ಬಹುನಿರೀಕ್ಷಿತ ಹುವಾಯಿ 'ಪಿ30' ಮತ್ತು 'ಪಿ30 ಪ್ರೋ' ಸ್ಮಾರ್ಟ್‌ಫೋನ್‌ಗಳ ಮಾಹಿತಿ ಲೀಕ್..!!

|

ಗುಣಮಟ್ಟದ ಕ್ಯಾಮೆರಾ ಫೀಚರ್‌ನಿಂದ ಗ್ರಾಹಕರನ್ನು ಸೆಳೆದಿರುವ ಹುವಾಯಿ ಕಂಪನಿಯು, 'ಪಿ30' ಮತ್ತು 'ಪಿ30 ಪ್ರೋ' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿರುವ ಸುದ್ದಿ ಈಗಾಗಲೇ ಬಹಿರಂಗವಾಗಿದೆ. ಆದರೆ ಇದೀಗ ಹೊಸ ಸುದ್ದಿ ಏನೆಂದರೇ ಈ ಸ್ಮಾರ್ಟ್‌ಫೋನ್‌ಗಳ ಚಿತ್ರ ಮತ್ತು ಕೆಲವು ವಿಶೇಷ ಮಾಹಿತಿಗಳು ಲೀಕ್ ಆಗಿದ್ದು, ಇವು ಈಗ ಗ್ರಾಹಕರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿವೆ.

ಬಹುನಿರೀಕ್ಷಿತ ಹುವಾಯಿ 'ಪಿ30' ಮತ್ತು 'ಪಿ30 ಪ್ರೋ' ಫೋನ್‌ಗಳ ಮಾಹಿತಿ ಲೀಕ್.!

ಹೌದು, ಹುವಾಯಿ ಕಂಪನಿಯ ಮುಂಬರಲಿರುವ 'ಪಿ30' ಮತ್ತು 'ಪಿ30 ಪ್ರೋ' ಸ್ಮಾರ್ಟ್‌ಫೋನ್‌ಗಳ ಬಗೆಗಿನ ಮಾಹಿತಿಗಳು ಜಾಲತಾಣಗಳಲ್ಲಿ ಮತ್ತೆ ಲೀಕ್ ಆಗಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳು ಫುಲ್ ಗ್ಲಾಸಿ ಆಕಾರದ ರಚನೆ ಹೊಂದಿದ್ದು, ಸ್ಯಾಂಡ್‌ವೀಜ್‌ ಡಿಸೈನ್‌ನೊಂದಿಗೆ ಗ್ರೇಡಿಯಂಟ್ ಬಣ್ಣಗಳ ಲುಕ್‌ನಲ್ಲಿ ಗಮನ ಸೆಳೆಯುವಂತಿವೆ ಹಾಗೂ ಈ ಸ್ಮಾರ್ಟ್‌ಫೋನ್‌ಗಳ ಡಿಸ್‌ಪ್ಲೇಯು ಪೂರ್ಣ ಅಂಚು ರಹಿತವಾಗಿರಲಿವೆ.

ಬಹುನಿರೀಕ್ಷಿತ ಹುವಾಯಿ 'ಪಿ30' ಮತ್ತು 'ಪಿ30 ಪ್ರೋ' ಫೋನ್‌ಗಳ ಮಾಹಿತಿ ಲೀಕ್.!

ಈ ಎರಡು ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಶ್ ಲೈಟ್‌ನೊಂದಿಗೆ ತ್ರಿವಳಿ ಕ್ಯಾಮೆರಾಗಳವನ್ನು ಹೊಂದಿವೆ. 'ಪಿ30 ಪ್ರೋ' ಸ್ಮಾರ್ಟ್‌ಫೋನ್ 16-125 ಎಂಎಂ, ಫೋಕಲ್ ಲೆಂತ್ ಲೆನ್ಸ್ ಮತ್ತು ಎಫ್ / 1.6-ಎಫ್ / 3.4 ಅಪರ್ಚರ್‌ ಸಾಮರ್ಥ್ಯವನ್ನು ಹೊಂದಿರಲಿದ್ದು, ಹಾಗೇ ಪಿ30 ಸ್ಮಾರ್ಟ್‌ಪೋನ್ ಕ್ಯಾಮೆರಾವು 17-80ಎಂ ಎಂ ಫೋಕಲ್ ಲೆಂತ್ ಲೆನ್ಸ್‌ ನೊಂದಿಗೆ f/1.8-2.4, ಅಪರ್ಚರ್ ಅನ್ನು ಹೊಂದಿದೆ. ಜೊತೆಗೆ ಟೆಲಿಫೋಟೋ ಲೆನ್ಸ್ ಇರಲಿದೆ.

ಈ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಆಕರ್ಷಣೆ ಕ್ಯಾಮೆರಾ ಆಗಿದ್ದು, ಅದಕ್ಕಾಗಿ 'ಪಿ30 ಪ್ರೋ' ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ 'ಲೈಕಾ ವೇರಿಯೋ ಕಂಪನಿಯ ಅತ್ಯುತ್ತಮ ಲೆನ್ಸ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. 'ಪಿ30 ಪ್ರೋ' ಸ್ಮಾರ್ಟ್‌ಫೋನ್ ಕ್ಯಾಮೆರಾ 7.8x ವರೆಗೂ ಝೂಮ್ ಆಗುವ ಸಾಮರ್ಥ್ಯ ಹೊಂದಿದ್ದು, ಇನ್ನು 'ಪಿ30' ಸ್ಮಾರ್ಟ್‌ಫೋನ್ 4.7x ವರೆಗೆ ಝೂಮ್ ವಿಸ್ತರಿಸಲಿದೆ.

ಬಹುನಿರೀಕ್ಷಿತ ಹುವಾಯಿ 'ಪಿ30' ಮತ್ತು 'ಪಿ30 ಪ್ರೋ' ಫೋನ್‌ಗಳ ಮಾಹಿತಿ ಲೀಕ್.!

ಡಿಸ್‌ಪ್ಲೇಯು 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸಹ ಇರಲಿದೆ ಎನ್ನಲಾಗುತ್ತಿದೆ. ಕಿರಿನ್ 980 ಚಿಪ್‌ ಸೆಟ್‌ ಪ್ರೊಸೆಸರ್‌ ಇರಲಿದ್ದು, ಹಿಂಬದಿಯ ಪ್ರಮುಖ ಕ್ಯಾಮೆರಾವು 38 ಅಥವಾ 40 ಮೆಗಾಪಿಕ್ಸಲ್ ಸಾಮರ್ಥ್ಯದ ಸೆನ್ಸಾರ್‌ನಲ್ಲಿರಲಿದೆ. ಸೆಲ್ಫಿಗಾಗಿ 24 ಮೆಗಾಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗುವುದು ಎಂದು ಲೀಕ್ ಮಾಹಿತಿಗಳಿಂದ ತಿಳಿದಿದೆ.

ಈಗಾಗಲೇ ಗ್ರಾಹಕರಲ್ಲಿ ಕೂತುಹಲ ಹೆಚ್ಚಿಸಿರುವ ಹುವಾಯಿ 'ಪಿ30' ಮತ್ತು 'ಪಿ30 ಪ್ರೋ' ಸ್ಮಾರ್ಟ್‌ಫೋನ್‌ಗಳು ಇದೇ ತಿಂಗಳ ಅಂತ್ಯದೊಳಗೆ ರಿಲೀಸ್ ಆಗಲಿವೆ ಎನ್ನಲಾಗುತ್ತಿದ್ದು, ಇನ್ನೂ ಈ ಸ್ಮಾರ್ಟ್‌ಫೋನ್‌ಗಳ ಬೆಲೆಯ ಬಗ್ಗೆ ಮಾಹಿತಿ ಇಲ್ಲ.

Best Mobiles in India

English summary
“The Huawei P30 Pro is expected to offer 7.8x zoom, while the P30 will offer a third camera for 4.7x zoom range.to know morevisit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X