ಎಚ್‌ಟಿಸಿ ಡಿಸೈರ್ 620 ಜಿ ಡ್ಯುಯಲ್ ಸಿಮ್ ರೂ 15,900 ಕ್ಕೆ

Written By:

ಎಚ್‌ಟಿಸಿ ತನ್ನ ಹೊಸ ಡಿಸೈರ್ ಶ್ರೇಣಿಯ ಬಜೆಟ್ ಸ್ಮಾರ್ಟ್‌ಫೋನ್ ಆದ ಡಿಸೈರ್ 620ಜಿ ಡ್ಯುಯಲ್ ಸಿಮ್ ಅನ್ನು ಭಾರತದಲ್ಲಿ ಲಾಂಚ್ ಮಾಡುತ್ತಿದೆ. ಇ ಕಾಮರ್ಸ್ ವೆಬ್‌ಸೈಟ್‌ನಲ್ಲಿ ರೂ 15,900 ಕ್ಕೆ ಪಟ್ಟಿ ಮಾಡಿದ್ದು ಭಾರತದಲ್ಲಿ ಎಚ್‌ಟಿಸಿ ಡಿಸೈರ್ 620ಜಿ ಡ್ಯುಯಲ್ ಸಿಮ್ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.

ಇದನ್ನೂ ಓದಿ: ಬ್ಲ್ಯೂಟೂತ್‌ನಲ್ಲಿ ಫೋನ್ ಸಂಪರ್ಕಗಳನ್ನು ಉಳಿಸುವುದು ಹೇಗೆ?

ಡಿಸೈರ್ 620 ಜಿ ಡ್ಯುಯಲ್ ಸಿಮ್ 3ಜಿ ವೇರಿಯೇಂಟ್ ಆಗಿದ್ದು 4ಜಿ ಸಂಪರ್ಕಕ್ಕೆ ಇದು ಬೆಂಬಲವನ್ನು ನೀಡುತ್ತದೆ. ಈ ತಿಂಗಳ ಮೊದಲ ವಾರದಲ್ಲಿ ಲಾಂಚ್ ಆದ ಡಿಸೈರ್ 620 ಜಿ ಡ್ಯುಯಲ್ ಸಿಮ್, ಡಿಸೈರ್ 620 ಡ್ಯುಯಲ್ ಸಿಮ್‌ನ 3 ಜಿ ವೇರಿಯೇಂಟ್ ಆಗಿದ್ದು ಇದು 4ಜಿ ಗೆ ಸಂಪರ್ಕವನ್ನು ನೀಡುತ್ತದೆ. ಡಿಸೈರ್ 620 ಡ್ಯುಯಲ್ ಸಿಮ್ ಮತ್ತು ಡಿಸೈರ್ 620ಜಿ ಡ್ಯುಯಲ್ ಸಿಮ್ ಎರಡನ್ನೂ ತೈವಾನ್‌ನಲ್ಲಿ ಈ ತಿಂಗಳ ಮೊದಲಲ್ಲಿ ಮಾರಾಟ ಮಾಡಲಾಗುತ್ತಿದೆ.

ಎಚ್‌ಟಿಸಿ ಯ ಡಿಸೈರ್ 620 ಜಿ ಡ್ಯುಯಲ್ ಸಿಮ್ ರೂ 15,900 ಕ್ಕೆ

ಈ ಎರಡೂ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್‌ಗಳು ನೆಟ್‌ವರ್ಕ್ ಸಂಪರ್ಕ, ಪ್ರೊಸೆಸರ್ ಮತ್ತು ಇನ್‌ಬಿಲ್ಟ್ ಸ್ಟೋರೇಜ್ ವಿಸ್ತರಣಾ ಮಿತಿ ಹೀಗೆ ಮುಂತಾದವುಗಳಲ್ಲಿ ಒಂದೇ ರೀತಿಯ ವಿಶೇಷತೆಗಳನ್ನು ಹೊಂದಿದೆ. 4ಜಿ ಸಕ್ರಿಯಗೊಂಡಿರುವ ಎಚ್‌ಟಿಸಿ 620 ಡ್ಯುಯಲ್ ಸಿಮ್, 64ಬಿಟ್ 1.2GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಅನ್ನು ಹೊಂದಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯವನ್ನು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿಗೆ ವಿಸ್ತರಿಸಬಹುದಾಗಿದೆ. 3ಜಿ ಬೆಂಬಲಿತ ಎಚ್‌ಟಿಸಿ ಡಿಸೈರ್ 620 ಜಿ ಡ್ಯುಯಲ್ ಸಿಮ್‌ನಲ್ಲಿ 1.7 GHZ ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಪ್ರೊಸೆಸರ್ ಜೊತೆಗೆ ವಿಸ್ತರಿಸಬಹುದಾದ ಆಂತರಿಕ ಸಂಗ್ರಹಣಾ ಸಾಮರ್ಥ್ಯ 32ಜಿಬಿ ಯನ್ನು ಪಡೆದುಕೊಂಡಿದೆ.

ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಆಧಾರಿತ ಡಿಸೈರ್ 620ಜಿ ಡ್ಯುಯಲ್ ಸಿಮ್ 5 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಎಚ್‌ಡಿ ರೆಸಲ್ಯೂಶನ್ 294ಪಪಿಐ, 1ಜಿಬಿ RAM, ಸೆನ್ಸ್ 6UI, 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಒಳಗೊಂಡಿದ್ದು, 5 ಮೆಗಾಪಿಕ್ಸೆಲ್ ರೆಸಲ್ಯೂಶನ್ ಫೋನ್ ಮುಂಭಾಗದಲ್ಲಿದೆ. ಫೋನ್‌ನಲ್ಲಿ 2100mAh ರಿಮೂವೇಬಲ್ ಬ್ಯಾಟರಿಯನ್ನು ಫೋನ್ ಹೊಂದಿದ್ದು, ಇತರ ಸಂಪರ್ಕ ವಿಶೇಷತೆಗಳಾದ ವೈ-ಫೈ 802.11 b/g/n, ಬ್ಲ್ಯೂಟೂತ್ 4.0, GPS/ A-GPS and GPRS/ EDGE ಅನ್ನು ಡಿವೈಸ್ ಒಳಗೊಂಡಿದೆ. ಡಿಸೈರ್ 620ಜಿ ಡ್ಯುಯಲ್ ಸಿಮ್ ಡ್ಯುಯಲ್ ಮೈಕ್ರೋ ಸಿಮ್‌ಗೆ ಬೆಂಬಲವನ್ನು ನೀಡುತ್ತಿದೆ.

ಡಿಸೈರ್ 620ಜಿ ಡ್ಯುಯಲ್ ಸಿಮ್ 160 ಗ್ರಾಮ್‌ ತೂಕವನ್ನು ಹೊಂದಿದ್ದು ಕಂಪೆನಿಯ ಐಕಾನಿಕ್ ವಿನ್ಯಾಸದ ಜೊತೆಗೆ ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಪೀಕರ್‌ಗಳಿಗೆ ಬೆಂಬಲವನ್ನು ಒದಗಿಸುತ್ತಿದೆ.

English summary
This article tells about HTC seems all set to launch its new Desire-series budget smartphone, the Desire 620G Dual SIM, in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot