ದೇಶಿಯ ಮಾರುಕಟ್ಟೆಯಲ್ಲಿ HTC ಬಜೆಟ್ ಫೋನ್: ನೋಕಿಯಾ-ಶಿಯೋಮಿಗೆ ಹೊಡೆತ..!

|

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಬಜೆಟ್ ಬೆಲೆಯ ಮತ್ತು ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಇದೇ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ದೈತ್ಯ ಟೆಲಿಕಾಂ ಕಂಪನಿಗಳು ಈ ವರ್ಗದ ಸ್ಮಾರ್ಟ್‌ಫೋನ್ ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿವೆ.

ದೇಶಿಯ ಮಾರುಕಟ್ಟೆಯಲ್ಲಿ HTC ಬಜೆಟ್ ಫೋನ್: ನೋಕಿಯಾ-ಶಿಯೋಮಿಗೆ ಹೊಡೆತ..!

HTC ಕಂಪನಿ ಸಹ ಇದಕ್ಕೆ ಹೊರತಾಗಿಲ್ಲ ಎನ್ನಲಾಗಿದೆ. ಇಷ್ಟು ದಿನ ಪ್ರೀಮಿಯಮ್ ಫೋನ್ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿದ್ದ HTC ಈ ಬಾರಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲು ಮುಂದಾಗಿದ್ದು, ಇದು ಮಾರುಕಟ್ಟೆಯಲ್ಲಿ ಸದ್ಯ ಮಧ್ಯಮ ಬೆಲೆಯಲ್ಲಿ ದೊರೆಯಲಿರುವ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

HTC ಡಿಸೈರ್ 12

HTC ಡಿಸೈರ್ 12

HTC ಕಂಪನಿಯೂ ಈ ಬಾರಿ HTC ಡಿಸೈರ್ 12 ಹೆಸರಿನ ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದ್ದು, ಇದರಲ್ಲಿ ಮಾರುಕಟ್ಟೆಯಲ್ಲಿ ಸದ್ಯ ಟ್ರೆಂಡ್ ಆಗಿರುವ ಎಲ್ಲಾ ಆಯ್ಕೆಗಳು ಇರಲಿದೆ. ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ.

5.5 ಇಂಚಿನ ಫುಲ್ ಸ್ಕ್ರಿನ್:

5.5 ಇಂಚಿನ ಫುಲ್ ಸ್ಕ್ರಿನ್:

ಸದ್ಯ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಫುಲ್ ಸ್ಕ್ರಿನ್ ಡಿಸ್‌ ಪ್ಲೇ ವಿನ್ಯಾಸವನ್ನು HTC ಡಿಸೈರ್ 12 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದ್ದು, 5.5 ಇಂಚಿನ HD+ ಗುಣಮಟ್ಟದ ಡಿಸ್‌ಪ್ಲೇಯನ್ನು ನೀಡಲಾಗಿದೆ.

3GB RAM/32GB ಇಂಟರ್ನಲ್ ಮೆಮೊರಿ:

3GB RAM/32GB ಇಂಟರ್ನಲ್ ಮೆಮೊರಿ:

HTC ಡಿಸೈರ್ 12 ಸ್ಮಾರ್ಟ್‌ಫೋನಿನಲ್ಲಿ 3GB RAM ಕಾಣಬಹುದಾಗಿದ್ದು, ಇದರೊಂದಿಗೆ 32GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ. ಅಲ್ಲದೇ 2TB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

HTC ಡಿಸೈರ್ 12 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 5MP ಕ್ಯಾಮೆರಾ ಅಳವಡಿಸಲಾಗಿದೆ. ಉತ್ತಮ ಫೋಟೋಗಳನ್ನು ಮತ್ತು ವಿಡಿಯೋವನ್ನು ಮಾಡಲು ಇದು ಹೇಳಿ ಮಾಡಿಸಿದಂತಿದೆ.

ಬ್ಯಾಟರಿ:

ಬ್ಯಾಟರಿ:

HTC ಡಿಸೈರ್ 12 ಸ್ಮಾರ್ಟ್‌ಫೋನಿನಲ್ಲಿ ನೀವು 2730mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, 4G LTE ಸೇವೆಯನ್ನು ಈ ಫೋನಿನಲ್ಲಿ ನೀಡಲಾಗಿದೆ. ಎರಡು ಸಿಮ್ ಮತ್ತು ಒಂದು ಮೆಮೊರಿ ಕಾರ್ಡ್‌ ಅನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಓದಿರಿ: ಜಿಯೋ ದೇಶದಲ್ಲಿ ಫಾಸ್ಟ್, ಇಂಟರ್ನೆಟ್ ವೇಗದಲ್ಲಿ ಭಾರತ ಲಾಸ್ಟ್..!

Best Mobiles in India

English summary
HTC Desire 12 Specifications. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X