Subscribe to Gizbot

ಎಚ್‌ಪಿ ಟ್ಯಾಬ್ಲೆಟ್ ಎಚ್‌ಪಿ 7 ವಾಯ್ಸ್ ಶೀಘ್ರ ತೆರೆಗೆ

Written By:

ಡೆಲ್‌ನ ನಂತರ ಪಿಸಿ ತಯಾರಿಕೆಯಲ್ಲಿ ಟ್ಯಾಬ್ಲೆಟ್ ವ್ಯವಹಾರವನ್ನು ಪ್ರವೇಶಿಸಿರುವ ಎಚ್‌ಪಿಯು ಅತಿ ಸುಂದರವಾದ ಟ್ಯಾಬ್ಲೆಟ್‌ಗಳನ್ನು ನಿರ್ಮಿಸುತ್ತಿದೆ. ಇದುವರೆಗೆ ಎಚ್‌ಪಿಯು ಸ್ಲೇಟ್ 6 ವಾಯ್ಸ್‌ಟ್ಯಾಬ್ ಅನ್ನು ಮತ್ತು ಸ್ಲೇಟ್ 7 ವಾಯ್ಸ್ ಟ್ಯಾಬ್ ಅನ್ನು 3 ಜಿ ಸಂಪರ್ಕ ಬೆಂಬಲದೊಂದಿಗೆ ಲಾಂಚ್ ಮಾಡಿದೆ. ಫೆಬ್ರವರಿಯಲ್ಲಿ ಇವುಗಳು ಲಾಂಚ್ ಆಗಿದ್ದವು.

ಇದೇ ವಾಯ್ಸ್ ಟ್ಯಾಬ್ ಅನ್ನು ಕೂಡಲೇ ಲಾಂಚ್ ಮಾಡುವ ಯೋಜನೆಯಲ್ಲಿದೆ. ಇದನ್ನು ಎಚ್‌ಪಿ 7 ವಾಯ್ಸ್ ಟ್ಯಾಬ್ ಎಂದು ಕರೆಯಲಾಗಿದ್ದು, ಕಂಪೆನಿಯ ಹೊಸ ಫ್ಯಾಬ್ಲೆಟ್ ವಾಯ್ಸ್ ಟ್ಯಾಬ್ ಸಿರೀಸ್ ಅನ್ನು ಕಂಪೆನಿಯು ಈಗಾಗಲೇ ಲಾಂಚ್ ಮಾಡಿದೆ. ಇದು ನಿಜಕ್ಕೂ ಅತ್ಯುತ್ತಮವಾದ ಟ್ಯಾಬ್ಲೆಟ್ ಆಗಿದ್ದು ತಕ್ಕ ಬೆಲೆಗೆ ತಕ್ಕ ಉತ್ಪನ್ನವಾಗಿ ಹೊರ ಬಿದ್ದಿದೆ.

ಇದನ್ನೂ ಓದಿ: ಈ ದಸರಾಕ್ಕಾಗಿ ಬೊಂಬಾಟ್ ಕೊಡುಗೆಯ ಫೋನ್‌ಗಳು

ಎಚ್‌ಪಿ 7 ವಾಯ್ಸ್ ದಸರಾದಲ್ಲಿ ಲಾಂಚ್

ಮುಂಬರಲಿರುವ ಟ್ಯಾಬ್ಲೆಟ್ ಅನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಇದು ಹೆಚ್ಚು ವೃತ್ತಾಕಾರದ ಮೂಲೆಗಳನ್ನು ಪಡೆದುಕೊಂಡಿದ್ದು ನಿಜಕ್ಕೂ ಅದ್ಭುತ ವಿನ್ಯಾಸದೊಂದಿಗೆ ಕೂಡಿದೆ. ಇನ್ನು ಲಾಂಚ್ ಕುರಿತು ಮಾತನಾಡುವುದಿದ್ದರೆ, ಹೊಸ ಎಚ್‌ಪಿ ಟ್ಯಾಬ್ಲೆಟ್ ದಸರಾ ರಜಾದಿನಗಳ ಸಂದರ್ಭದಲ್ಲಿ ಹೊರಬರುವ ನಿರೀಕ್ಷೆ ಇದೆ. ಅಂದರೆ ಮುಂದಿನ ವಾರವೇ ಇದು ಬಿಡುಗಡೆಯನ್ನು ಪಡೆಯಬಹುದಾಗಿದೆ.

ಗಿಜ್‌ಬಾಟ್ ಹೊಸ ಟ್ಯಾಬ್ಲೆಟ್ ಲಾಂಚ್‌ನ ಸವಿವರ ಮಾಹಿತಿಯನ್ನು ನಿಮಗೆ ತಿಳಿಸುತ್ತಿರುತ್ತದೆ.

ಇದನ್ನೂ ಓದಿ: ಫೇಸ್‌ಬುಕ್ ಟ್ವಿಟ್ಟರ್‌ನಲ್ಲಿ ದಸರಾ ಸಂಭ್ರಮ

English summary
This article tells about HP Teases VoiceTab 7 Tablet: Coming Soon in India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot