Subscribe to Gizbot

ಫೇಸ್‌ಬುಕ್ ಟ್ವಿಟ್ಟರ್‌ನಲ್ಲಿ ದಸರಾ ಸಂಭ್ರಮ

Posted By:

ಮೈಸೂರು ದಸರಾ ಕರ್ನಾಟಕದ ನಾಡು ಹಬ್ಬವೆಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಈಗಾಗಲೇ ಪ್ರಾರಂಭಗೊಂಡಿರುವ ದಸರಾ ಉತ್ಸವವನ್ನು ವಿಜೃಂಭಣೆಯಿಂದ ನಗರದಲ್ಲಿ ಆಚರಿಸುತ್ತಿದ್ದು ಮೈಸೂರು ದಸರಾ ವಿಶ್ವ ವಿಖ್ಯಾತಿಯನ್ನು ಪಡೆದ ನಾಡ ಹಬ್ಬವಾಗಿದೆ. ಇದು ಅತ್ಯಂತ ದೀರ್ಘವಾದ 400 ವರ್ಷಗಳ ಉನ್ನತ ಇತಿಹಾಸವನ್ನು ಪಡೆದುಕೊಂಡಿದೆ. ಮೈಸೂರು ದಸರಾ ಹಬ್ಬವನ್ನು ಮೊದಲು ರಾಜ ಒಡೆಯರು 1610 ರಲ್ಲಿ ಪ್ರಾರಂಭಿಸಿದರು ಎಂಬ ಪ್ರತೀತಿ ಇದೆ. ಆ ಸಮಯದಲ್ಲಿ ಹತ್ತು ದಿನಗಳ ಕಾಲ ಅರಮನೆಯಲ್ಲಿ ದಸರಾ ವೈಭವವನ್ನು ನಡೆಸಲಾಗುತ್ತಿತ್ತು.

ಇದನ್ನೂ ಓದಿ: ಈ ದಸರಾಕ್ಕಾಗಿ ಬೊಂಬಾಟ್ ಕೊಡುಗೆಯ ಫೋನ್‌ಗಳು

ಇಂದಿಗೂ ರಾಜಮನೆತನದವರು ಈ ಹಬ್ಬವನ್ನು ನಡೆಸಿಕೊಂಡು ಬರುತ್ತಿದ್ದು ವಿಜಯದಶಮಿಯಂದು ನಗರದಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಇರಿಸಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ರಾಜ ಮನೆತನದವರು ಚಾಮುಂಡೇಶ್ವರಿಗೆ ಪೂಜೆಯನ್ನು ನೆರವೇರಿಸುತ್ತಾರೆ. ನಂತರ ಮನರಂಜನಾ ಕಾರ್ಯಕ್ರಮಗಳು ದಸರಾ ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಸರಕಾರ ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಮೈಸೂರು ದಸರಾವನ್ನು ಇನ್ನಷ್ಟು ರಂಜನೀಯಗೊಳಿಸುವ ಅಭಿಲಾಶೆಯನ್ನು ವಹಿಸಿಕೊಂಡಿದೆ.

ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರ ವೇದಿಕೆಗಳನ್ನು ಬಳಸಿಕೊಂಡು ಈ ಬಾರಿಯ ದಸರಾ ಹಬ್ಬವನ್ನು ಇನ್ನಷ್ಟು ಆಧುನೀಕರಣಗೊಳಿಸುವ ಪ್ರಯತ್ನ ಸರಕಾರದ್ದಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸರಕಾರ ದಸರಾ ಹಬ್ಬದ ಸಂಭ್ರಮಾಚರಣೆಗಾಗಿ ತೆಗೆದುಕೊಂಡಿರುವ ಕ್ರಮಗಳನ್ನು ನೋಡೋಣ.

