ನೀವು ಎಲ್ಲಿದ್ದರೂ ಉಚಿತ ಇಂಟರ್ನೆಟ್ ಪಡೆದುಕೊಳ್ಳುವುದು ಹೇಗೆ?

By Shwetha
|

ಇಂದಿನ ದಿನಗಳಲ್ಲಿ ಇಂಟರ್ನೆಟ್ ನಮ್ಮ ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂಬಂತಾಗಿಬಿಟ್ಟಿದೆ. ಇಂಟರ್ನೆಟ್ ಇದ್ದಲ್ಲಿ ಯಾವ ಕೆಲಸವನ್ನಾದರೂ ಹೇಗೆ ಬೇಕಾದರೂ ಮಾಡಿ ಮುಗಿಸಬಹುದೆಂಬ ಒಂದು ವಿಶ್ವಾಸ ನಮ್ಮ ಮನದಲ್ಲಿ ಮೂಡುತ್ತದೆ.

ಓದಿರಿ: ಮನೆಯ ವೈಫೈ ವೇಗಕ್ಕಾಗಿ ಪಾಲಿಸಬೇಕಾದ ಟಿಪ್ಸ್

ಆದರೆ ನಿಮ್ಮ ಮೊಬೈಲ್‌ಗೆ ಇಂಟರ್ನೆಟ್ ಚಾರ್ಜ್ ಮಾಡಿದಲ್ಲಿ ಮಾತ್ರವೇ ಅಲ್ಲವೇ ಇಂಟರ್ನೆಟ್ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಲು ಆಗುವುದು. ಆದರೆ ನೀವು ಎಲ್ಲಿಗೆ ಬೇಕಾದರೂ ಹೋಗಿ ಇಂಟರ್ನೆಟ್ ಸೌಲಭ್ಯ ನಿಮಗೆ ದೊರೆಯುವಂತೆ ಮಾಡುವ ಒಂದು ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಹತ್ತಿರದ ಹಾಟ್‌ಸ್ಪಾಟ್‌

ಹತ್ತಿರದ ಹಾಟ್‌ಸ್ಪಾಟ್‌

ಹತ್ತಿರದ ಹಾಟ್‌ಸ್ಪಾಟ್‌ಗಳನ್ನು ನಿಮಗೆ ಪರಿಶೀಲಿಸಲು ಅನುಮತಿಸುವ ಉಚಿತ ಅಪ್ಲಿಕೇಶನ್ ಆದ ವೆಫಿಯನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಇದೊಂದು ಉಚಿತ ಅಪ್ಲಿಕೇಶನ್ ಆಗಿದೆ.

ವೆಫಿ ಅಪ್ಲಿಕೇಶನ್

ವೆಫಿ ಅಪ್ಲಿಕೇಶನ್

200 ಮಿಲಿಯನ್ ವೈಫೈ ಹಾಟ್‌ಸ್ಪಾಟ್‌ಗಳನ್ನು ಪಟ್ಟಿಮಾಡುವ ಸಾಮರ್ಥ್ಯವನ್ನು ವೆಫಿ ಹೊಂದಿದೆ. ಆದ್ದರಿಂದ ನೀವು ಸಂಪರ್ಕಕ್ಕಾಗಿ ಹೆಚ್ಚು ದೂರ ಹೋಗಬೇಕೆಂದೇನಿಲ್ಲ.

ಕೇಬಲ್ ಕಂಪೆನಿ

ಕೇಬಲ್ ಕಂಪೆನಿ

ಇನ್ನು ನಿಮ್ಮ ಕೇಬಲ್ ಕಂಪೆನಿ ಕೂಡ ನಿಮ್ಮ ಇಂಟರ್ನೆಟ್ ಸಂಪರ್ಕಕ್ಕೆ ಜವಬ್ದಾರನಾಗಿರುತ್ತದೆ. ನಿಮ್ಮ ಪ್ರವೈಡರ್ ಅನ್ನು ಆಧರಿಸಿ, ಉಚಿತ ವೈಫೈ ಪ್ರವೇಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ವೈಫೈ ಫೈಂಡರ್ ಅಪ್ಲಿಕೇಶನ್

ವೈಫೈ ಫೈಂಡರ್ ಅಪ್ಲಿಕೇಶನ್

ಈ ಉಚಿತ ವೈಫೈ ಫೈಂಡರ್ ಅಪ್ಲಿಕೇಶನ್ ನಿಮ್ಮ ಹತ್ತಿರದ ಹಾಟ್‌ಸ್ಪಾಟ್‌ಗಳನ್ನು ಗುರುತಿಸುವಲ್ಲಿ ಸಿದ್ಧಹಸ್ತ ಎಂದೆನಿಸಿದೆ.

ಟೆದರಿಂಗ್

ಟೆದರಿಂಗ್

ಇನ್ನು ಟೆದರಿಂಗ್ ಮೂಲಕ ಕೂಡ ಉಚಿತ ವೈಫೈ ಸೌಲಭ್ಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಈ ಫೀಚರ್ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಪೋರ್ಟೇಬಲ್ ವೈಫೈ ಹಾಟ್‌ಸ್ಪಾಟ್ ಅನ್ನಾಗಿ ಪರಿವರ್ತಿಸುತ್ತದೆ. ಹೆಚ್ಚಿನ ಫೋನ್‌ಗಳು ಈ ಸಾಮರ್ಥ್ಯವನ್ನು ಮೊದಲೇ ಪಡೆದುಕೊಂಡಿರುತ್ತವೆ.

"ಪರ್ಸನಲ್ ಹಾಟ್‌ಸ್ಪಾಟ್"

ಆಕ್ಟಿವೇಟ್ ಮಾಡಲು ನಿಮ್ಮ ವೈಫೈ ಸೆಟ್ಟಿಂಗ್ಸ್‌ಗಳಿಗೆ ಹೋಗಿ ಮತ್ತು ಇಲ್ಲಿ "ಪರ್ಸನಲ್ ಹಾಟ್‌ಸ್ಪಾಟ್" ಆಪ್ಶನ್ ಅನ್ನು ಸಕ್ರಿಯಗೊಳಿಸಿ.

ವೈಫೈ ನೆಟ್‌ವರ್ಕ್‌

ವೈಫೈ ನೆಟ್‌ವರ್ಕ್‌

ಒಮ್ಮೆ ಇದು ಹೊಂದಿಕೆಯಾದೊಡನೆ ಲಭ್ಯವಿರುವ ವೈಫೈ ನೆಟ್‌ವರ್ಕ್‌ನಂತೆ ನಿಮ್ಮ ಫೋನ್ ಗೋಚರಿಸುತ್ತದೆ. ತದನಂತರ ನೀವು ನಿಮ್ಮ ಫೋನ್‌ನ ಕನೆಕ್ಶನ್ ಅನ್ನು ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Here we are listing out some methods on how we get free internet in anytime anywhere without any problem.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X