Subscribe to Gizbot

ಆನ್‌ಲೈನ್ ಶಾಪಿಂಗ್ ಹಬ್ಬದಲ್ಲಿ 100 ಕೋಟಿ ಆದಾಯ ಗಳಿಸಿದ ಲೀಕೊ

Written By:

ಜಾಗತಿಕ ಇಂಟರ್ನೆಟ್ ಮತ್ತು ತಂತ್ರಜ್ಞಾನ ದಿಗ್ಗಜ ಲೀಕೊ ಹೆಚ್ಚಿನ ಫೋನ್ ಬಳಕೆದಾರರ ಮನದಲ್ಲಿ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಎಪಿಕ್ 919 ಶಾಪಿಂಗ್ ಮೇಳದಲ್ಲಿ ಲೀಕೊ ತನ್ನ ಅತ್ಯುತ್ತಮ ಉತ್ಪನ್ನಗಳ ನಿಖರ ಮಾಹಿತಿಯನ್ನು ಬಳಕೆದಾರರಿಗೆ ನೀಡಿದೆ. ಅತಿ ದೊಡ್ಡ ಆನ್‌ಲೈನ್ ಶಾಪಿಂಗ್ ಮೇಳವನ್ನು ಭಾರತದಲ್ಲಿ ಕಂಪೆನಿ ಕೈಗೊಂಡಿದ್ದು ಸಪ್ಟೆಂಬರ್ 19 ಕ್ಕೆ ಇದು ಸಂಭವಿಸಿದ್ದು ತದನಂತರ 24 ಗಂಟೆಗಳಿಗೆ ಇದನ್ನು ವಿಸ್ತರಿಸಲಾಗಿತ್ತು.

ಓದಿರಿ: ಭಾರತೀಯ ಬಳಕೆದಾರರ ಅಚ್ಚುಮೆಚ್ಚಿನ ಫೋನ್ ಆದ ಲೀಕೊ

ಅಂತಿಮವಾಗಿ ಲೀಕೊ 70,000 + ಸೂಪರ್ ಫೋನ್‌ಗಳು, 2000 + ಸೂಪರ್ ಟಿವಿಗಳು ಮತ್ತು 20,000 ಆಕ್ಸೆಸರೀಸ್‌ಗಳನ್ನು ಮಾರಾಟ ಮಾಡುವುದರ ಮೂಲಕ ಹೊಸ ದಾಖಲೆ ಮಾರಾಟವನ್ನೇ ಸೃಷ್ಟಿಸಿತ್ತು. ಶಾಪಿಂಗ್ ಹಬ್ಬದಲ್ಲಿ 100 ಕೋಟಿ ಆದಾಯವನ್ನು ಸಾಧಿಸುವ ಇಚ್ಛೆಯನ್ನು ಲೀಕೊ ಹೊಂದಿತ್ತು. ಅದರಂತೆಯೇ ಕಂಪೆನಿ ಸಾಧಿಸಿತ್ತು.

ಓದಿರಿ: ಲೀಕೊ ಲಿ ಮಿಲಿಯನ್ ಜಾಯ್ ಆಫರ್ಸ್ ವಿಶೇಷತೆ ಏನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆನ್‌ಲೈನ್ ಸೇಲ್ಸ್ ಫೆಸ್ಟಿವಲ್

ಆನ್‌ಲೈನ್ ಸೇಲ್ಸ್ ಫೆಸ್ಟಿವಲ್

ಲೀಕೊ ಇಂಡಿಯಾದ ಕಂಪೆನಿಯ ಸಿಒಒ ಅತುಲ್ ಜೈನ್ ಹೇಳುವಂತೆ, 919 ಲೀಕೊದ ಅತಿದೊಡ್ಡ ಆನ್‌ಲೈನ್ ಸೇಲ್ಸ್ ಫೆಸ್ಟಿವಲ್ ಎಂದೆನಿಸಿದ್ದು ವಿಶ್ವದಾದ್ಯಂತ ಇದನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ವರ್ಷವೇ ಶಾಪಿಂಗ್ ಹಬ್ಬವನ್ನು ಭಾರತಕ್ಕೆ ತರುವುದರ ಬಗ್ಗೆ ನಾವು ಖುಷಿಯಾಗಿದ್ದೇವೆ ಅಂತೆಯೇ ಬಳಕೆದಾರರ ಪ್ರತಿಕ್ರಿಯೆ ಉತ್ತಮವಾಗಿದೆ.

ಲೀಕೊ ಸಾಧನೆಯ ಹರಿಕಾರ

ಲೀಕೊ ಸಾಧನೆಯ ಹರಿಕಾರ

ಭಾರತದಲ್ಲಿ ಕೂಡ ಲೀಕೊ ಸಾಧನೆಯ ಹರಿಕಾರ ಎಂದೆನಿಸಿದೆ. ನಮ್ಮ ಟಾರ್ಗೆಟ್ ಮಾರಾಟಗಳನ್ನು ತಲುಪುವ ಕಾಯಕಕ್ಕೆ ನಾವು ಬದ್ಧರಾಗಿದ್ದೇವೆ. ಮುಂದೆ ಭವಿಷ್ಯದಲ್ಲಿ ಕೂಡ ಲೀಕೊದ ಉತ್ಪನ್ನಗಳನ್ನು ವೃದ್ಧಿಸುವ ಆಸೆ ನಮಗಿದೆ ಎಂಬುದು ಅತುಲ್ ಮಾತಾಗಿದೆ.

