ಒಡೆದ ಫೋನ್ ಪರದೆಗೆ ಖರ್ಚಿಲ್ಲದ ಪರಿಹಾರ

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಕ್ರ್ಯಾಕ್ ಆಗಿದೆಯೇ? ಎಲ್ಲರಿಗೂ ಸಂಭವಿಸುವ ಫೋನ್ ಅವಘಡ ಇದಾಗಿದ್ದು ಹೊಸದನ್ನು ಕೊಂಡುಕೊಳ್ಳುವ ನಿಮ್ಮ ಯೋಚನೆಯನ್ನು ಕೈಬಿಡಿ. ನೀವು ಇದನ್ನು ತುರ್ತಾಗಿ ರಿಪೇರಿ ಮಾಡುವ ಮೂಲಕ ಒಡೆದ ಫೋನ್ ಪರದೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಓದಿರಿ: ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

ನಿಮ್ಮ ಫೋನ್ ಪರದೆಯನ್ನು ಸರಳವಾಗಿ ರಿಪೇರಿ ಮಾಡಿಕೊಳ್ಳಬಹುದಾದ ವಿಧಾನಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅದು ಹೇಗೆ ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಹಾಗಿದ್ದರೆ ಈ ಸ್ಲೈಡರ್ ಗಮನಿಸಿ ಮತ್ತು ನಿಮ್ಮ ಫೋನ್ ಪರದೆಯ ರಿಪೇರಿಯನ್ನು ನೀವೇ ಮಾಡಿಕೊಳ್ಳಿ.

ಉಪಯುಕ್ತ ಮಾಹಿತಿಗಳನ್ನು ಬ್ಯಾಕಪ್ ಮಾಡಿಕೊಳ್ಳಿ

ಉಪಯುಕ್ತ ಮಾಹಿತಿಗಳನ್ನು ಬ್ಯಾಕಪ್ ಮಾಡಿಕೊಳ್ಳಿ

ಫೋನ್ ಪರದೆ ಒಡೆದಿದೆ ಎಂದಲ್ಲಿ ಅದರಲ್ಲಿರುವ ಉಪಯುಕ್ತ ಮಾಹಿತಿಗಳನ್ನು ಬ್ಯಾಕಪ್ ಮಾಡಿಕೊಳ್ಳಿ. ಮೌಲ್ಯಯುತ ಫೋಟೋಗಳು, ಡಾಕ್ಯುಮೆಂಟ್‌ಗಳು ಇದನ್ನು ಕಳೆದುಕೊಳ್ಳದಿರಿ.

ಆನ್‌ಲೈನ್‌ ಅಪ್ಲೈ

ಆನ್‌ಲೈನ್‌ ಅಪ್ಲೈ

ನಿಮ್ಮ ಫೋನ್ ಹಾನಿಯಾದಲ್ಲಿ ಯಾವುದಾದರೂ ಇನ್ಶೂರೆನ್ಸ್ ಪಾಲಿಸಿಗಳು ಇವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಈ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ನಿಮಗೆ ಅಪ್ಲೈ ಮಾಡಬಹುದು.

ಉಚಿತ ರಿಪೇರಿ

ಉಚಿತ ರಿಪೇರಿ

ನೀವು ಫೋನ್ ಖರೀದಿ ಮಾಡಿದಲ್ಲಿ ನಿಮ್ಮ ಫೋನ್‌ಗೆ ಉಚಿತ ರಿಪೇರಿಯನ್ನು ಮಾಡಲಾಗುತ್ತದೆಯೇ ಎಂಬುದನ್ನು ವಿಚಾರಿಸಿ. ಒಡೆದ ಫೋನ್ ಪರದೆಗೆ ಇವರು ಸೇವೆಯನ್ನು ಮಾಡಿಕೊಡುತ್ತಾರೆ. ಇದರಿಂದ ನಿಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ.

