2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ಜಿಯೋ ಮಾರ್ಚ್ 2017 ರ ತನಕ ತನ್ನ ಫ್ರೀನೆಟ್ ಸೇವೆಯನ್ನು ಹೆಚ್ಚಿಸುತ್ತದೆಯೇ? ಹಾಗಾದರೆ ಏಕೆ ಫ್ರೀ ಸೇವೆಯ ಕಾಲಾವಕಾಶವನ್ನು ಹೆಚ್ಚಿಸಬಹುದು?

By Bhaskar N J
|

ಜಿಯೋ ಫ್ರೀ ನೆಟ್‌ ಆಫರ್ ಈ ವರ್ಷದ ಡಿಸೆಂಬರ್‌ಗೆ ಕೊನೆಯಾಗುತ್ತದೆಯಾ? ಅಥವಾ 2017 ರ ಮಾರ್ಚ್ ತಿಂಗಳಿನ ತನಕ ಮುಂದುವರೆಯುತ್ತದೇಯಾ ಎನ್ನುವ ಪ್ರಶ್ನೆ ಜಿಯೋ ಗ್ರಾಹಕರಲ್ಲಿ ಮಾತ್ರವಲ್ಲ ಟೆಲಿಕಾಂ ಕ್ಷೇತ್ರದಲ್ಲಿಯೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಹೌದು, ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಜಿಯೋ ನಂತರ ನೆಟ್‌ವರ್ಕ್ ಸಮಸ್ಯೆ, ವಾಯ್ಸ್ ಕಾಲ್ ಸಮಸ್ಯೆಯಿಂದ ಬಳಲಿದೆ. ಮತ್ತು ಇತರ ಟೆಲಿಕಾಂ ಕಂಪೆನಿಗಳು ಜಿಯೋಗೆ ಹೆಚ್ಚು ಪೈಪೋಟಿ ನೀಡುತ್ತಿದ್ದು, ಜಿಯೋವಿನ ಮುಂದಿನ ನಡೆಯೇನು ಎಂಬುದು ಯಾರಿಗೂ ತಿಳಿಯದೇ ಉಳಿದಿದೆ.

2017'ರ ಮಾರ್ಚ್‌ವರೆಗೂ ಜಿಯೋ ವೆಲ್ಕಮ್‌ ಆಫರ್ ನೀಡಲು ರಹಸ್ಯ ಕಾರಣಗಳೇನು?

ವಾಟ್ಸಾಪ್ ವೀಡಿಯೊ ಕರೆ ಫೀಚರ್‌'ಗಾಗಿ ಈ ಲಿಂಕ್‌'ಗಳನ್ನು ತಪ್ಪಿಯೂ ಓಪನ್‌ ಮಾಡಬೇಡಿ

ಇನ್ನು ಏನಾದರೂ ಆಗಲಿ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲೇ ಬೇಕು ಎಂದು ಜಿಯೋ ಮಾಲಿಕ ಮುಖೇಶ್ ಅಂಬಾನಿ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವುಗಳಲ್ಲಿ ಒಂದು ಜಿಯೋ ಫ್ರೀ ನೆಟ್‌ ಸೇವೆಯನ್ನು ಡಿಸೆಂಬರ್‌ನಿಂದ ಮಾರ್ಚ್ 2017 ಹೆಚ್ಚಿಸುತ್ತದೆ ಎಂಬ ಊಹಾಪೂಹ!. ಜಿಯೋ ಮಾರ್ಚ್ 2017 ರ ತನಕ ತನ್ನ ಫ್ರೀನೆಟ್ ಸೇವೆಯನ್ನು ಹೆಚ್ಚಿಸುತ್ತದೆಯೇ? ಹಾಗಾದರೆ ಏಕೆ ಫ್ರೀ ಸೇವೆಯ ಕಾಲಾವಕಾಶವನ್ನು ಹೆಚ್ಚಿಸಬಹುದು? ಎಂಬ ಹಲವು ಪ್ರಶ್ನೆಗಳಿಗೆ ಪ್ರಮುಖ ಮೂರು ಕಾರಣಗಳಿವೆ. ಅವುಗಳು ಯಾವವು ಎಂದು ಮುಂದೆ ಓದಿ ತಿಳಿಯಿರಿ.

 ಜಿಯೋಗೆ ಹತ್ತು ಕೋಟಿ ಗ್ರಾಹಕರನ್ನು ಸೆಳೆಯುವ ಗುರಿ

ಜಿಯೋಗೆ ಹತ್ತು ಕೋಟಿ ಗ್ರಾಹಕರನ್ನು ಸೆಳೆಯುವ ಗುರಿ

ಜಿಯೋ ನೀಡಿದ ಫ್ರೀ ವೆಲ್‌ಕಮ್‌ ನೆಟ್ ಆಫರ್‌ನ ಮೊದಲ ಉದ್ದೇಶವೇ ಹೆಚ್ಚು ಗ್ರಾಹಕರನ್ನು ಸೆಳೆಯುವುದು. ಈಗಾಗಲೇ 25 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ ನಿರೀಕ್ಷಣೆ ಮಾಡಿದಷ್ಟು ಗ್ರಾಹಕರು ಜಿಯೋಗೆ ಸಿಗಲಿಲ್ಲ. ಹಾಗಾಗಿ, 2017 ರ ಮಾರ್ಚ್ ತನಕ ಫ್ರೀ ವೆಲ್‌ಕಮ್‌ ಆಫರ್ ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಪ್ಲಾನ್‌ ಮಾಡಿದೆ ಎನ್ನಲಾಗಿದೆ.

ಮಾರ್ಚ್ ಒಳಗೆ ಜಿಯೋ ಟು ಜಿಯೋ ಉತ್ತಮ ಕಾಲಿಂಗ್ ವ್ಯವಸ್ಥೆ

ಮಾರ್ಚ್ ಒಳಗೆ ಜಿಯೋ ಟು ಜಿಯೋ ಉತ್ತಮ ಕಾಲಿಂಗ್ ವ್ಯವಸ್ಥೆ

ಜಿಯೋಗೆ ಇತರ ಟೆಲಿಕಾಂ ಕಂಪೆನಿಗಳು ಸರಿಯಾದ ಸಹಕಾರ ನೀಡುತ್ತಿಲ್ಲ ಎನ್ನುವ ಆರೋಪಗಳು ಟೆಲಿಕಾಂವಲಯದಲ್ಲಿಯೇ ಬಂದಿವೆ. ಅದಕ್ಕಾಗಿ ಜಿಯೋ ತನ್ನದೇ ಆದ 45000 ನೆಟ್‌ವರ್ಕ್ ಟವರ್‌ಗಳನ್ನು ನಿರ್ಮಿಸುತ್ತಿದೆ. ಇದರಿಂದ ಜಿಯೋ ಟು ಜಿಯೋಗೆ ಉತ್ತಮ ಕಾಲಿಂಗ್ ಸೇವೆ ನಿಡುವುದು ಅದರ ಗುರಿಯಾಗಿದೆ. ಇನ್ನು ಆ ನೆಟ್‌ವರ್ಕ್‌ಗಳ ನಿರ್ಮಾಣಕ್ಕೆ ಸಮಯ ಬೇಕಿರುವುದರಿಂದ ಜಿಯೋ ವೆಲ್‌ಕಂ ಫ್ರೀ ಆಫರ್‌ ಮುಂದುವರೆಯಬಹುದು.

1000 ರೂಪಾಯಿಯಲ್ಲಿ ಜಿಯೋ 4G ಮೊಬೈಲ್‌ಗಳು

1000 ರೂಪಾಯಿಯಲ್ಲಿ ಜಿಯೋ 4G ಮೊಬೈಲ್‌ಗಳು

ಜಿಯೋಗೆ ಸಪೋರ್ಟ್ ಆಗುವಂತಹ ಮೊಬೈಲ್‌ಗಳು ಇನ್ನು ಹೆಚ್ಚಿನ ಜನರ ಕೈ ಸೇರಿಲ್ಲ. ಇನ್ನು ಜಿಯೋ ಸಹಕಂಪೆನಿ LYF 2017ಕ್ಕೆ 1000 ರೂಪಾಯಿಯಲ್ಲಿ ದೊರೆಯುವ 4G ಫೋನ್ ಬಿಡುಗಡೆ ಮಾಡುತ್ತಿದ್ದು, ಹಾಗಾಗಿ ಜಿಯೋ ತನ್ನ ವೆಲ್‌ಕಮ್‌ ಆಫರ್‌ ವಿಸ್ತರಿಸುತ್ತಿದೆ.

ಫ್ರೀ ಡಾಟಾ ನೀಡಲು ಜಿಯೋಗೆ ಟ್ರಾಯ್‌ ಭಯವಿಲ್ಲ

ಫ್ರೀ ಡಾಟಾ ನೀಡಲು ಜಿಯೋಗೆ ಟ್ರಾಯ್‌ ಭಯವಿಲ್ಲ

ಜಿಯೋ ಫ್ರೀ ನೆಟ್‌ ವೆಲ್‌ಕಮ್ ಆಫರ್ ನಿಂದ ಟೆಲಿಕಾಂ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಇತರ ಎಲ್ಲಾ ಟೆಲಿಕಾಂ ಕಂಪೆನಿಗಳು ಇದನ್ನು ಹೆಚ್ಚು ವಿರೋಧ ಮಾಡಿದವು. ಪೈಪೋಟಿ ಮಾರುಕಟ್ಟೆಯಲ್ಲಿ ಇಂತಹ ಬೆಳವಣಿಗೆ ಉತ್ತಮವಲ್ಲ ಎಂದು ಟೆಲಿಕಾಂ ನಿಯಂತ್ರಣ ಸಂಸ್ಥೆ ಟ್ರಾಯ್‌ಗೆ ದೂರು ನೀಡಿದ್ದವು. ಆದರೆ ಈಗ ಪರಿಸ್ಥತಿ ಬದಲಾಗಿದೆ. ಜಿಯೋ ಫ್ರೀ ವೆಲ್‌ಕಮ್‌ ಆಫರ್‌ನಿಂದ ಟೆಲಿಕಾಂ ಪರಿಸ್ಥಿತಿ ಹೆಚ್ಚೇನು ಬದಲಾಗಿಲ್ಲ. ಹಾಗಾಗಿ ಜಿಯೋ ಫ್ರೀ ಡಾಟಾ ನೀಡುವುದನ್ನು ಮುಂದುವರೆಸಬಹುದು.

Best Mobiles in India

Read more about:
English summary
Here are three possible reasons as to why Reliance wants to increase its welcome offer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X