ಎಚ್‌ಟಿಸಿ ಒನ್ ಎಂ8 ಸ್ಮಾರ್ಟ್‌ಫೋನ್ ಬಿಡುಗಡೆ
ತೈವಾನ್ ಮೂಲದ ಎಚ್‌ಟಿಸಿ ಕಂಪೆನಿಯ ಈ ವರ್ಷದ ದುಬಾರಿಯ ಬೆಲೆಯ ಸ್ಮಾರ್ಟ್‌ಫೋನ್ ಎಚ್‌ಟಿಸಿ ಒನ್ ಎಂ8 ಬಿಡುಗಡೆಯಾಗಿದೆ. ನ್ಯಾನೋ ಸಿಮ್ ಹಾಕಬಹುದಾದ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಸ್ಮಾರ್ಟ್‌ಫೋನ್ ಇದಾಗಿದ್ದು,ಎಚ್‌ಟಿಸಿ ಒನ್‌ನಂತೆ ಮೆಟಲ್ ಬಾಡಿಯನ್ನು ಎಚ್‌ಟಿಸಿ ಈ ಸ್ಮಾರ್ಟ್‌ಫೋನ್‌ಗೆ ನೀಡಿದೆ.
ಸ್ಮಾರ್ಟ್‌ಫೋನ್ ಹಿಂದುಗಡೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಇರುವ 4 ಆಲ್ಟ್ರಾ ಪಿಕ್ಸೆಲ್ ಡ್ಯು ಕ್ಯಾಮೆರಾ ಹೊಂದಿದ್ದು ವಸ್ತುವನ್ನು ಶೇ.300ಕ್ಕಿಂತ ಹೆಚ್ಚಿನ ಬೆಳಕಿನಲ್ಲಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಎಚ್‌ಟಿಸಿ ಹೇಳಿದೆ.ಜೊತೆಗೆ ವಸ್ತುವನ್ನು ಮಾತ್ರ ಫೋಕಸ್ ಮಾಡಿ ಅದರ ಸುತ್ತಲಿನ ದೃಶ್ಯವನ್ನು ಕಾಣದದಂತೆ ಈ ಸ್ಮಾರ್ಟ್‌ಫೋನ್‌ಲ್ಲಿ ಚೆನ್ನಾಗಿ ಮಸುಕು ಮಾಡಬಹುದಾಗಿದೆ.ಇನ್ನು ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿ ಫೋಟೋ ಕ್ಲಿಕ್ಕಿಸಲು ಟೈಮರ್‌ನ್ನು ಸಹ ಎಚ್‌ಟಿಸಿ ಈ ಸ್ಮಾರ್ಟ್‌ಫೋನಿಗೆ ನೀಡಿದೆ.
ಈ ಸ್ಮಾರ್ಟ್‌ಫೋನ್ ಲಾಕ್ ಮತ್ತು ಅನ್‌ಲಾಕ್ ಮಾಡಲು ಹೊಸ ವಿಶೇಷತೆಗಳನ್ನು ಎಚ್‌ಟಿಸಿ ಈ ಸ್ಮಾರ್ಟ್‌ಫೋನ್‌ಗೆ ನೀಡಿದೆ.ವಿವಿಧ ಜಾಲತಾಣಗಳ ಮಾಹಿತಿಗಳು,ಅಪ್‌ಡೇಟ್‌ಗಳು ಎಲ್ಲಾ ಸ್ಮಾರ್ಟ್‌ಫೋನಲ್ಲಿ ಒಂದೇ ಪೇಜ್ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ಎಚ್‌ಟಿಸಿ ಕಳೆದ ವರ್ಷ ಈ ಎಲ್ಲಾ ಮಾಹಿತಿಗಳನ್ನು ನೋಡಲು ಬ್ಲಿಂಕ್ ಫೀಡ್ ಆಪ್‌ನ್ನು ತಯಾರಿಸಿದೆ. ಈ ಬ್ಲಿಂಕ್ ಫೀಡ್ ಆಪ್‌ನ್ನು ಈ ಸ್ಮಾರ್ಟ್‌ಫೋನಲ್ಲಿ ಹೋಮ್ ಸ್ಕ್ರೀನಲ್ಲೇ ಸುಲಭವಾಗಿ ಒಪನ್ ಮಾಡಬಹುದು. ಹೋಮ್ ಸ್ಕ್ರೀನ್ ಬಲಗಡೆಯಿಂದ ಎಡಗಡೆ ಸ್ಲೈಡ್ ಮಾಡಿ ಬ್ಲಿಂಕ್ ಫೀಡ್ ಆಪ್ ಒಪನ್ ಆಗುತ್ತದೆ. ಇನ್ನು ಎಡಗಡೆಯಿಂದ ಬಲಗಡೆಗೆ ಸ್ಲೈಡ್ ಮಾಡಿದ್ರೆ ಹೋಮ್ ಸ್ಕ್ರೀನ್ ಅನ್‌ಲಾಕ್ ಅಗುತ್ತದೆ.
ಮುಂದುಗಡೆ ಡ್ಯುಯಲ್ ಸ್ಪೀಕರ್ ಹೊಂದಿರುವ ಎಚ್‌ಟಿಸಿ ಒನ್ ಎಂ8 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆ ಏಪ್ರಿಲ್ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.ಹೊಸ ಸ್ಮಾರ್ಟ್‌ಫೋನ್ ಅಮೆರಿಕದ ಮಾರುಕಟ್ಟೆಯಲ್ಲಿ ಲಭ್ಯವಿದ್ದು,16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 649 ಡಾಲರ್(ಅಂದಾಜು 39 ಸಾವಿರ) ಬೆಲೆಯನ್ನು ಎಚ್‌ಟಿಸಿ ನಿಗದಿಪಡಿಸಿದೆ.
ಎಚ್‌ಟಿಸಿ ಒನ್ ಎಂ8
ವಿಶೇಷತೆ:
ಸಿಂಗಲ್ ಸಿಮ್ (ನ್ಯಾನೋ ಸಿಮ್)
5 ಇಂಚಿನ ಸುಪರ್ ಅಮೊಲೆಡ್ ಕೆಪಾಸಿಟಿವ್ ಸ್ಕ್ರೀನ್(1080 x 1920 ಪಿಕ್ಸೆಲ್,441 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಓಎಸ್
2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್
Adreno 330 ಗ್ರಾಫಿಕ್ ಪ್ರೊಸೆಸರ್
16/32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್
ಹಿಂದುಗಡೆ 4 ಆಲ್ಟ್ರಾ ಪಿಕ್ಸೆಲ್ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಕ್ಯಾಮೆರಾ
ಮುಂದುಗಡೆ 5 ಎಂಪಿ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ಬ್ಲೂಟೂತ್,ಜಿಪಿಎಸ್,ಎನ್‌ಎಫ್‌ಸಿ,
ಎಕ್ಸಲರೋಮೀಟರ್,ಲೈಟ್,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್
2600 mAh ಬ್ಯಾಟರಿ
ಮುಂದಿನ ಪುಟದಲ್ಲಿ ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಚ್‌ಟಿಸಿ ಒನ್ ಮತ್ತು ಹೊಸ ಎಚ್‌ಟಿಸಿ ಒನ್ ಎಂ8 ವಿಶೇಷತೆಗಳನ್ನು ಹೋಲಿಕೆ ಮಾಡಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಒನ್ ಮೈಕ್ರೋಸಿಮ್ ಹಾಕಬಹುದಾಗಿದ್ದು,ಹಾರ್ಡ್‌ವೇರ್ ಬಟನ್ ನೊಂದಿಗೆ ಬಿಡುಗಡೆಯಾಗಿತ್ತು. ಆದರೆ ಹೊಸ ಎಚ್‌ಟಿಸಿ ಸ್ಮಾರ್ಟ್‌ಫೋನಲ್ಲಿ ನ್ಯಾನೋ ಸಿಮ್ ಹಾಕಬಹುದಾಗಿದ್ದು, ನ್ಯಾವಿಗೇಶನ್‌ಗಾಗಿ ಸ್ಕ್ರೀನ್‌ನಲ್ಲೇ ಬಟನ್ ವಿಶೇಷತೆಯನ್ನು ಎಚ್‌ಟಿಸಿ ಈ ಸ್ಮಾರ್ಟ್‌ಫೋನಿಗೆ ನೀಡಿದೆ.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಒನ್ ಎಂ8 ಎಚ್‌ಟಿಸಿ ಸೆನ್ಸ್ ಯೂಸರ್ ಇಂಟರ್‌ಫೇಸ್ ಇರುವ ಆಂಡ್ರಾಯ್ಡ್ 4.4.2ಕಿಟ್‌ಕ್ಯಾಟ್ ಓಎಸ್‌ನೊಂದಿಗೆ ಬಿಡುಗಡೆಯಾಗಿದ್ದರೆ, ಎಚ್‌ಟಿಸಿ ಒನ್ 4.1.2 ಜೆಲ್ಲಿ ಬೀನ್ ಓಎಸ್ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಿಟ್‌ಕ್ಯಾಟ್ ಓಎಸ್‌ಗೆ ಅಪ್‌ಗ್ರೇಡ್ ಅವಕಾಶ ನೀಡಲಿದ್ದೇವೆ ಎಂದು ಎಚ್‌ಟಿಸಿ ತಿಳಿಸಿದೆ.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಒನ್ ಎಂ8 5 ಇಂಚಿನ ಸುಪರ್ ಎಲ್‌ಸಿಡಿ ಕೆಪಾಸಿಟಿವ್ ಸ್ಕ್ರೀನ್( 1080 x 1920 ಪಿಕ್ಸೆಲ್,441 ಪಿಪಿಐ,ಕಾರ್ನಿಂಗ್ ಗೊರಿಲ್ಲ ಗ್ಲಾಸ್3) ಬಿಡುಗಡೆಯಾಗಿದ್ದರೆ,ಎಚ್‌ಟಿಸಿ ಒನ್ 4.7 ಇಂಚಿನ ಸುಪರ್ ಎಲ್‌ಸಿಡಿ ಕೆಪಾಸಿಟಿವ್ ಸ್ಕ್ರೀನ್( 1080 x 1920 ಪಿಕ್ಸೆಲ್,469 ಪಿಪಿಐ,ಕಾರ್ನಿಂಗ್ ಗೊರಿಲ್ಲ ಗ್ಲಾಸ್2)ನಲ್ಲಿ ಬಿಡುಗಡೆಯಾಗಿತ್ತು.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
146.4x70.6x9.4 ಮಿ.ಮೀ ಗಾತ್ರ,160 ಗ್ರಾಂ ತೂಕವನ್ನು ಎಚ್‌ಟಿಸಿ ಒನ್ ಎಂ8 ಹೊಂದಿದ್ದರೆ,137.4x68.2x9.3 ಮಿ.ಮೀ ಗಾತ್ರ,143 ಗ್ರಾಂ ತೂಕವನ್ನು ಎಚ್‌ಟಿಸಿ ಒನ್ ಹೊಂದಿತ್ತು.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಒನ್ ಎಂ8 16/32 ಜಿಬಿ ಆಂತರಿಕ ಮೆಮೊರಿ 2ಜಿಬಿ ರ್‍ಯಾಮ್ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಎಚ್‌ಟಿಸಿ ಒನ್ 32/64 ಜಿಬಿ ಆಂತರಿಕ ಮೆಮೊರಿ, 2 GB ರ್‍ಯಾಮ್‌ನೊಂದಿಗೆ ಬಿಡುಗಡೆಯಾಗಿದ್ದು, ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್ ಸ್ಲಾಟ್ ನೀಡಿರಲಿಲ್ಲ.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಒನ್ ಎಂ8 ಹಿಂದುಗಡೆ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 4 ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ ನೀಡಿದ್ದು,2688 x 1520 ಪಿಕ್ಸೆಲ್ ರೆಸೂಲೂಶನ್‌ವರೆಗಿನ ಚಿತ್ರಗಳನ್ನು ತೆಗೆಯಬಹುದಾಗಿದೆ. ಎಂ8 ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.
ಎಚ್‌ಟಿಸಿ ಒನ್ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 4 ಆಲ್ಟ್ರಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು 2688 x 1520 ಪಿಕ್ಸೆಲ್ ರೆಸೂಲೂಶನ್‌ವರೆಗಿನ ಚಿತ್ರಗಳನ್ನು ತೆಗೆಯಬಹುದಾಗಿದೆ. ಎಚ್‌ಟಿಸಿ ಒನ್ ಮುಂದುಗಡೆ 2.1 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿತ್ತು.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಂ8 2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್, Adreno 330 ಗ್ರಾಫಿಕ್ ಪ್ರೊಸೆಸರ್‌ನ್ನು ಒಳಗೊಂಡಿದೆ. ಎಚ್‌ಟಿಸಿ ಒನ್ 1.7 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್ ಕೋರ್ ಪ್ರೊಸೆಸರ್ Adreno 320 ಗ್ರಾಫಿಕ್ ಪ್ರೊಸೆಸರ್‌ನ್ನು ಒಳಗೊಂಡಿದೆ.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿ ಎಂ8 ತೆಗೆಯಲು ಅಸಾಧ್ಯವಾದ 2600 mAh ಬ್ಯಾಟರಿ ಹೊಂದಿದ್ದರೆ, ಎಚ್‌ಟಿಸಿ ಒನ್ ತೆಗೆಯಲು ಅಸಾಧ್ಯವಾದ 2300 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿತ್ತು.

ಎಚ್‌ಟಿಸಿ ಒನ್ ವರ್ಸಸ್ ಎಚ್‌ಟಿಸಿ ಎಂ ಒನ್ ಎಂ8
ಎಚ್‌ಟಿಸಿಒನ್‌ನಲ್ಲಿದ್ದಂತೆ 3ಜಿ,4ಜಿ,ಬ್ಲೂಟೂತ್,ಜಿಪಿಎಸ್,ಎನ್‌ಎಫ್‌ಸಿ ,ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ವಿಶೇಷತೆಗಳನ್ನು ಹೊಸ ಎಚ್‌ಟಿಸಿ ಸ್ಮಾರ್ಟ್‌ಫೋನ್ ಒಳಗೊಂಡಿದೆ.


Click it and Unblock the Notifications