ದುಪ್ಪಟ್ಟು ವೆಚ್ಚ

ದುಪ್ಪಟ್ಟು ವೆಚ್ಚ

ತಯಾರಕರ ವೆಬ್‌ಸೈಟ್‌ ಅನ್ನು ಇದಕ್ಕಾಗಿ ತಡಕಾಡಿ. ಇನ್ನು ಅವರು ರಿಪೇರಿಯನ್ನು ನಿಮಗೆ ಒದಗಿಸುತ್ತಾರೆ ಎಂದಾದಲ್ಲಿ ಇತರೆ ಅಂಗಡಿಗಳಿಗಿಂತಲೂ ಅವರು ದುಪ್ಪಟ್ಟು ವೆಚ್ಚವನ್ನು ಹಾಕುತ್ತಾರೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಅತಿ ಕಡಿಮೆ ದರ

ಅತಿ ಕಡಿಮೆ ದರ

ಸ್ವತಂತ್ರ ರಿಪೇರಿ ಅಂಗಡಿಗಳು ಅತಿ ಕಡಿಮೆ ದರದಲ್ಲಿ ನಿಮ್ಮ ಫೋನ್ ಅನ್ನು ರಿಪೇರಿ ಮಾಡಿಕೊಡುತ್ತವೆ ಆದರೆ ನೀವು ಇದನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಸ್ನೇಹಿತರನ್ನು ಇದಕ್ಕಾಗಿ ವಿಚಾರಿಸಿ ಆನ್‌ಲೈನ್ ಕಾಮೆಂಟ್‌ಗಳನ್ನು ಪರಿಶೀಲಿಸಿಕೊಳ್ಳಿ.

ಜಾಗರೂಕತೆ

ಜಾಗರೂಕತೆ

ಇನ್ನು ಈ ಪರಿಹಾರ ಕೊಂಚ ಜಾಗರೂಕತೆಯಿಂದ ನಿರ್ವಹಿಸಬೇಕಾಗಿರುವುದರಿಂದ ಇಲೆಕ್ಟ್ರಾನಿಕ್ ವಸ್ತುಗಳನ್ನು ರಿಪೇರಿ ಮಾಡುವ ಜ್ಞಾನ ನಿಮ್ಮಲ್ಲಿ ಇರಬೇಕು.

ಫೋನ್ ರಿಪೇರಿ

ಫೋನ್ ರಿಪೇರಿ

ಅಮೆಜಾನ್‌ನಂತಹ ತಾಣಗಳು ರಿಪೇರಿ ಕಿಟ್ ಅನ್ನು ಒದಗಿಸುವುದರಿಂದ ಮೊದಲು ಅದನ್ನು ಖರೀದಿಸಿ ನಂತರ ಫೋನ್ ರಿಪೇರಿಯನ್ನು ಮಾಡಿರಿ.

ದುಡ್ಡು ಖರ್ಚು ಮಾಡದಿರಿ

ದುಡ್ಡು ಖರ್ಚು ಮಾಡದಿರಿ

ನಿಮ್ಮ ಫೋನ್ ಹಳೆಯದಾಗಿದೆ ಎಂದಾದಲ್ಲಿ ಅದನ್ನು ರಿಪೇರಿ ಮಾಡುವುದಕ್ಕಾಗಿ ದುಡ್ಡು ಖರ್ಚು ಮಾಡದಿರಿ. ಸ್ವಲ್ಪ ದುಡ್ಡಿಗಾಗಿಯಾದರೂ ನಿಮ್ಮ ಫೋನ್ ಅನ್ನು ಮಾರಾಟ ಮಾಡಬಹುದಾಗಿದೆ.

ಉತ್ತಮ ಬೆಲೆಗೆ ಮಾರಾಟ

ಉತ್ತಮ ಬೆಲೆಗೆ ಮಾರಾಟ

ನಿಮ್ಮ ಹಳೆಯ ಡಿವೈಸ್‌ಗಳು ಒಮ್ಮೊಮ್ಮೆ ಉತ್ತಮ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದ್ದು ಇಬೇ ಮೊದಲಾದ ಸೈಟ್‌ಗಳಲ್ಲಿ ನಿಮ್ಮ ಫೋನ್ ಜಾಹೀರಾತು ನೀಡಿ.

ತಪ್ಪುಗಳಿಂದ ಅರಿತುಕೊಳ್ಳಿ

ತಪ್ಪುಗಳಿಂದ ಅರಿತುಕೊಳ್ಳಿ

ನಿಮ್ಮ ಫೋನ್‌ನ ಜಾಗರೂಕತೆಯನ್ನು ನೀವೇ ಮಾಡಬೇಕಾಗಿರುವುದರಿಂದ ಫೋನ್‌ನ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡಿ. ಎಲ್ಲಿಯೂ ಬೀಳದಂತೆ, ಪೆಟ್ಟಾಗದಂತೆ ಜಾಗರೂಕತೆ ವಹಿಸಿ. ಮುನ್ನೆಚ್ಚರಿಕೆಯೂ ಅಗತ್ಯ.

Best Mobiles in India

English summary
Here are some different ways you can fix your screen, from the lowest to the highest price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X