ಹುವಾವೇ ಕಂಪೆನಿಯಿಂದ ಸ್ಮಾರ್ಟ್‌ ಇನ್ಸುಲೇಶನ್‌ ಕಪ್‌ ಬಿಡುಗಡೆ!

|

ಚೀನಾದ ಟೆಕ್‌ ದೈತ್ಯ ಹುವಾವೆ ಟೆಕ್‌ವಲಯದಲ್ಲಿ ಈಗಾಗ್ಲೆ ತನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಸಂಚಲನ ಸೃಷ್ಟಿಸಿರೋದು ಗೊತ್ತೆ ಇದೆ. ಇದಲ್ಲದೆ ತನ್ನ ಸ್ಮಾರ್ಟ್‌ ಅಕ್ಸಿಸರೀಸ್‌ ಮೂಲಕ ಸಖತ್‌ ಸೌಂಡ್‌ ಮಾಡ್ತಿದೆ. ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸಿರೋ ಹುವಾವೇ ಇದೀಗ ಸ್ಮಾರ್ಟ್‌ ಇನ್ಸುಲೇಶನ್‌ ಕಪ್‌ ಅನ್ನು ಪರಿಚಯಿಸಿದೆ. ಈ ಮೂಲಕ ಟೆಕ್ ವಲಯದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಮುಂದಾಗಿದೆ.

ಹೌದು

ಹೌದು, ಚೀನಾದ ಸ್ಮಾರ್ಟ್‌ಫೋನ್ ತಯಾರಕ ಹುವಾವೇ ಕಂಪೆನಿ ತನ್ನ ಹೊಸ ಸ್ಮಾರ್ಟ್ ಇನ್ಸುಲೇಶನ್‌ ಕಪ್‌ ಅನ್ನು ಲಾಂಚ್‌ ಮಾಡಿದೆ. ಈ ಹುವಾವೇ ಸ್ಮಾರ್ಟ್ ಇನ್ಸುಲೇಶನ್‌ ಕಪ್ ಹುವಾವೇ ಮಾಲ್‌ನಲ್ಲಿ ಲಿಸ್ಟ್‌ ಮಾಡಲಾಗಿದೆ. ಈ ಹೊಸ ಸ್ಮಾರ್ಟ್ ಇನ್ಸುಲೇಶನ್‌ ಕಪ್ ರಿಯಲ್‌ ಟೈಮ್‌ ವೆದರ್‌ ಡಿಸ್‌ಪ್ಲೇ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಈ ಸ್ಮಾಟ್‌ ಕಪ್‌ ಮೂಲಕ ಸೆಕೆಂಡುಗಳಲ್ಲಿ ನೀರಿನ ಶುದ್ಧತೆಯನ್ನು ಅಳೆಯಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್ ಕಪ್ ಬೆಲೆ RMB 129 (ಸುಮಾರು 1,370 ರೂ.)ಆಗಿದೆ.

ಇನ್ಸುಲೇಶನ್

ಇನ್ನು ಈ ಸ್ಮಾರ್ಟ್ ಇನ್ಸುಲೇಶನ್ ಕಪ್‌ ತ್ರಿ ಲೇಯರ್‌ ಸ್ಟೇನ್ಲೆಸ್ ಸ್ಟೀಲ್ ರಚನೆಯನ್ನು ಹೊಂದಿದೆ. ಇದು 24 ಗಂಟೆಗಳ ದೀರ್ಘಕಾಲೀನ ಉಷ್ಣ ಇನ್ಸುಲೇಶನ್‌ ಅನ್ನು ಹೊಂದಿದೆ. ಅಲ್ಲದೆ ಈ ಡಿವೈಸ್‌ ತುಂಬಾ ಗಟ್ಟಿಮುಟ್ಟಾಗಿದ್ದು, ಕೆಳಗಡೆ ಬಿದ್ದರೂ ಸಹ ಯಾವುದೇ ರೀತಿಯಲ್ಲೂ ಹೊಡೆಯುವುದಿಲ್ಲ ಎಂಬುದನ್ನ ಕಂಪೆನಿ ಹೇಳಿಕೊಂಡಿದೆ. ಜೊತೆಗೆ ಈ ಸ್ಮಾರ್ಟ್ ನಿರೋಧನ ಕಪ್ ಮೇಲ್ಮೈ ನ ಬಾಡಿಯನ್ನು ಸ್ಕ್ರಾಚ್-ನಿರೋಧಕವಾಗಿಡುತ್ತದೆ. ಇನ್ನು ಈ ಕಪ್‌ನ ಮೇಲ್ಭಾಗವು ಮುಚ್ಚಳವೂ ಆಗಿದ್ದು, ತಾಪಮಾನವನ್ನು ಸಹ ಡಿಸ್‌ಪ್ಲೇ ಮಾಡುವ ಸಾಮರ್ಥ್ಯ ಹೊಂದಿದೆ.

ತಾಪಮಾನ

ಇದು ವಿಭಿನ್ನ ತಾಪಮಾನ ಶ್ರೇಣಿಗಳಿಗೆ ಮೂರು ಬಣ್ಣ ಪ್ರಾಂಪ್ಟ್‌ಗಳನ್ನು ಒದಗಿಸುತ್ತದೆ. ಅಲ್ಲದೆ ಇದರಲ್ಲಿನ ನೀಲಿ ಬಣ್ಣವು 35 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನವನ್ನು ಪ್ರತಿನಿಧಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರಲ್ಲಿ 36 ಡಿಗ್ರಿ ಮತ್ತು 50 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ಕಿತ್ತಳೆ ಬಣ್ಣದಿಂದ ಡಿಸ್‌ಪ್ಲೇ ಮಾಡಲಾಗುತ್ತದೆ. ಅಲ್ಲದೆ ಇದರಲ್ಲಿ ಕೆಂಪು ಬಣ್ಣ ಕೂಡ ಇದೆ. ಇದು 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ಪ್ರತಿನಿಧಿಸುತ್ತದೆ.

ಸ್ಮಾರ್ಟ್‌ಕಪ್‌

ಇನ್ನು ಈ ಸ್ಮಾರ್ಟ್‌ಕಪ್‌ ಟಿಡಿಎಸ್ ನೀರಿನ ಗುಣಮಟ್ಟ ವನ್ನು ಅಳೆಯಲಿದೆ.ಅಲ್ಲದೆ ಇದರಲ್ಲಿನ ಈ ಡಿಸ್‌ಪ್ಲೇಯನ್ನು ದೀರ್ಘಕಾಲ ಒತ್ತುವ ಮೂಲಕ ಬಳಕೆದಾರರು ಟಿಡಿಎಸ್ ಅನ್ನು ಕಾರ್ಯಗತಗಳಿಸಬಹುದು. ಜೊತೆಗೆ ಈ ಸ್ಮಾರ್ಟ್ ಇನ್ಸುಲೇಶನ್‌ ಕಪ್ ಐದು ಸೆಕೆಂಡುಗಳ ಕಾಲ ನೀರಿನ ಕಪ್ ಅನ್ನು ತಲೆಕೆಳಗಾಗಿಸುವ ಮೂಲಕ ಸ್ವಯಂಚಾಲಿತವಾಗಿ ಶುದ್ಧತೆಯನ್ನು ಪತ್ತೆ ಮಾಡುತ್ತದೆ. ಇನ್ನು ಬಳಕೆದಾರರು ಸ್ಮಾರ್ಟ್ ಲೈಫ್ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು.

ಜೊತೆಗೆ

ಜೊತೆಗೆ 15 ಮಾದರಿಯ ಕುಡಿಯುವ ನೀರಿನ ಅಲಾರಾಂ ಗಡಿಯಾರಗಳನ್ನು ಹೊಂದಿಸಬಹುದಾಗಿದೆ. ಇನ್ನು ಬಳಕೆಯಲ್ಲಿಲ್ಲದಿದ್ದಾಗ ಇದರ ಮುಚ್ಚಳವು ಮಿಂಚುತ್ತದೆ ಮತ್ತು ಸ್ವಯಂಚಾಲಿತವಾಗಿ ಕಂಪಿಸುತ್ತದೆ. ಈ ಸ್ಮಾರ್ಟ್ ಇನ್ಸುಲೇಶನ್‌ ಕಪ್‌ ಐಪಿಎಕ್ಸ್ 7 ನೀರಿನ ನಿರೋಧಕವಾಗಿದೆ. ಅಲ್ಲದೆ ಕಪ್‌ನ ಒಳಭಾಗವನ್ನು ನೇರವಾಗಿ ತೊಳೆಯಬಹುದು. ಜೊತೆಗ ಇದು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ ಮತ್ತು ಮೇಲ್ಭಾಗವು ಹೀರಿಕೊಳ್ಳುವ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬಳಸುತ್ತದೆ. ಇನ್ನು ಈ ಸ್ಮಾರ್ಟ್ ಕಪ್ ಬೆಲೆ RMB 129 (ಸುಮಾರು 1,370 ರೂ.)ಆಗಿದೆ.

Best Mobiles in India

Read more about:
English summary
Huawei Smart Insulation Cup with real-time temperature display launched: Price, Features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X