮೆಮೋರಿ ಸಂಗ್ರಹಕ್ಕೆ ಅವಕಾಶ ನೀಡಿಲ್ಲ ಎನ್ನುವುದು ಈ ಫೋನಿನ್ ನಕಾರಾತ್ಮಕ ಅಂಶ ಎನ್ನಬಹುದಾಗಿದೆ.

ಇತರೆ ವೈಶಿಷ್ಟತೆಗಳು

ಇತರೆ ವೈಶಿಷ್ಟತೆಗಳು

ಈ ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಪವರಫುಲ್ ಬ್ಯಾಟರಿ ಹೊಂದಿರುವುದು ಮತ್ತು ಇದು ಹೊರತೆಗೆಯಲು ಅಸಾಧ್ಯವಾಗಿದೆ. ಫಾಸ್ಟ್ ಚಾರ್ಜಿಂಗ್‌ ಸೌಲಭ್ಯ ಹೊಂದಿದೆ. ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ ಗ್ರಾಹಕರಿಗೆ ದೊರೆಯಲಿದೆ.

Best Mobiles in India

English summary
Honor View20 pre-order page live on company's website. The company is offering all consumers who pre-order a complementary pair of Honor Sport BT earphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X