ಲಾಂಚ್ ಆಯ್ತು ಹುವಾಯಿ ಫೋಲ್ಡೆಬಲ್ ಫೋನ್ 'ಮೇಟ್ X'; ಅಬ್ಬರಿಸುವುದು ಫಿಕ್ಸ್.!

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದೀಗ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಹವಾ ಜೋರಾಗಿದ್ದು, ಇತ್ತೀಚಿಗೆ ಸ್ಯಾಮ್‌ಸಂಗ್ 'ಫೊಲ್ಡ್' ಹೆಸರಿನ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಪರಿಚಯಿಸಿತ್ತು. ಹಾಗೇ ಹುವಾಯಿ ಸ್ಮಾರ್ಟ್‌ಫೋನ್ ಕಂಪನಿಯು ಸಹ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಬಿಡುವುದಾಗಿ ಈ ಮೊದಲೇ ಘೋಷಿಸಿತ್ತು, ಇದೀಗ ತನ್ನ 'ಮೇಟ್ X' ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ.

ಲಾಂಚ್ ಆಯ್ತು ಹುವಾಯಿ ಫೋಲ್ಡೆಬಲ್ ಫೋನ್ 'ಮೇಟ್ X'; ಅಬ್ಬರಿಸುವುದು ಫಿಕ್ಸ್.!

ಹೌದು, ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ 2019' ಕಾರ್ಯಕ್ರಮದಲ್ಲಿ ಹುವಾಯಿ ಕಂಪನಿಯು ತನ್ನ 'ಮೇಟ್ X' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಇದು ಮೊದಲ 5G ನೆಟವರ್ಕ್ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಎನಿಸಿಕೊಂಡಿದೆ. ಆದರೆ ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಈ ವರ್ಷದ ಮಧ್ಯಂತರದಿಂದ ಮಾರಾಟ ಆರಂಭಿಸಲಿದೆ ಎನ್ನುವ ಮಾಹಿತಿಯು ತಿಳಿದು ಬಂದಿದೆ.

ಲಾಂಚ್ ಆಯ್ತು ಹುವಾಯಿ ಫೋಲ್ಡೆಬಲ್ ಫೋನ್ 'ಮೇಟ್ X'; ಅಬ್ಬರಿಸುವುದು ಫಿಕ್ಸ್.!

'ಹುವಾಯಿ ಮೇಟ್ X' ಫೋಲ್ಡೆಬಲ್ ಫೋನ್ 8GB RAM ಮತ್ತು 512GB ಆಂತರಿಕ ಸಂಗ್ರಹ ಸಾಮರ್ಥ್ಯದ ವೇರಿಯಂಟ್‌ನಲ್ಲಿ ದೊರೆಯಲಿದ್ದು, ಭಾರತದಲ್ಲಿ ಇದರ ಬೆಲೆಯು ಸುಮಾರು 2,09,400ರೂ.ಗಳು ಇರುವ ಸಾಧ್ಯತೆಗಳಿವೆ. ಹಾಗಾದರೇ ಹುವಾಯಿ 'ಮೇಟ್ X' ಫೋಲ್ಡೆಬಲ್ ಸ್ಮಾರ್ಟ್‌ಫೋನಿನ ಇನ್ನಿತರೇ ವಿಶೇಷ ಫೀಚರ್ಸ್‌ಗಳು ಯಾವವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫುಲ್‌ ವ್ಯೂವ್ ಡಿಸ್‌ಪ್ಲೇ ರಚನೆ

ಫುಲ್‌ ವ್ಯೂವ್ ಡಿಸ್‌ಪ್ಲೇ ರಚನೆ

ಅಂಚು ರಹಿತ ಸ್ಮಾರ್ಟ್‌ಫೋನ್‌ಗಳಂತೆ ಈ ಫೋಲ್ಡೆಬಲ್ ಸ್ಮಾರ್ಟ್‌ಫೋನ್ ಅಂಚು ರಹಿತ ಪೂರ್ಣ OLED ಪರದೆಯ ಡಿಸ್‌ಪ್ಲೇ ನೋಟವನ್ನು ಹೊಂದಿದೆ. ಮಡಚಿದಾಗ ಮುಂಬದಿ 6.6 ಇಂಚಿನಲ್ಲಿ ಮತ್ತು ಹಿಂಬದಿ 6.38 ಇಂಚಿನಲ್ಲಿ ಎರಡು ಕಡೆ ಡಿಸ್‌ಪ್ಲೇ ಕಾಣಿಸಲಿದೆ. ಈ ಫೋಲ್ಡೆಬಲ್ ಫೋನನ್ನು ಪೂರ್ಣ ತೆರೆದಾಗ 8 ಇಂಚಿನಲ್ಲಿರಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಮಡಚಿದಾಗ ಮುಂಬದಿಯಲ್ಲಿ 1148x2480 ಪಿಕ್ಸಲ್ ಶಕ್ತಿಯೊಂದಿಗೆ 6.6 ಇಂಚಿನ ಡಿಸ್‌ಪ್ಲೇ ಇರಲಿದ್ದು ಇದರ ಅನುಪಾತು 19.5:9 ಆಗಿದೆ. ಹಾಗೇ ಹಿಂಬದಿಯಲ್ಲಿ 892x2480 ಪಿಕ್ಸಲ್ ಶಕ್ತಿಯೊಂದಿಗೆ 6.38 ಇಂಚಿ ಡಿಸ್‌ಪ್ಲೇ ಕಾಣಬಹುದು, ಈ ಡಿಸ್‌ಪ್ಲೇ 25:9 ಅನುಪಾತವನ್ನು ಹೊಂದಿದೆ. ಪೂರ್ಣ ತೆರೆದಾಗ 8 ಇಂಚಿನ ವಿಶಾಲ ಡಿಸ್‌ಪ್ಲೇಯನ್ನು ಹೊಂದಿದೆ.

ಪ್ರೊಸೆಸರ್

ಪ್ರೊಸೆಸರ್

ಹಿಸಿಲಿಕಾನ್ ಕಿರಿನ್ 980 SOC ಪ್ರೊಸೆಸರ್ ಈ ಫೋಲ್ಡೆಬಲ್ ಸ್ಮಾರ್ಟ್‌ಪೋನಿನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 7nm ಮೊಡೆಮ್‌ನಲ್ಲಿ 5G ಚಿಪ್‌ ಸೆಟ್ಟ್ ನೀಡಲಾಗಿರುವುದು ಇದರ ವೇಗವನ್ನು ಹೆಚ್ಚಿಸಿದೆ. ಈ ಚಿಪ್‌ ಸೆಟ್‌ 6.5/ 3.5Gbps ವೇಗದಲ್ಲಿ ಡೌನ್‌ಲೋಡ್‌ ಮಾಡುವ ಸಾಮರ್ಥ್ಯವನ್ನು ಒದಗಿಸಲಿದೆ.

ಮೆಮೊರಿ

ಮೆಮೊರಿ

8GB RAM ಶಕ್ತಿಯೊಂದಿಗೆ 512GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒದಗಿಸಿದೆ. ಹಾಗೂ ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ್ ಬಾಹ್ಯ ಶೇಖರಣೆಗಾಗಿ 256GB ಸಾಮರ್ಥ್ಯದವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಹುವಾಯಿ ಮೇಟ್ X ಫೋಲ್ಡೆಬಲ್ ಸ್ಮಾರ್ಟ್‌ಫೋನ್ ರೇರ ಮತ್ತು ಮುಂಬದಿ ಕ್ಯಾಮೆರಾಗಳನ್ನು ಟು ಇನ್ ಇನ್ ಆಗಿ ಪರಿಚಯಿಸಿದೆ. ಒಟ್ಟು ಮೂರು ಸೆನ್ಸಾರ್‌ಗಳನ್ನು ಹೊಂದಿದ್ದು, 40 ಮೆಗಾಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್, 16 ಮೆಗಾಪಿಕ್ಸಲ್ ಅಲ್ಟ್ರಾ ವೈಲ್ಡ್‌ ಆಂಗಲ್ ಲೆನ್ಸ್ ಮತ್ತು 8 ಮೆಗಾಪಿಕ್ಸಲ್ ಟೆಲಿಫೋಟೋ ಲೆನ್ಸ್ ಗಳನ್ನು ಒಳಗೊಂಡಿದೆ. ಇವು ಕಂಪನಿಯ Leica ಲೆನ್ಸ್ ಆಗಿವೆ.

ಬ್ಯಾಟರಿ

ಬ್ಯಾಟರಿ

4,500mAh ಸಾಮರ್ಥ್ಯದ ಹೇವಿ ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ 55W ಶಕ್ತಿಯ ಸೂಪರ್‌ ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಒದಗಿಸಲಾಗಿದೆ. ಇದರ ನೆರವಿನಿಂದ ಕೇವಲ 30 ನಿಮಿಷದಲ್ಲಿ ಸುಮಾರು ಶೇ.85 ರಷ್ಟು ಬ್ಯಾಟರಿ ಭರ್ತಿ ಆಗುವುದು. ಜತೆಗೆ ಯುಎಸ್‌ಬಿ ಟೈಪ್-C ಪೋರ್ಟ್‌ ನೀಡಲಾಗಿದೆ.

Best Mobiles in India

English summary
Huawei Mate X 5G foldable phone with a Falcon Wing Design was announced at a pre-MWC 2019 event.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X