Home
ಮೊಬೈಲ್

ಎಚ್‌ಟಿಸಿ 10 ಈವೋ ಲಾಂಚ್‌: ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿಯಲೇಬೇಕಾದ ವಿಶೇಷತೆಗಳು!

ಎಚ್‌ಟಿಸಿ 10 ಈವೋ, ಎಚ್‌ಟಿಸಿ ಬೋಲ್ಟ್‌ ಡಿವೈಸ್‌ನ ಜಾಗತಿಕ ವಿಭಿನ್ನ ಡಿವೈಸ್‌ ಆಗಿದ್ದು, ಇದು ಅಮೆರಿಕದ ಎಕ್ಸ್‌ಕ್ಲ್ಯೂಸಿವ್ ಸ್ಮಾರ್ಟ್‌ಫೋನ್‌ ಆಗಿದೆ.

By Suneel

ಎಚ್‌ಟಿಸಿ, 'ಎಚ್‌ಟಿಸಿ 10 ಈವೋ (HTC 10 Evo)' ಸ್ಮಾರ್ಟ್‌ಫೋನ್‌ ಲಾಂಚ್ ಮಾಡಿ ತನ್ನ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಖಾತೆಗೆ ಸೇರಿಸಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಅನ್ನು ತೈವಾನ್‌ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದ್ದು, ಹ್ಯಾಂಡ್‌ಸೆಟ್ ಅನ್ನು ಕಂಪನಿಯ ಬ್ರಿಟನ್ ವೆಬ್‌ಸೈಟ್‌ನಲ್ಲಿಯೂ ದಾಖಲಿಸಿದೆ.ಎಚ್‌ಟಿಸಿ 10 ಈವೋ, ಎಚ್‌ಟಿಸಿ ಬೋಲ್ಟ್‌ ಡಿವೈಸ್‌ನ ಜಾಗತಿಕ ವಿಭಿನ್ನ ಡಿವೈಸ್‌ ಆಗಿದ್ದು, ಇದು ಅಮೆರಿಕದ ಎಕ್ಸ್‌ಕ್ಲ್ಯೂಸಿವ್ ಸ್ಮಾರ್ಟ್‌ಫೋನ್‌ ಆಗಿದೆ.

ಎಚ್‌ಟಿಸಿ 10 ಈವೋ ಲಾಂಚ್‌: ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ವಿಶೇಷತೆಗಳು!

'ಎಚ್‌ಟಿಸಿ 10 ಈವೋ' ನೀರು ಮತ್ತು ಧೂಳು ನಿರೋಧಕ ಎಂದು ಐಪಿ57 ಪ್ರಮಾಣಿಕರಣ ಪಡೆದಿದೆ ಮತ್ತು ಅಲ್ಲದೇ ಎಚ್‌ಟಿಸಿ ಕಂಪನಿ ಇದೇ ಮೊದಲು ಆಂಡ್ರಾಯ್ಡ್ 7.0 ನ್ಯೂಗಾ ಮತ್ತು 3.5mm ಹೆಡ್‌ಫೋನ್ ಜಾಕ್‌ ಆಫರ್ ಮಾಡುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ.

ಮಾರುಕಟ್ಟೆಯಲ್ಲಿ ಹೊಸ ಹವಾ ಸೃಷ್ಟಿಸಲಿರುವ ಹೊಸ ಫೋನ್ಸ್

'ಎಚ್‌ಟಿಸಿ 10 ಈವೋ (HTC 10 Evo)' ಸ್ಮಾರ್ಟ್‌ಫೋನ್‌ 5.5ಇಂಚಿನ ಕ್ವಾಡ್ ಎಚ್‌ಡಿ(2560*1440,534 pixel per inch)ಸೂಪರ್ ಎಲ್‌ಸಿಡಿ 3 ಗೊರಿಲ್ಲಾ ಗ್ಲಾಸ್ 5 ಡಿಸ್‌ಪ್ಲೇ ಫೀಚರ್ ಹೊಂದಿದೆ. ಕ್ವಾಲ್ಕಂ ಸ್ನಾಪ್‌ಡ್ರಾಗನ್ 810 ಆಕ್ಟಾ-ಕೋರ್ 2.0GHz ಪ್ರೊಸೆಸರ್ ಚಾಲಿತವಾಗಿದ್ದು, 3GB RAM ಹೊಂದಿದೆ.

ಎಚ್‌ಟಿಸಿ 10 ಈವೋ ಲಾಂಚ್‌: ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ವಿಶೇಷತೆಗಳು!

'ಎಚ್‌ಟಿಸಿ 10 ಈವೋ (HTC 10 Evo)' ಫೋಟೋಗ್ರಫಿಗೆ ಉತ್ತಮ ಡಿವೈಸ್‌ ಆಗಿ ಕಾಣುತ್ತಿದ್ದು, 16MP ಹಿಂಭಾಗ ಕ್ಯಾಮೆರಾ ಜೊತೆಗೆ 29.3mm ವೈಡ್ ಆಂಗಲ್ ಲೆನ್ಸ್, f/2.0 ಅಪರ್ಚರ್, ಪಿಡಿಎಎಫ್‌, ಆಪ್ಟಿಕಲ್ ಇಮೇಜ್ ಸ್ಥಿರೀಕರಣ ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಹೊಂದಿದೆ. ಸ್ಮಾರ್ಟ್‌ಫೋನ್‌ 8MP ಮುಂಭಾಗ ಕ್ಯಾಮೆರಾ ಹೊಂದಿದ್ದು, ಎಚ್‌ಡಿ ವೀಡಿಯೊ ರೆಕಾರ್ಡ್‌ ಸಪೋರ್ಟ್‌ ಮಾಡುತ್ತದೆ.

4ಜಿ ಸಂಪರ್ಕವಿರುವ ಟಾಪ್ 10 ಫೋನ್‌ಗಳು

ಎಚ್‌ಟಿಸಿ 10 ಈವೋ ಲಾಂಚ್‌: ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ವಿಶೇಷತೆಗಳು!

'ಎಚ್‌ಟಿಸಿ 10 ಈವೋ (HTC 10 Evo)' 32GB ಮತ್ತು 64GB ಸ್ಟೋರೇಜ್ ವಿಭಿನ್ನತೆಯಲ್ಲಿ ಲಭ್ಯವಿದ್ದು, ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ವಿಸ್ತರಣೆ ಮಾಡಬಹುದು.

'ಎಚ್‌ಟಿಸಿ 10 ಈವೋ (HTC 10 Evo)' ಸ್ಮಾರ್ಟ್‌ಫೋನ್‌ 3,200mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಕ್ವಾಲ್ಕಂ ಕ್ವಿಕ್ ಚಾರ್ಜ್‌ 2.0 ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ಹೊಂದಿದೆ.

ಎಚ್‌ಟಿಸಿ 10 ಈವೋ ಲಾಂಚ್‌: ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ ವಿಶೇಷತೆಗಳು!

ಹ್ಯಾಂಡ್‌ಸೆಟ್ 4G, ಎಲ್‌ಟಿಇ, VoLTE, ವೈಫೈ 802.11ac, ಬ್ಲೂಟೂತ್ 4.1, ಎನ್‌ಎಫ್‌ಸಿ ಮತ್ತು USB ಟೈಪ್‌-ಸಿ ಪೋರ್ಟ್ ಅನ್ನು ಚಾರ್ಜ್ ಮತ್ತು ಡಾಟಾ ವರ್ಗಾವಣೆಗಾಗಿ ಹೊಂದಿದೆ.

'ಎಚ್‌ಟಿಸಿ 10 ಈವೋ (HTC 10 Evo)' ಸ್ಮಾರ್ಟ್‌ಫೋನ್ ಪ್ರಸ್ತುತದಲ್ಲಿ ತೈವಾನ್‌ನಲ್ಲಿ ಕಂಪನಿಯ ಇ-ಸ್ಟೋರ್‌ನಲ್ಲಿ ಮುಂಗಡವಾಗಿ ಬುಕ್ ಮಾಡಲು ಅವಕಾಶವಿದ್ದು, ತೈವಾನ್‌ ಡಾಲರ್ ಬೆಲೆ 17,990. ಭಾರತೀಯ ರೂಪಾಯಿಯಲ್ಲಿ 38,500.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
HTC 10 Evo Launched: Everything You Need to Know about the Flagship Smartphone specification and more. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+