Home
ಮೊಬೈಲ್

Huawei Enjoy 70X ಬಿಡುಗಡೆಗೆ ಸಿದ್ಧ; 6100mAh ಬ್ಯಾಟರಿ.. 512GB ಸ್ಟೋರೇಜ್.. ಇಷ್ಟೆನಾ ಬೆಲೆ?

ಹುವಾವೇ ಹೊಸ ಮೊಬೈಲ್ ಬಿಡುಗಡೆಗೆ ಸಜ್ಜಾಗಿದೆ. ಈ ಫೋನ್ ಕಡಿಮೆ ಬೆಲೆಗೆ ಮಾರುಕ್ಟೆಗೆ ಲಗ್ಗೆ ಇಡಲಿದೆ. ಹೌದು, ಕಂಪನಿಯು ಹೊಸ ಹುವಾವೇ 'ಎಂಜಾಯ್' (Huawei Enjoy) ಸರಣಿಯನ್ನು ಪರಿಚಯಿಸಲಿದೆ. ಇದರಲ್ಲಿ ಹುವಾವೇ ಎಂಜಾಯ್ 70X (Huawei Enjoy 70X) ಲೋಕಾರ್ಪಣೆಯಾಗಲಿದೆ. ಲಾಂಚ್‌ಗೂ ಮೊದಲೇ ಈ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಬಾಗಿದ ಎಡ್ಜ್ ಡಿಸ್ಪ್ಲೇ ಹೊಂದಿರುತ್ತದೆ. ಬನ್ನಿ, ಈ ಫೋನಿನ ಬಿಡುಗಡೆ ದಿನಾಂಕ ಮತ್ತು ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ.

ಹುವಾವೇ ಎಂಜಾಯ್ 70X ಮೊಬೈಲ್ ಜನವರಿ 3 (ನಾಳೆ) ರಂದು ಬಿಡುಗಡೆಯಾಗಲಿದೆ. ಇದು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ಈ ಫೋನಿನಲ್ಲಿ 6.7 ಇಂಚಿನ ದೊಡ್ಡ ಡಿಸ್ಪ್ಲೇ ಲಭ್ಯವಿರುತ್ತದೆ. ಇದು Kirin 8000A ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತದೆ. ಹಾಗೆಯೇ 8GB RAM + 512GB ಸ್ಟೋರೇಜ್, 5000mAh ಗಿಂತ ದೊಡ್ಡ ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈ ಫೋನಿನ ಬೆಲೆ ಮತ್ತು ಕಲರ್ ತಿಳಿಯಲು ಮುಂದೆ ಓದಿ.

ನಾಳೆ Huawei Enjoy 70X ಲಾಂಚ್; 6100mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಹುವಾವೇ ಎಂಜಾಯ್ 70X ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹುವಾವೇ ಎಂಜಾಯ್ 70X ಸ್ಮಾರ್ಟ್‌ಫೋನ್ 6.7 ಇಂಚಿನ ದೊಡ್ಡ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಸ್ಟೈಲ್‌ನ ಬಾಗಿದ ಎಡ್ಜ್ ಡಿಸ್ಪ್ಲೇ ಆಗಿದೆ. ಈ ಮೊಬೈಲ್ 1224 x 2700 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ.

ಪ್ರೊಸೆಸರ್ ಸಾಮರ್ಥ್ಯ

ಮುಂಬರುವ ಹುವಾವೇ ಎಂಜಾಯ್ 70X ಮೊಬೈಲ್ ಕಂಪನಿಯ ಸ್ವಂತ Kirin 8000A ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈ ಕಿರಿನ್ 8000A ಪ್ರೊಸೆಸರ್‌ ಅನ್ನು ಈವರೆಗೆ ಯಾವುದೇ ಫೋನಿನಲ್ಲಿ ಬಳಸಿಲ್ಲ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಧಾರಿತ HarmonyOS 4.3 ನಲ್ಲಿ ಕೆಲಸ ನಿರ್ವಹಿಸುತ್ತದೆ.

ಈ ಸುದ್ದಿ ಓದಿದ್ದೀರಾ?: ಬಿಗ್ ಆಫರ್! 17000 ಡಿಸ್ಕೌಂಟ್.. 512GB ಸ್ಟೋರೇಜ್.. 32MP ಸೆಲ್ಫಿ ಕ್ಯಾಮೆರಾ; ಯಾವ ಫೋನ್?

ಸ್ಟೋರೇಜ್ ಆಯ್ಕೆ

ಹುವಾವೇ ಎಂಜಾಯ್ 70X ಫೋನ್ 8GB RAM ಹೊಂದಿರಲಿದೆ. ಈ ಫೋನಿನಲ್ಲಿ 128GB ಸ್ಟೋರೇಜ್, 256GB ಸ್ಟೋರೇಜ್ ಮತ್ತು 512GB ಸ್ಟೋರೇಜ್ ಆಯ್ಕೆ ಲಭ್ಯವಿರುತ್ತದೆ. ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಸ್ಟೋರೇಜ್‌ ಹೆಚ್ಚಿಸಬಹುದು.

ನಾಳೆ Huawei Enjoy 70X ಲಾಂಚ್; 6100mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಕ್ಯಾಮೆರಾ ಸೆಟಪ್

ಹುವಾವೇ ಎಂಜಾಯ್ 70X ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಈ ಮೊಬೈಲ್ ಡ್ಯುಯಲ್ ಟೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಇದು 50 ಮೆಗಾಪಿಕ್ಸೆಲ್ RYYB ಡಾರ್ಕ್ ಲೈಟ್ ಮುಖ್ಯ ಕ್ಯಾಮೆರಾ ಹೊಂದಿರುತ್ತದೆ. ಜೊತೆಗೆ 2 ಮೆಗಾಪಿಕ್ಸೆಲ್ ಎಐ ದ್ವಿತೀಯ ಕ್ಯಾಮೆರಾ ಇರಲಿದೆ. ಈ ಫೋನಿನಲ್ಲಿ ಪಿಲ್ ಆಕಾರದ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹುವಾವೇ ಎಂಜಾಯ್ 70X ಮೊಬೈಲ್ ಅನ್ನು 6100mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 40W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುವುದು.

ಹುವಾವೇ ಎಂಜಾಯ್ 70X ಫೋನಿನ ಬೆಲೆ (ನಿರೀಕ್ಷಿತ)

ಹುವಾವೇ ಎಂಜಾಯ್ 70X ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಬಿಡುಗಡೆಯಾಗಲಿದೆ. ಫೋನಿನ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 21,000 ರೂ. ಆಗಿರುತ್ತದೆ. 8GB RAM + 256GB ಸ್ಟೋರೇಜ್ ಆಯ್ಕೆಯ ಬೆಲೆ 23,500 ರೂ. ಇರಲಿದೆ.8GB RAM + 512GB ಸ್ಟೋರೇಜ್‌ ವೇರಿಯಂಟ್ ಅನ್ನು 26,900 ರೂ.ಗೆ ಪರಿಚಯಿಸಲಾಗುವುದು. ಈ ಫೋನನ್ನು ಲೇಕ್ ಗ್ರೀನ್, ಸ್ಪ್ರೂಸ್ ಬ್ಲೂ, ಸ್ನೋ ವೈಟ್ ಮತ್ತು ಗೋಲ್ಡನ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು.

Best Mobiles in India

English summary
Huawei Enjoy 70X Price and Specifications Revealed Ahead of Launch: What to Expect.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+