ಹುವಾವೆ ಪಿ9 ಸ್ಮಾರ್ಟ್‌ಫೋನ್‌ಗೆ ಸರಿಸಾಟಿ ಇನ್ನಾವುದೂ ಇಲ್ಲ!

By Shwetha
|

ತನ್ನ ಪಿ9 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಮೂಲಕ ಹುವಾವೆ ಫೋನ್ ಕ್ಷೇತ್ರದಲ್ಲಿಯೇ ವಿಶೇಷವಾದ ಬೆಳವಣಿಗೆಯನ್ನು ತರಲು ಹೊರಟಿದೆ. ತನ್ನ ಅತ್ಯದ್ಭುತ ಕ್ಯಾಮೆರಾ ಫೀಚರ್, ಫೋನ್ ವಿಶೇಷತೆಗಳಿಂದ ಹುವಾವೆ ಮೊಬೈಲ್ ಕ್ರಾಂತಿಯನ್ನೇ ಮಾಡಹೊರಟಿದೆ. ಲಾಯಿಕಾದ ಡ್ಯುಯಲ್ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು, ಇವೆರಡರ ಪಾಲುದಾರಿಕೆಯಲ್ಲಿ ಹೊರಬರುತ್ತಿರುವ ಈ ಡಿವೈಸ್ ಬಳಸುವ ಬಳಕೆದಾರರಿಗೆ ಈವೆರಗೂ ನೀಡಿದ ಅನೂಹ್ಯ ಅನುಭವವನ್ನು ಒದಗಿಸಲಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಗಿಂತ ಹುವಾವೆ ಪಿ9 ಹೇಗೆ ಅತ್ಯುತ್ತಮ?

ಹುವಾವೆ ಪಿ9 ರೂ 39,999 ಕ್ಕೆ ಭಾರತದಲ್ಲಿ ಲಾಂಚ್ ಆಗಿದೆ. ಸ್ಯಾಮ್‌ಸಂಗ್ ಮತ್ತು ಸೋನಿಯಲ್ಲಿ ಕಾಣಬಹುದಾದ ಒಂದು ರೀತಿಯ ವಿಶೇಷತೆಯನ್ನು ಪಿ9 ಒಳಗೊಂಡಿದೆ. ಒನ್ ಪ್ಲಸ್3 ಯಂತಹ ಸ್ಮಾರ್ಟ್‌ಫೋನ್‌ಗೂ ಪಿ9 ಭಯವನ್ನು ಮೂಡಿಸುವ ಸಾಧ್ಯತೆ ಇದೆ. ನಾವಿಲ್ಲಿ ಒನ್ ಪ್ಲಸ್3 ಮತ್ತು ಹುವಾವೆ ಪಿ9 ಅನ್ನು ಹೋಲಿಕೆ ಮಾಡಿದ್ದು ಈ ಫೋನ್‌ಗಳ ನಡುವಿರುವ ವಿಶೇಷತೆಯನ್ನು ನೀವಿಲ್ಲಿ ಕಂಡುಕೊಳ್ಳಬಹುದಾಗಿದೆ.

ವಿನ್ಯಾಸ

ವಿನ್ಯಾಸ

ಹುವಾವೆ ಪಿ9 ಅಲ್ಯುಮಿನಿಯಮ್ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು ಪ್ರೀಯಮಿಂ ನೋಟವನ್ನು ಒಳಗೊಂಡಿದೆ. ಇದರ ವಿನ್ಯಾಸ ಆಕರ್ಷಕವಾಗಿದ್ದು, ಸುಂದರತೆಯಿಂದ ಕೂಡಿದೆ. ಕೈಯಲ್ಲಿ ಸೂಸೂತ್ರವಾಗಿ ಹಿಡಿದುಕೊಳ್ಳಲು ಸಾಧ್ಯವಿರುವ ಈ ಡಿವೈಸ್ ಆಪರೇಟ್ ಮಾಡಲು ಸರಳವಾಗಿದೆ. ಒನ್ ಪ್ಲಸ್ 3 ಕೂಡ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು ನಾನ್ ರಿಮೂವೇಬಲ್ ಬ್ಯಾಕ್ ಪ್ಯಾನಲ್ ಅನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಡಿಸ್‌ಪ್ಲೇಯ ಬಗ್ಗೆ ಹೇಳುವುದಾದರೆ, ಹುವಾವೆ ಪಿ9, 5.2 ಇಂಚಿನ ಎಫ್ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1920x1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬಂದಿದೆ. ಒನ್ ಪ್ಲಸ್3, 5.5 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದ್ದು ಪಿ9ನ ಅದೇ ರೆಸಲ್ಯೂಶನ್ ಅನ್ನು ಹೊಂದಿದೆ.

ಚಿಪ್‌ಸೆಟ್

ಚಿಪ್‌ಸೆಟ್

ಸ್ಮಾರ್ಟ್‌ಫೋನ್‌ನಲ್ಲಿ ಪ್ರೊಸೆಸರ್ ಪ್ರಮುಖ ಫೀಚರ್ ಎಂದೆನಿಸಿದೆ. ಪಿ9 ಹುವಾವೆಯ ಹೌಸ್ ಕಿರಿನ್ 955 ಸಾಕ್ ಅನ್ನು ಒಳಗೊಂಡಿದ್ದು ಓಕ್ಟಾ ಕೋರ್ ಕ್ಲಾಕ್ಡ್ 2.5GHz ಜೊತೆಗೆ 64ಬಿಟ್ RAM ಅನ್ನು ಒಳಗೊಂಡಿದೆ. ಇದರ ಪ್ರೊಸೆಸರ್ ಅನ್ನು ಆಧರಿಸಿ ಉತ್ತಮ ಕಾರ್ಯಕ್ಷಮತೆಯನ್ನು ಇದು ಪ್ರದರ್ಶಿಸಲಿದೆ. ಒನ್ ಪ್ಲಸ್3, ಸ್ನ್ಯಾಪ್‌ಡ್ರ್ಯಾಗನ್ 820 ಚಿಪ್‌ಸೆಟ್ ಜೊತೆಗೆ ಕ್ವಾಡ್ ಕೋರ್ ಅನ್ನು ಹೊಂದಿದೆ.

ಸ್ಟೋರೇಜ್ ಸ್ಪೇಸ್

ಸ್ಟೋರೇಜ್ ಸ್ಪೇಸ್

ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್ ಹೆಚ್ಚು ಮುಖ್ಯವಾಗಿರುತ್ತದೆ. ಫೋಟೋಗಳು ಮತ್ತು ವೀಡಿಯೊಗಳು ಹೀಗೆ ಅಗತ್ಯ ಸ್ಮರಣೆಗಳನ್ನು ನಾವು ದಾಖಲೆಗಳಂತೆ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡುತ್ತೇವೆ. ಹುವಾವೆ ಪಿ9, 3ಜಿಬಿ RAM ಅನ್ನು ಒಳಗೊಂಡಿದ್ದು 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ. ಇನ್ನು ಕಂಪೆನಿ ಹೇಳುವಂತೆ ಚಿಪ್‌ಸೆಟ್ 3ಜಿಬಿ RAM ನೊಂದಿಗೆ ಅದ್ಭುತವಾಗಿ ಕಾರ್ಯನಿರ್ವಹಿಸಲಿದೆ. ಡಿವೈಸ್ ಕಡಿಮೆ ಸ್ಥಳವನ್ನು ಬಳಸಿಕೊಂಡು ಸ್ಥಳೀಯ ಅಪ್ಲಿಕೇಶನ್ ಮತ್ತು ಫೀಚರ್‌ಗಳಿಗೆ ಸ್ಥಳ ನೀಡಲಿದೆ. ಒನ್ ಪ್ಲಸ್3 ಯು 64 ಜಿಬಿಯನ್ನು ಪಡೆದುಕೊಂಡಿದ್ದು ಎಸ್‌ಡಿ ಕಾರ್ಡ್‌ಗೆ ಇದು ಬೆಂಬಲವನ್ನು ನೀಡುತ್ತಿಲ್ಲ.

ಕ್ಯಾಮೆರಾ

ಕ್ಯಾಮೆರಾ

ಹುವಾವೆ ಪಿ9 ತನ್ನ ಕ್ಯಾಮೆರಾದಿಂದಲೇ ಖ್ಯಾತಿಯನ್ನು ಪಡೆದುಕೊಂಡಿದೆ. ಹುವಾವೆಯ ದಿ ಬೆಸ್ಟ್ ಕ್ಯಾಮೆರಾ ಡಿವೈಸ್ ಎಂಬ ಹೆಗ್ಗಳಿಕೆಯನ್ನು ಪಿ9 ಪಡೆದುಕೊಂಡಿದೆ. ಇದು ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿದ್ದು 12 ಎಮ್‌ಪಿ ಲಾಯಿಕಾ ಲೆನ್ಸ್ ಇದರಲ್ಲಿದೆ. ಕಡಿಮೆ ಬೆಳಕಿನಲ್ಲೂ ಅದ್ಭುತ ಫೋಟೋವನ್ನು ಪಿ9 ಬಳಕೆದಾರರಿಗೆ ನೀಡಲಿದೆ.
ಒನ್ ಪ್ಲಸ್3 ಕ್ಯಾಮೆರಾವು, 16ಎಮ್‌ಪಿಯನ್ನು ಪಡೆದುಕೊಂಡಿದ್ದು, ಸಿಂಗಲ್ ಲೆನ್ಸ್ ಕ್ಯಾಮೆರಾ ಇದಾಗಿದೆ. ಪಿ9 ಫೀಚರ್‌ಗಳನ್ನು ಈ ಡಿವೈಸ್ ಒಳಗೊಂಡಿಲ್ಲ. ಅಂತೆಯೇ ಮುಂಭಾಗದಲ್ಲಿ ಎರಡೂ ಡಿವೈಸ್‌ಗಳು 8 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿವೆ.

ಬ್ಯಾಟರಿ

ಬ್ಯಾಟರಿ

ಎರಡೂ ಸ್ಮಾರ್ಟ್‌ಫೋನ್‌ಗಳು ನಾನ್ ರಿಮೂವೇಬಲ್ 3000mAh ಬ್ಯಾಟರಿಯನ್ನು ಪಡೆದುಕೊಂಡು ಬಂದಿವೆ. ಹುವಾವೆ ಹೇಳುವಂತೆ ಕಿರಿನ್ 955 ಚಿಪ್‌ಸೆಟ್ ಹೆಚ್ಚು ಬ್ಯಾಟರಿ ಪ್ರಯೋಜಕ ಎಂದೆನಿಸಿದ್ದು, ದೀರ್ಘ ಸಮಯದವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದೆ. ಫೋನ್‌ನಲ್ಲಿ ಬ್ಯಾಟರಿ ಸೇವಿಂಗ್ ಮೋಡ್ ಇದ್ದು ತ್ವರಿತ ಚಾರ್ಜ್ ತಂತ್ರಜ್ಞಾನವನ್ನು ಇದು ಹೊಂದಿದೆ. ಇದು ಬಳಕೆದಾರರ ಅನುಭವವನ್ನು ವರ್ಧಿಸಲಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ಹುವಾವೆ ಪಿ9 ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ ಮಾರ್ಶ್‌ಮಲ್ಲೊ ಇದೆ. ಕಂಪೆನಿಯ ನೇಟೀವ್ ಯುಐ ಇದರಲ್ಲಿದ್ದು ಇದು ಹೆಚ್ಚುವರಿ ಫೀಚರ್ಸ್ ಮತ್ತು ಕಸ್ಟಮೈಸೇಶನ್ ಅನ್ನು ಬಳಕೆದಾರರಿಗೆ ತರಲಿದೆ. ಒನ್ ಪ್ಲಸ್3 ಕೂಡ ಆಂಡ್ರಾಯ್ಡ್ ಮಾರ್ಶ್‌ಮಲ್ಲೊವನ್ನು ತನ್ನ ಡಿವೈಸ್‌ನಲ್ಲಿ ಒಳಗೊಂಡಿದೆ.

ವ್ಯತ್ಯಾಸಗಳು

ವ್ಯತ್ಯಾಸಗಳು

ಹುವಾವೆ ಪಿ9 ವಿಶೇಷತೆಗಳು ಮತ್ತು ಫೀಚರ್‌ಗಳಿಂದ ಅಂತೆಯೇ ತನ್ನ ನೋಟದಿಂದ ಬೆಸ್ಟ್ ಎಂದೆನಿಸಿದೆ. ಕ್ಲಾಸ್ ಅಲ್ಯುಮಿನಿಯಮ್ ಮೆಟಲ್ ಬಾಡಿ ವಿನ್ಯಾಸವನ್ನು ಡಿವೈಸ್ ಒಳಗೊಂಡಿದ್ದು ಅದ್ಭುತ ಕ್ಯಾಮೆರಾ ಲಾಯಿಕಾವನ್ನು ಡಿವೈಸ್ ಪಡೆದುಕೊಂಡಿದೆ. ಒನ್ ಪ್ಲಸ್3 ಕೂಡ ಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿದೆ ಆದರೆ ಕ್ಯಾಮೆರಾ ವಿಷಯದಲ್ಲಿ ಇದು ಪಿ9 ನಂತಹ ಪ್ರಗತಿಯನ್ನು ಪಡೆದುಕೊಂಡಿಲ್ಲ.

Best Mobiles in India

English summary
Here we compare the Huawei P9 with OnePlus 3 on the basis of their specs to know about major differences between these phones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X