Home
ಮೊಬೈಲ್

Huawei: ಜಬರ್ದಸ್ತ್ ಫೋನ್ ಲಾಂಚ್; 6100mAh ಬ್ಯಾಟರಿ.. 50MP ಕ್ಯಾಮೆರಾ.. ಬೆಲೆ ಎಷ್ಟು ಗೊತ್ತಾ?

ಹುವಾವೇ ತನ್ನ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿದೆ. ಸದ್ದಿಲ್ಲದೆ ಇಂದು ಹೊಸ ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಹೌದು, ಮೊಬೈಲ್ ಪ್ರಿಯರು ಎದುರು ನೋಡುತ್ತಿದ್ದ ಹುವಾವೇ ಎಂಜಾಯ್ 70x ವೈಟಾಲಿಟಿ ಎಡಿಷನ್ (Huawei Enjoy 70x Vitality Edition) ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಕಂಪನಿಯು ಇದನ್ನು ತನ್ನ ಎಂಜಾಯ್ ಸರಣಿಯ ಅಡಿಯಲ್ಲಿ ಪರಿಚಯಿಸಿದೆ. ಇದು ಸ್ಟೈಲಿಶ್ ಲುಕ್, ಶಕ್ತಿಶಾಲಿ ಬ್ಯಾಟರಿ ಮತ್ತು ಅದ್ಭುತ ಡಿಸ್ಪ್ಲೇ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳ ಬನ್ನಿ ಇಲ್ಲಿದೆ ಡೀಟೈಲ್ಸ್.

ಹುವಾವೇ ಎಂಜಾಯ್ 70x ವೈಟಾಲಿಟಿ ಆವೃತ್ತಿ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. ನೀವು ಈ ಫೋನನ್ನು ಮೂರು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. ಈ ಹೊಸ ಸ್ಮಾರ್ಟ್‌ಫೋನ್ ಹಾರ್ಮನಿಓಎಸ್ 4.2, 6100mAh ದೊಡ್ಡ ಬ್ಯಾಟರಿ ಮತ್ತು 40W ಟರ್ಬೊ ವೈರ್ಡ್ ಚಾರ್ಜಿಂಗ್, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 6.78 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಈ ಫೋನಿನ ಇನ್ನಿತರ ವಿಶೇಷತೆಗಳು ಈ ಕೆಳಗಿನಂತಿವೆ.

Huawei: ಹೊಸ ಫೋನ್ ಲಾಂಚ್; 6100mAh ಬ್ಯಾಟರಿ, 50MP ಕ್ಯಾಮೆರಾ; ಬೆಲೆ ನೋಡಿ

ಹುವಾವೇ ಎಂಜಾಯ್ 70x ವೈಟಾಲಿಟಿ ಎಡಿಷನ್ ಮೊಬೈಲ್ ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.1, ಡ್ಯುಯಲ್ ಬ್ಯಾಂಡ್ ವೈ-ಫೈ, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು ಡ್ಯುಯಲ್ ನ್ಯಾನೋ ಸಿಮ್ ಸ್ಲಾಟ್ ಇತರೆ ವೈಶಿಷ್ಟ್ಯಗಳಿವೆ. ಇದಲ್ಲದೆ, ಈ ಫೋನ್ ಬೀಡೌ ಸ್ಯಾಟಲೈಟ್ ಮೆಸೇಜಿಂಗ್, SGS ಫೈವ್ ಸ್ಟಾರ್ ಪ್ರಮಾಣೀಕರಣ, 360 ಡಿಗ್ರಿ ಬ್ಲ್ಯಾಕ್ ಆರ್ಮರ್ ಬಾಡಿ, ಟೆಕ್ಸ್ಟ್ ಥೀಮ್ 2.0 ಮತ್ತು ಎಕ್ಸ್ ಕೀ ಡೈರೆಕ್ಟ್ ಆಕ್ಸೆಸ್‌ ಸೇರಿದಂತೆ ಮುಂತಾದ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಹುವಾವೇ ಎಂಜಾಯ್ 70x ವೈಟಾಲಿಟಿ ಆವೃತ್ತಿಯ ವೈಶಿಷ್ಟ್ಯಗಳು

ಹುವಾವೇ ಎಂಜಾಯ್ 70x ವೈಟಾಲಿಟಿ ಎಡಿಷನ್ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 437 ppi ಸಾಂದ್ರತೆ, 120Hz ರಿಫ್ರೆಶ್ ದರ ಮತ್ತು 2160Hz PWM ಡಿಮ್ಮಿಂಗ್‌ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇ ಅಲ್ಯುಮಿನೋಸಿಲಿಕೇಟ್ ಗಾಜಿನ ರಕ್ಷಣೆ ಪಡೆದಿದೆ. ಹಾಗೆಯೇ ಎಐ (AI) ವೆಟ್ ಟಚ್ ಮತ್ತು P3 ವೈಡ್ ಕಲರ್ ಗ್ಯಾಮಟ್ ಬೆಂಬಲ ಸಹ ಹೊಂದಿದೆ.

ಹುವಾವೇ ಎಂಜಾಯ್ 70x ವೈಟಾಲಿಟಿ ಎಡಿಷನ್ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾವು 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಲೆನ್ಸ್ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಮೊಬೈಲ್ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಹುವಾವೇ ಎಂಜಾಯ್ 70x ವೈಟಾಲಿಟಿ ಆವೃತ್ತಿಯು ದೊಡ್ಡ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಕಂಪನಿಯು ಈ ಫೋನಿನಲ್ಲಿ 6100mAh ಸಾಮರ್ಥ್ಯ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 40W ಟರ್ಬೊ ವೈರ್ಡ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಫೋನ್ ಕಂಪನಿಯ ಸ್ವಂತ ಹಾರ್ಮನಿಓಎಸ್ 4.2 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಈ ಮೊಬೈಲ್ 189 ಗ್ರಾಂ ತೂಕ ಹೊಂದಿದೆ. ಇದರ ಗಾತ್ರ 164×74.88×7.98mm ಇದೆ.

ಹುವಾವೇ ಎಂಜಾಯ್ 70x ವೈಟಾಲಿಟಿ ಆವೃತ್ತಿಯ ಬೆಲೆ ಮತ್ತು ಲಭ್ಯತೆ

ಹುವಾವೇ ಎಂಜಾಯ್ 70x ವೈಟಾಲಿಟಿ ಆವೃತ್ತಿಯನ್ನು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಐಸ್ ಬ್ಲ್ಯಾಕ್, ಓಲ್ಡ್ ಬ್ಲ್ಯಾಕ್ ಮತ್ತು ಸ್ನೋಯಿ ವೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆ 17,300 ರೂ. ಆಗಿದೆ. ಹಾಗೆಯೇ 256GB ಸ್ಟೋರೇಜ್ ವೇರಿಯಂಟ್ 19,600 ರೂ.ಗೆ ಬಿಡುಗಡೆಯಾಗಿದೆ. ಇನ್ನು ಟಾಪ್ ವೇರಿಯಂಟ್ 512GB ಸ್ಟೋರೇಜ್ 23,100 ರೂ.ಗೆ ಮಾರಾಟವಾಗಲಿದೆ. ಪ್ರಸ್ತುತ ಈ ಮೊಬೈಲ್ ಚೀನಾದಲ್ಲಿ ಹುವಾವೇ ಮಾಲ್ ಮೂಲಕ ಖರೀದಿಗೆ ಲಭ್ಯವಿದೆ. ಕಂಪನಿಯು ಆದಷ್ಟು ಬೇಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

Best Mobiles in India

English summary
Huawei Enjoy 70x Vitality Edition with 6100mAh battery launched: price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+