ನಿಮ್ಮ ಜೆಟ್ ಬ್ಲ್ಯಾಕ್ ಐಫೋನ್ 7 ಗೀರಾಗದಂತೆ ರಕ್ಷಿಸುವುದೇಗೆ?

Written By:

ನೇರವಾಗಿ ಹೇಳಿಬಿಡುತ್ತೇನೆ, ಲಭ್ಯವಿರುವ ಐದು ಬಣ್ಣಗಳಲ್ಲಿ, ಜೆಟ್ ಬ್ಲ್ಯಾಕ್ ಬಣ್ಣದ ಐಫೋನ್ 7 ಅಥವಾ ಐಫೋನ್ 7 ಪ್ಲಸ್ ಅತ್ಯುತ್ತಮವಾಗಿದೆ.

ನಿಮ್ಮ ಜೆಟ್ ಬ್ಲ್ಯಾಕ್ ಐಫೋನ್ 7 ಗೀರಾಗದಂತೆ ರಕ್ಷಿಸುವುದೇಗೆ?

ಓದಿರಿ: ಆನ್‌ಲೈನ್ ಶಾಪಿಂಗ್ ಹಬ್ಬದಲ್ಲಿ 100 ಕೋಟಿ ಆದಾಯ ಗಳಿಸಿದ ಲೀಕೊ

ಬೇರೆ ಬಣ್ಣಗಳು ಚೆನ್ನಾಗಿಲ್ಲ ಎಂದಿದರ ಅರ್ಥವಲ್ಲ, ಆದರೆ ಹೊಳೆಯುವ ಕಪ್ಪು ಬಣ್ಣದ ಫೋನ್ ಚೆನ್ನಾಗಿ ಕಾಣುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೆಟ್ ಬ್ಲ್ಯಾಕ್ ಆವೃತ್ತಿಯಲ್ಲಿ ಕಷ್ಟಗಳು!

ಜೆಟ್ ಬ್ಲ್ಯಾಕ್ ಆವೃತ್ತಿಯಲ್ಲಿ ಕಷ್ಟಗಳು!

ಜೆಟ್ ಬ್ಲ್ಯಾಕ್ ಆವೃತ್ತಿಯಲ್ಲಿ ಕೆಲವು ತೊಂದರೆಗಳೂ ಇವೆ. ಐಫೋನ್ 7 ವೆಬ್ ಪುಟದಲ್ಲಿ (ಕಂಪನಿಯ ಅಧಿಕೃತ ವೆಬ್ ಪುಟ) ಕೆಳಗೆ ಸಣ್ಣ ಅಕ್ಷರಗಳಲ್ಲಿ "ಜೆಟ್ ಬ್ಲ್ಯಾಕ್ ಐಫೋನ್ 7 ಫೋನಿನ ಅತ್ಯುತ್ತಮ ಗ್ಲಾಸ್ ಫಿನಿಶ್ ಅನ್ನು ಒಂಭತ್ತು ಹಂತಗಳ ಅನೊಡೈಝೇಷನ್ ಮತ್ತು ಪಾಲಿಶಿಂಗ್ ಕ್ರಿಯೆಗಳಿಂದ ಸಾಧಿಸಲಾಗಿದೆ. ಇದರ ಮೇಲ್ಮೈ ಉಳಿದ ಅನೊಡೈಝ್ಡ್ ಆ್ಯಪಲ್ ಉತ್ಪನ್ನಗಳಂತೆಯೇ ಗಟ್ಟಿಮುಟ್ಟಾಗಿದೆ. ಹಾಗಾಗ್ಯೂ ಇದರ ಹೊಳೆಯುವಿಕೆಯ ಕಾರಣದಿಂದ ಉಪಯೋಗಿಸುವ ಕಾಲ ಹೆಚ್ಚಿದಂತೆ ಸಣ್ಣ ಸಣ್ಣ ಗೀರುಗಳನ್ನು ನೀವು ಕಾಣಬಹುದು" ಎಂದು ಬರೆದಿದ್ದಾರೆ.

ಗೀರು ತಡೆಯಲು ಏನು ಮಾಡಬೇಕು?

ಗೀರು ತಡೆಯಲು ಏನು ಮಾಡಬೇಕು?

ಚಿಂತೆ ಬೇಡ. ನಿಮ್ಮ ಹೊಸ ಐಫೋನ್ ಗೀರಾಗದಂತೆ ತಡೆಯಲು ದಾರಿ ಇದೆ. ಮಾಮೂಲಿ ಕವರ್ ಕೇಸ್ ಉಪಯೋಗಿಸುವ ಬಗ್ಗೆ ನಾವು ಹೇಳುತ್ತಿಲ್ಲ.

ಜೆಟ್ ಬ್ಲ್ಯಾಕ್ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಫೋನುಗಳು ಗೀರಾಗದಂತೆ ತಡೆಯುವ ದಾರಿ ಇಲ್ಲಿದೆ ನೋಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಿಕ್ವಿಡ್ ಸ್ಕ್ರ್ಯಾಚ್ ಪ್ರೊಟೆಕ್ಟರ್ ಬಳಸಿ.

ಲಿಕ್ವಿಡ್ ಸ್ಕ್ರ್ಯಾಚ್ ಪ್ರೊಟೆಕ್ಟರ್ ಬಳಸಿ.

ನ್ಯಾನೋ ತಂತ್ರಜ್ಞಾನಕ್ಕೆ ಧನ್ಯವಾದ, ಈಗ ನಿಮ್ಮ ಜೆಟ್ ಬ್ಲ್ಯಾಕ್ ಐಫೋನನ್ನು ಗೀರಾಗುವುದರಿಂದ ಬಚಾವು ಮಾಡಬಹುದು. ನೀವು ಮಾಡಬೇಕಾದ ಕೆಲಸವೆಂದರೆ ಸ್ಕ್ರ್ಯಾಚ್ ರೆಸೆಸ್ಟೆಂಟ್ ಸ್ಪ್ರೇ ಅನ್ನು ಖರೀದಿಸುವುದು. ಈ ಸ್ಪ್ರೇ ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಂಡು ನಿಮ್ಮ ಫೋನಿನ ಮೇಲೊಂದು ಪರದೆಯನ್ನು ನಿರ್ಮಿಸುತ್ತದೆ. ಸ್ಪ್ರೇ ಅನ್ನು ಫೋನಿನ ಮೇಲೆ ಬಳಸಿ. ಈಗ ನೋಡಿ ನಿಮ್ಮ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಫೋನುಗಳು ಗೀರಾಗುವುದಿಲ್ಲ! ಈ ಸ್ಪ್ರೇ ಬಳಸುವುದರಿಂದ ನಿಮ್ಮ ಫೋನಿನ ತೂಕವೇನೂ ಹೆಚ್ಚುವುದಿಲ್ಲ ಎನ್ನುವುದನ್ನು ನೆನಪಿಡಿ.

nanostate.in ವೆಬ್ ಪುಟಕ್ಕೆ ಭೇಟಿ ಕೊಟ್ಟು ಸ್ಕ್ರ್ಯಾಚ್ ರೆಸೆಸ್ಟೆಂಟ್ ಸ್ಪ್ರೇ ಅನ್ನು ಖರೀದಿಸಬಹುದು.

ಅಥವಾ ಸುಮ್ಮನೆ ಒಂದು ಕೇಸ್ ಖರೀದಿಸಿ.

ಅಥವಾ ಸುಮ್ಮನೆ ಒಂದು ಕೇಸ್ ಖರೀದಿಸಿ.

ಮೇಲೆ ತಿಳಿಸಿದ ಸ್ಪ್ರೇ ಕೊಳ್ಳಲು ನಿಮಗೆ ಮನಸ್ಸಿಲ್ಲದಿದ್ದರೆ, ಎಂದಿನಂತೆ ಒಂದು ಸರಳ ಕೇಸ್ ತೆಗೆದುಕೊಂಡು ನಿಮ್ಮ ಐಫೋನ್ ಗೀರಾಗುವುದನ್ನು ತಡೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜೆಟ್ ಬ್ಲ್ಯಾಕ್ ಫೋನನ್ನು ತೆಗೆದುಕೊಳ್ಳಬೇಕಾ?

ಜೆಟ್ ಬ್ಲ್ಯಾಕ್ ಫೋನನ್ನು ತೆಗೆದುಕೊಳ್ಳಬೇಕಾ?

ಫೋನಿನ ಮೇಲೆ ಒಂದೂ ಗೀರಿರಬಾರದು ಎನ್ನುವವರು ನೀವಾಗಿದ್ದರೆ ಜೆಟ್ ಬ್ಲ್ಯಾಕ್ ಫೋನನ್ನು ತೆಗೆದುಕೊಳ್ಳಬೇಡಿ ಎನ್ನುವುದೇ ನಮ್ಮ ಸಲಹೆ. ಆದರೆ, ಮೇಲಿನ ಸಲಹೆಗಳನ್ನು ಪಾಲಿಸಿದರೆ, ನಿಮ್ಮ ಐಫೋನ್ ಗೀರಾಗುವುದನ್ನು ತಕ್ಕಮಟ್ಟಿಗೆ ತಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Let me get this straight out of the way, as far as the looks go, the Jet Black version of the iPhone 7 or the iPhone 7 Plus is the best among the five colour variants.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot