Subscribe to Gizbot

ಹೆಚ್‌ಟಿಸಿಯ ಡ್ರೋಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ ಬಿಡುಗಡೆ

Posted By: Vijeth

ಹೆಚ್‌ಟಿಸಿಯ ಡ್ರೋಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ ಬಿಡುಗಡೆ

ನವೆಂಬರ್‌ 13, ರಂದು ನ್ಯೂಯಾರ್ಕ್‌ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ಥೈವಾನ್ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಯಾದ ಹೆಚ್‌ಟಿಸಿ, 5 ಇಂಚಿನ ಸ್ಮಾರ್ಟ್‌ಫೋನ್‌ ತಯಾರಿಕಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ಸಲುವಾಗಿ ತನ್ನಯ ನೂತನ ಡ್ರೋಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ (DROID DNA) ಬಿಡುಗಡೆ ಮಾಡಿದೆ. ಅಂದಹಾಗೆ ಇದೀಗ ತಾನೆ ಬಿಡುಗಡೆಯಾಗಿರುವ ಡ್ರೋಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟಯಲ್ಲಿ ಈಗಾಗಲೇ ಕಾಲಿರಿಸಿರುವ ಸ್ಯಾಮ್ಸಂಗ್‌ನ ಗ್ಯಾಲಾಕ್ಸಿ ನೋಟ್‌ 2ನ ಪ್ರತಿಸ್ಪರ್ಧಿ ಎಂದು ಹೇಳಲಾಗುತ್ತದೆ.

ಅಂದಹಾಗೆ ನೂತನವಾಗಿ ಬಿಡುಗಡೆಯಾಗಿರುವ ಡ್ರೋಯ್ಡ್‌ಡಿಎನ್‌ಎ ಸ್ಮಾರ್ಟ್‌ಫೋನ್‌ನ ವಿಶೇಷತೆ ಕುರಿತಾಗಿ ಹೇಳುವುದಾದರೆ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಆಪರೇಟಿಂಗ್‌ ಸಿಸ್ಟಂ ಚಾಲಿತವಾಗಿದ್ದು ಹೆಚ್‌ಟಿಸಿಯ ಸೆಂಸ್‌ 4 ಪ್ಲಸ್‌ ಫೀಚರ್‌ ನೀಡಲಾಗಿದೆ. ಇದಲ್ಲದೆ 5 ಇಂಚಿನ 1080 ಸಾಮರ್ತ್ಯದ ಪಿಕ್ಸೆಲ್‌ ನೊಂದಿಗೆ ಹೆಚ್‌ಡಿ ಸೂಪರ್‌ ಎಲ್‌ಸಿಡಿ ಡಿಜಿಟಲ್‌ ಟಚ್‌ಸ್ಕ್ರೀನ್‌ ನೀಡಲಾಗಿದೆ. ಹಾಗೂ ಗೊರಿಲ್ಲಾ ಗ್ಲಾಸ್‌ 2 ಪ್ರೊಟೆಕ್ಷನ್‌ ಸಹ ನೀಡಲಾಗಿದ್ದು ಸ್ಕ್ರಾಚ್‌ ಆಗುವುದನ್ನು ತಡೆಯುತ್ತದೆ.

ಇದರೊಂದಿಗೆ 1.5 ಗಿಗಾಹರ್ಟ್‌ನ ಕ್ವಾಡ್‌ಕೋರ್‌ ಪ್ರೊಸೆಸರ್‌, 2 ಜಿಬಿ ರಾಂ, 16 ಜಿಬಿ ಆನ್‌ಬೋರ್ಡ್‌ ಮೆಮೊರಿ ಹಾಗೂ ಬೀಟ್‌ ಆಡಿಯೋನಂತಹ ಫೀಚರ್ಸ್‌ ನೀಡಲಾಗಿದೆ. ಸಂಸ್ಥೆಯ ಪ್ರಕಾರ ನೂತನ ಡ್ರಾಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ ಸರ್ವೀಸ್‌ ಪ್ರೊವೈಡರ್‌ ಸಂಸ್ಥೆಯಾದ ವೆರಿಜಾನ್ ನೆರವಿನಿಂದ ಎರಡು ವರ್ಷಗಳ ಕಾಂಟ್ರಾಕ್ಟ್‌ ಮೂಲಕ ಅಮೇರಿಕಾ ದರ ಅನ್ವಯ $199 ಮೊತ್ತದಲ್ಲಿ ಅಂದರೆ ರೂ.11,000 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಡ್ರೋಯ್ಡ್‌ ಡಿಎನ್‌ಎ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಹೀಗಿದೆ.

 • ಆಂಡ್ರಾಯ್ಡ್‌ ಜೆಲ್ಲಬೀನ್‌ ಆಪರೇಟಿಂಗ್‌ ಸಿಸ್ಟಂ.

 • ಹೆಚ್‌ಟಿಸಿ ಸೆಂಸ್ ಪ್ಲಸ್‌.

 • 1.5 GHz ಸ್ನಾಪ್‌ ಡ್ರಾಗನ್‌ ಆಪರೇಟಿಂಗ್‌ ಸಿಸ್ಟಂ.

 • 5 ಇಂಚಿನ ಟಚ್‌ಸ್ಕ್ರೀನ್‌.

 • ಗೊರಿಲ್ಲಾ ಗ್ಲಾಸ್‌ 2 ಪ್ರೊಟೆಕ್ಷನ್‌.

 • ಎನ್‌ಎಫ್‌ಸಿ ಬೀಟ್‌ ಆಡಿಯೋ ಸಿಸ್ಟಂ.

 • 8 ಎಂಪಿ ಕ್ಯಾಮೆರಾ.

 • 5 ಹಂತದ ಆಟೋಮ್ಯಾಟಿಕ್‌ ಫ್ಲಾಶ್‌.

 • 2.1 ಎಂಪಿ ಮುಂಬದಿಯ ಕ್ಯಾಮೆರಾ.

 • 2.0 ಮಿನಿ ಯುಎಸ್‌ಬಿ ಪೋರ್ಟ್‌.ವೈ-ಫೈ ಹಾಗೂ ಎನ್‌ಎಫ್‌ಸಿ ಫೀಚರ್ಸ್‌.

 • 2,020 ಎಂಎಹೆಚ್‌ ಬ್ಯಾಟರಿ.
Read In English...

HTC ಯ ಟಾಪ್‌ 5 ಐಸಿಎಸ್‌ ಸ್ಮಾರ್ಟ್‌ಫೋನ್ಸ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot