ಎಚ್‌ಟಿಸಿಯಿಂದ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್ ಬಿಡುಗಡೆ

By Ashwath
|

ಎಚ್‌ಟಿಸಿ ಫ್ಯಾನ್‌ಗಳಿಗೆ ಗುಡ್‌ ನ್ಯೂಸ್. ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿಎಚ್‌ಟಿಸಿ ಕಂಪೆನಿ ತನ್ನ ಮೊದಲ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ.

ಭಾರತ ಮತ್ತು ಚೀನಾದಲ್ಲಿ ಜನರು ಡ್ಯುಯಲ್ ಸಿಮ್‌ನ ಮೊಬೈಲ್‌ ಹೆಚ್ಚು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಎಚ್‌ಟಿಸಿ ಈ ಮೊಬೈಲ್‌ನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಕಳೆದ ವರ್ಷ ಸ್ಮಾರ್ಟ್‌ಫೋನ್‌ ಕಿಂಗ್ ಸ್ಯಾಮ್‌ಸಂಗ್‌ ಸೆಡ್ಡು ಹೊಡೆಯಲು ಮುಂದಾಗಿದೆ.

ಆದರೆ ಬೇಸರದ ಸಂಗತಿ ಏನಂದ್ರೆ ಈ ಮೊಬೈಲ್ ಚೀನಾದಲ್ಲಿ ಬಿಡುಗಡೆಯಾಗಿದ್ದು , 1,799 Renminbi (ರೂ. 15,757) ಬೆಲೆಯಲ್ಲಿ ಚೀನಾ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ ಭಾರತದ ಗ್ರಾಹಕರು ನಿರಾಸೆ ಅನುಭವಿಸಬೇಕಾಗಿಲ್ಲ. ಸದ್ಯದಲ್ಲೇ ಈ ಮೊಬೈಲ್‌ ಭಾರತದಲ್ಲೂ ಬಿಡುಗಡೆಯಾಗಲಿದೆ.

ಎಚ್‌ಟಿಸಿಯಿಂದ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್ ಬಿಡುಗಡೆ
ಎಚ್‌ಟಿಸಿ ಇ 1
ವಿಶೇಷತೆ:

4.3- ಇಂಚಿನ WVGA ಎಲ್‌ಸಿಡಿ ಸ್ಕ್ರೀನ್‌
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಸ್‌
1.15GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೋಸೆಸರ್‌
1GB RAM
8GB ಆಂತರಿಕ ಮೆಮೋರಿ
5ಎಂಪಿ ಹಿಂದುಗಡೆ ಕ್ಯಾಮೆರಾ(ಎಲ್‌ಇಡಿ ಫ್ಲ್ಯಾಶ್‌)
2.1 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌,3ಜಿ,ಎನ್‌ಎಫ್‌ಸಿ,ವೈಫೈ
2,100mAh ಬ್ಯಾಟರಿ

ಲಿಂಕ್‌ : ಬಿಕಿನಿ ಸುಂದರಿಯಿಂದ ಸೋನಿ ಮೊಬೈಲ್‌ ಟೆಸ್ಟಿಂಗ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X