ಹೆಚ್ಚಿನ ಮಾನ್ಯತೆ

ಹೆಚ್ಚಿನ ಮಾನ್ಯತೆ

ಚೀನಾ, ರಷ್ಯಾ ಮತ್ತು ಯುಎಸ್‌ಎ ನಲ್ಲೂ ಎಪಿಕ್ 919 ಹೆಚ್ಚಿನ ಮಾನ್ಯತೆಯನ್ನು ಗಳಿಸಿಕೊಂಡಿದೆ. ಭಾರತದಾದ್ಯಂತ ಐಎನ್‌ಆರ್ 5200 ಕೋಟಿಯಷ್ಟು ಒಟ್ಟು ಮಾರಾಟಗಳನ್ನು ಕಂಡುಕೊಂಡಿದೆ ಈ ಪಟ್ಟಿಯಲ್ಲಿ ಚೀನಾ, ಹಾಂಕ್‌ಕಾಂಗ್ ಮಾರಾಟ ದಾಖಲೆ ಕೂಡ ಸೇರಿದೆ.

ಮಾರಾಟ

ಮಾರಾಟ

ಲೀಕೊ ಯಶಸ್ವಿಯಾಗಿ 866,000 ಸೂಪರ್ ಟಿವಿ ಮತ್ತು 1,178,000 ಕ್ಕಿಂತಲೂ ಹೆಚ್ಚಿನ ಸೂಪರ್ ಫೋನ್‌ಗಳನ್ನು ಎಪಿಕ್ 919 ನಲ್ಲಿ ಮಾರಾಟ ಮಾಡಿದೆ.

ಲಿಮಾಲ್.ಕಾಮ್‌

ಲಿಮಾಲ್.ಕಾಮ್‌

ಲೀಕೊದ ಆಕ್ಸೆಸರೀಸ್‌ಗಳು ಲಿಮಾಲ್.ಕಾಮ್‌ನಲ್ಲಿ ಲಭ್ಯವಿದೆ. ಇದರಲ್ಲಿ ಬ್ಲ್ಯೂಟೂತ್ ಸ್ಪೀಕರ್, ಬ್ಲ್ಯೂಟೂತ್ ಹೆಡ್‌ಫೋನ್‌ಗಳು, ಸಿಡಿಎಲ್‌ಎ ಹೆಡ್‌ಸೆಟ್ಸ್, ರಿವರ್ಸ್ ಇನ್ ಇಯರ್ಸ್, ರಿಂಗ್ ಬ್ರಾಕೆಟ್ಸ್ ಮತ್ತು ಕೇಸಸ್, ಕವರ್ಸ್ ಹಾಗೂ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಇವೆ.

ಪಾಲುದಾರಿಕೆ

ಪಾಲುದಾರಿಕೆ

ಈವೆಂಟ್ ಕುರಿತಾಗಿ ಫ್ಲಿಪ್‌ಕಾರ್ಟ್ ಮೊಬೈಲ್ ಅಧ್ಯಕ್ಷರಾದ ಅಜಯ್ ಯಾದವ್ ಹೇಳುವಂತೆ, ಲೀಕೊದೊಂದಿಗೆ ನಮ್ಮ ಪಾಲುದಾರಿಕೆ ದೀರ್ಘವಾದದ್ದಾಗಿದೆ. ತಮ್ಮ ಮಾರುಕಟ್ಟೆ ಷೇರನ್ನು ವಿಸ್ತರಿಸುವ ಸಲುವಾಗಿ ಲೀಕೊದೊಂದಿಗೆ ಫ್ಲಿಪ್‌ಕಾರ್ಟ್ ಕೂಡ ಕಾರ್ಯನಿರತವಾಗಿದೆ.

ಮನಗೆದ್ದಿದೆ

ಮನಗೆದ್ದಿದೆ

ಹೆಚ್ಚು ಆಕರ್ಷಕ ಆಫರ್‌ಗಳ ಮೂಲಕ ಲೀಕೊ ಮಿಲಿಯಗಟ್ಟಲೆ ಭಾರತೀಯ ಬಳಕೆದಾರರ ಮನಗೆದ್ದಿದೆ. ಲೀಕೊದ 919 ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ವಿಶ್ವದಾದ್ಯಂತ ಹೆಚ್ಚು ಪ್ರಸಿದ್ಧವಾಗಿದೆ ಮತ್ತು ಬಳಕೆದಾರರಿಗೆ ವಿಭಿನ್ನವಾದ ಶಾಪಿಂಗ್ ಅನುಭವವನ್ನು ಇದು ಮಾಡಿಕೊಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Global internet and technology conglomerate, LeEco has swiftly made inroads into the hearts of Indian users through its Super products.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot