ಹೆಚ್‌ಪಿ (HP) ಜೊತೆಯಾದ ಮೈಕ್ರೋಸಾಫ್ಟ್: 2017 ಕ್ಕೆ ಮಾರುಕಟ್ಟೆ ಆಳಲಿವೆ ವಿಂಡೋಸ್ ಫೋನ್‌ಗಳು!

|

ಆಂಡ್ರಾಯ್ಡ್ ಫೋನ್‌ಗಳ ಭರಾಟೆಯಲ್ಲಿ ವಿಂಡೋಸ್ ಫೋನ್‌ಗಳು ಎಷ್ಟು ಕಣ್ಮರೆಯಾಗಿಬಿಟ್ಟವು ಎಂದರೆ ಇಂದು ಸಾವಿರಕ್ಕೆ ನೂರುಗಳ ಲೆಕ್ಕದಲ್ಲಿಯೂ ಸಹ ವಿಂಡೋಸ್ ಮೊಬೈಲ್ ಬಳಕೆದಾರರ ಸಂಖ್ಯೆ ಸಿಗುವುದು ಕಷ್ಟಸಾಧ್ಯ.

ಉಪಯೋಗಿಸಲು ಸರಳವಾಗಿರುವ ಆಂಡ್ರಾಯ್ಡ್ ಫೋನ್‌ಗಳ ಮುಂದೆ ಮಂಡಿಯೂರಿದ ವಿಂಡೋಸ್ ಫೋನ್‌ಗಳನ್ನು ಮತ್ತೆ ಜನಪ್ರಿಯಗೊಳಿಸಲು ಮೈಕ್ರೋಸಾಫ್ಟ್ ಪ್ರಯತ್ನಿಸುತ್ತಿದೆ. ಹಾಗಾಗಿ ಪ್ರಖ್ಯಾತ ಎಲೆಕ್ಟ್ರಾನಿಕ್ ಹೆಚ್‌ಪಿ (HP) ಕಂಪೆನಿ ಜೊತೆಗೂಡಿ 2017 ಕ್ಕೆ ನೂತನ ವಿಂಡೋಸ್ ಫೋನ್‌ಗಳನ್ನು ಹೊರತರುತ್ತಿದೆ.

ಓದಿರಿ:2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಮೈಕ್ರೋಸಾಫ್ಟ್ ಮತ್ತು ಹೆಚ್‌ಪಿ(HP) ಕಂಪೆನಿಗಳು ನೂತನವಾಗಿ ಹೊರತರುತ್ತಿರುವ ವಿಂಡೋಸ್ ಫೋನ್‌ಗಳು ಕಡಿಮೆ ಬಜೆಟ್ ಬೆಲೆಯಲ್ಲಿ ಸಿಗುತ್ತವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ನೂತನ ವಿಂಡೋಸ್ ಫೋನ್‌ಗಳು ಹೇಗೆ ಮೂಡಿಬರಬಹುದು ಎಂದು ತಿಳಿಯಲು ಮುಂದೆ ಓದಿ.

ಇದು ಹೆಚ್‌ಪಿ (HP)  ಮತ್ತು ಮೈಕ್ರೋಸಾಫ್ಟ್ ರೋಲ್!

ಇದು ಹೆಚ್‌ಪಿ (HP) ಮತ್ತು ಮೈಕ್ರೋಸಾಫ್ಟ್ ರೋಲ್!

ಹೆಚ್‌ಪಿ (HP) ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂದಿದ್ದರೆ, ಮೈಕ್ರೋಸಾಫ್ಟ್ ಹಣಬಲವನ್ನು ಹೊಂದಿದೆ. ಹಾಗಾಗಿ ಇವೆರಡು ದಿಗ್ಗಜ ಕಂಪೆನಿಗಳು ಒಟ್ಟುಗೂಡಿ ಹೊರತರುತ್ತಿರುವ ನೂತನ ವಿಂಡೋಸ್ ಫೋನ್ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿರಬಹುದು

ಇದು ಹೆಚ್‌ಪಿ (HP)ಯ ಎರಡನೆ ಪ್ರಯತ್ನ!

ಇದು ಹೆಚ್‌ಪಿ (HP)ಯ ಎರಡನೆ ಪ್ರಯತ್ನ!

ಹೌದು ಇದು ಹೆಚ್‌ಪಿ (HP) ಕಂಪೆನಿಯ ಎರಡನೆ ವಿಂಡೋಸ್ ಫೋನ್. HP Elite X3 ಎಂಬ ಹೆಚ್‌ಪಿ (HP) ಮೊದಲನೇ ವಿಂಡೋಸ್ ಫೋನ್ ಎಷ್ಟೋ ಜನರಿಗೆ ತಿಳಿಯದೆ ಮರೆಯಾಯಿತು. ಹಾಗಾಗಿ ಎರಡನೆ ಪ್ರಯತ್ನದಲ್ಲಿ ಹೆಚ್‌ಪಿ (HP) ಒಳ್ಳೆಯ ಹಜ್ಜೆಗಳನ್ನಿಡುತ್ತದೆ ಎನ್ನಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರೀಕ್ಷಿತ ಫೀಚರ್ಸ್‌ಗಳು

ನಿರೀಕ್ಷಿತ ಫೀಚರ್ಸ್‌ಗಳು

ಕ್ಲಿಯರ್‌ಬ್ಯಾಕ್ ಸ್ಕ್ರೀನ್, ಗುಣಮಟ್ಟದ ಕ್ಯಾಮೆರಾ ಲೆನ್ಸ್ , ಉತ್ತಮ ಕಾರ್ಯನಿರ್ವಹಣೆ ಹೊಂದಿರುವ ನಿರೀಕ್ಷಿತ ಫೀಚರ್ಸ್‌ಗಳು ವಿಂಡೋಸ್ ಫೋನ್‌ನಲ್ಲಿ ಇರಬಹುದು.

ಮೈಕ್ರೋಸಾಫ್ಟ್  ರೆಡ್ಮಂಡ್ ( Redmond)

ಮೈಕ್ರೋಸಾಫ್ಟ್ ರೆಡ್ಮಂಡ್ ( Redmond)

2017 ಕ್ಕೆ ಮೈಕ್ರೋಸಾಫ್ಟ್ ರೆಡ್ಮಂಡ್ ಎಂಬ ಹೊಸ ಮೊಬೈಲ್‌ ಬಿಡುಗಡೆಯಾಗಗುತ್ತಿದ್ದು, ಇನ್ನು ಹೆಚ್‌ಪಿ (HP) ಜೊತೆಗಿನ ಈ ಫೊನ್‌ಗೆ ಈ ಫೋನ್ ಸಾಥ್ ನೀಡಲಿದೆ. ಇದರಿಂದ ಮತ್ತೆ ವಿಂಡೋಸ್ ಫೋನ್‌ಗಳ ಭರಾಟೆ ಮುಂದುವರೆಯಬಹುದು.

ವಿಂಡೋಸ್ ಫೋನ್‌ ಓಎಸ್ (OS) ಉಳಿಸಬೇಕಾದ ಪರಿಸ್ಥಿತಿ

ವಿಂಡೋಸ್ ಫೋನ್‌ ಓಎಸ್ (OS) ಉಳಿಸಬೇಕಾದ ಪರಿಸ್ಥಿತಿ

ಆಂಡ್ರಾಯ್ಡ್ ಮತ್ತು IOS ಸಾಫ್ಟವೇರ್‌ಗಳು ಹೆಚ್ಚು ಮಹತ್ವವಿರುವ ಈ ಸಮಯದಲ್ಲಿ ವಿಂಡೋಸ್ ಫೋನ್‌ ಓಎಸ್ (OS) ಉಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಉಳಿದಿರುವ ವಿಂಡೋಸ್ ಬಳಕೆದಾರ ಗ್ರಾಹಕರಿಗೆ ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಒದಗಿಬೇಕಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The duo are rumoured to manufacture a more customer-focused Windows Phone in 2017. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X