ಇದನ್ನೂ ಓದಿ: ಸೋನಿಯ ಹೊಸ ಎಕ್ಸ್‌ಪೀರಿಯಾ Z3 ಲಾಂಚ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ನವೀಕರಣಗಳು
  

ಜಿಲ್ಲಾ ಆಡಳಿತವು ಕೆಲವೊಂದು ಉನ್ನತ ವಿಚಾರಗಳೊಂದಿಗೆ ಈ ಬಾರಿಯ ದಸರಾವನ್ನು ಹೆಚ್ಚು ರಂಜನೀಯಗೊಳಿಸುವುದಕ್ಕಾಗಿ ವಾಟ್ಸಾಪ್‌ನಲ್ಲಿ ದಸರಾ ಕುರಿತ ಅಪ್‌ಡೇಟ್‌ಗಳನ್ನು ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಹೆಚ್ಚಿನ ಜನರು ಈಗ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದು ಈ ಬಾರಿಯ ದಸರಾ ನವೀಕರಣಗಳನ್ನು ನೇರವಾಗಿ ವಾಟ್ಸಾಪ್‌ನಲ್ಲಿ ಕಳುಹಿಸುವ ವಿಶೇಷ ಯೋಜನೆಯನ್ನು ಜಿಲ್ಲಾ ಆಡಳಿತವು ಕೈಗೊಂಡಿದೆ. ಬಳಕೆದಾರರು ತಮ್ಮ ಹತ್ತು ಅಂಕೆಗಳ ಮೊಬೈಲ್ ಸಂಖ್ಯೆಯನ್ನು ನೀಡಿ ವಾಟ್ಸಾಪ್‌ನಲ್ಲಿ ಮೈಸೂರು ದಸರಾ ಫೋಟೋಗಳು ಮತ್ತು ದಸರಾದ ಇತರ ಅಪ್‌ಡೇಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ದಸರಾ ವಾಟ್ಸಾಪ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್
  

ಫೇಸ್‌ಬುಕ್‌ನಲ್ಲಿ ಕೂಡ ಈ ಬಾರಿಯ ಮೈಸೂರು ದಸರಾದ ಅಪ್‌ಡೇಟ್‌ಗಳು ದೊರೆಯುತ್ತಿದ್ದು ನಿಜಕ್ಕೂ ಇದು ಪ್ರಶಂಸನೀಯ ಮಾತಾಗಿದೆ.
ದಸರಾ ಫೇಸ್‌ಬುಕ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ವಿಟ್ಟರ್
  

ಈ ಬಾರಿಯ ದಸರಾ ಹಬ್ಬದ ಕ್ಷಣ ಕ್ಷಣ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಕೂಡ ನಿಮಗೆ ಪಡೆದುಕೊಳ್ಳಬಹುದಾಗಿದೆ.
ದಸರಾ ಟ್ವಿಟ್ಟರ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೂಗಲ್ ಪ್ಲಸ್
  

ಗೂಗಲ್ ಪ್ಲಸ್‌ನಲ್ಲಿ ಕೂಡ ವರ್ಣರಂಜಿತ ದಸರಾ ಹಬ್ಬದ ಸವಿಯನ್ನು ನಿಮಗೆ ಸವಿಯಬಹುದಾಗಿದೆ.
ದಸರಾ ಗೂಗಲ್ ಪ್ಲಸ್ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಆಂಡ್ರಾಯ್ಡ್ ಅಪ್ಲಿಕೇಶನ್
  

ಗೂಗಲ್ ಪ್ಲೇ ಸ್ಟೋರ್ 2014 ರ ದಸರಾ ಹಬ್ಬದ ವರ್ಣಮಯ ಅಪ್ಲಿಕೇಶನ್ ಅನ್ನು ನಿಮಗೆ ಡೌನ್‌ಲೋಡ್ ಮಾಡಿ ಹಬ್ಬದ ಸವಿಯನ್ನು ಸವಿಯಬಹುದಾಗಿದೆ.

ದಸರಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಾರ್ವಜನಿಕ ದೃಷ್ಟಿಕೋನ
  

ನಾವು ಈ ಬಾರಿಯ ದಸರಾಕ್ಕಾಗಿ ಎಲ್ಲಾ ಸ್ಥಳೀಯ ಮತ್ತು ಪ್ರವಾಸಿಗರನ್ನು ಆಹ್ವಾನಿಸಿದೆ. ದಸರಾದ ವಿಶೇಷತೆಗಳನ್ನು ಕ್ಲಿಕ್ಕಿಸಿದ ಫೋಟೋಗಳನ್ನು ಪಬ್ಲಿಕ್ ಐ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Mysore dasara celebration in Social media.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot