ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಗಿಂತ ಹುವಾವೆ ಪಿ9 ಹೇಗೆ ಅತ್ಯುತ್ತಮ?

Written By:

ಹುವಾವೆ ಇದೀಗ ತಾನೇ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ರೂ 39,999 ಕ್ಕೆ ಭಾರತದಲ್ಲಿ ಲಾಂಚ್ ಮಾಡಿದೆ. ಹುವಾವೆ ಪಿ9 ಸ್ಮಾರ್ಟ್‌ಫೋನ್ ಪ್ರೀಮಿಯಮ್ ನೋಟವನ್ನು ಪಡೆದುಕೊಂಡಿದ್ದು ಇದು ಹೆಚ್ಚು ಬಲಿಷ್ಟ ವಿಶೇಷತೆಗಳನ್ನು ತನ್ನಲ್ಲಿ ಪಡೆದುಕೊಂಡಿದೆ. ಲಾಯಿಕಾದಿಂದ ಪ್ರಮೋಶನ್ ಪಡೆದುಕೊಂಡಿರುವ ಹುವಾವೆ ಕ್ಯಾಮೆರಾ ವರ್ಗದಲ್ಲಿ ಹೆಚ್ಚು ಹೆಸರನ್ನು ಮಾಡಿದೆ.

ಓದಿರಿ: ಹುವಾವೆ ಪಿ9 ನ ಕ್ಯಾಮೆರಾ ವಿಶೇಷತೆಗೆ ಮನಸೋಲದವರೇ ಇಲ್ಲ!

ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಮತ್ತು ಹುವಾವೆ ಪಿ9 ಹೋಲಿಕೆಯನ್ನು ಮಾಡಲಾಗಿದ್ದು ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್7 ಅನ್ನು ರೂ 48,900 ಕ್ಕೆ ಲಾಂಚ್ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಉತ್ತಮತೆ

ಡಿಸ್‌ಪ್ಲೇ ಉತ್ತಮತೆ

ಹುವಾವೆಯ ಹೊಸ ಡಿವೈಸ್ ಪಿ9 ಸ್ಮಾರ್ಟ್‌ಫೋನ್ 5.2 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು, 1920x1080 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಪಡೆದುಕೊಂಡು ಬಂದಿದೆ. ಫೋನ್‌ನ ಆರಾಮದಾಯಕ ಬಳಕೆಗೆ ಈ ಡಿಸ್‌ಪ್ಲೇ ಗಾತ್ರ ಅತ್ಯುತ್ತಮವಾದುದಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7, 5.1 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಹುವಾವೆ ಪಿ9 ಗಿಂತ ಇದು ಚಿಕ್ಕದಾಗಿದೆ.

ಪ್ರೊಸೆಸಿಂಗ್ ಪವರ್

ಪ್ರೊಸೆಸಿಂಗ್ ಪವರ್

ಹುವಾವೆ ಪಿ9 ಇನ್ ಹೌಸ್ ಕಿರಿನ್ 955 ಸಾಕ್ ಓಕ್ಟಾ ಕೋರ್ ಕ್ಲಾಕ್ಡ್ 2.5GHZ ಜೊತೆಗೆ 64 ಬಿಟ್ ಆರ್ಮ್ ಆಧಾರಿತ ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಇದು ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಬ್ಯಾಟರಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಗ್ಯಾಲಕ್ಸಿ ಎಸ್7 ಎಕ್ಸೋನಸ್ 8890 ಚಿಪ್‌ಸೆಟ್‌ನಲ್ಲಿ ಕಾರ್ಯವೆಸಗುತ್ತಿದೆ.

ಸಂಗ್ರಹಣೆ

ಸಂಗ್ರಹಣೆ

ಎರಡೂ ಸ್ಮಾರ್ಟ್‌ಫೋನ್‌ಗಳು 4ಜಿಬಿ RAM ನೊಂದಿಗೆ ಬಂದಿದೆ. ಹುವಾವೆ ಪಿ9, 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ. ಎರಡೂ ಫೋನ್‌ಗಳು ಉತ್ತಮ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡು ಬಂದಿದ್ದು ಫೋನ್‌ನಲ್ಲಿಯೇ ಬಳಕೆದಾರರು ಸ್ಮರಣೆಗಳನ್ನು ಇರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಹುವಾವೆ ಪಿ9 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ನಡುವೆ ವಿಶೇಷತೆಯನ್ನು ತರುವುದು ಕ್ಯಾಮೆರಾ ಆಗಿದೆ. ಪಿ9, ಡ್ಯುಯಲ್ ಕ್ಯಾಮೆರಾ ಲಾಯಿಕಾ ಲೆನ್ಸ್ ಅನ್ನು ಪಡೆದುಕೊಂಡಿದೆ. 12 ಎಮ್‌ಪಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಡಿವೈಸ್ ಹೊಂದಿದ್ದು, ಲಾಯಿಕಾ SUMMARIT H 1:2.2/27 ಲೆನ್ಸ್ ಅನ್ನು ಈ ಡಿವೈಸ್ ಒಳಗೊಂಡಿದ್ದು 1.25 ಮೈಕ್ರೋನ್ ಪಿಕ್ಸೆಲ್‌ಗಳನ್ನು ಇದು ಪಡೆದುಕೊಂಡಿದೆ. ಕಡಿಮೆ ಬೆಳಕಿನಲ್ಲೂ ಬಳಕೆದಾರರಿಗೆ ಅದ್ಭುತ ಚಿತ್ರ ಗುಣಮಟ್ಟವನ್ನು ಫೋನ್ ಒದಗಿಸಲಿದೆ.

ಕ್ಯಾಮೆರಾ ಗುಣಮಟ್ಟ

ಕ್ಯಾಮೆರಾ ಗುಣಮಟ್ಟ

ಡಿಎಸ್‌ಎಲ್ಆರ್ ಗುಣಮಟ್ಟದಲ್ಲಿ ಫೋಟೋ ತೆಗೆಯುವ ಗುಣಮಟ್ಟವನ್ನು ಕ್ಯಾಮೆರಾ ಒದಗಿಸಿದೆ. ಇನ್ ಬಿಲ್ಟ್ ಸಾಮರ್ಥ್ಯದೊಂದಿಗೆ ಆಳವಾದ ಜೂಮಿಂಗ್ ವಿಶೇಷತೆಯನ್ನು ಡಿವೈಸ್ ಪಡೆದಿದ್ದು, ಫೋಕಸ್ ಅಂಶವನ್ನು ಬದಲಾಯಿಸುವ ಗುಣವನ್ನು ಇದು ಪಡೆದಿದೆ. ವೃತ್ತಿಪರ ಡಿಎಸ್‌ಎಲ್ಆರ್ ಕ್ಯಾಮೆರಾದಂತೆ ಹುವಾವೆ ವಿಶೇಷತೆಯನ್ನು ಪಡೆದುಕೊಂಡಿದೆ. ಎಸ್7, 12 ಎಮ್‌ಪಿ ಕ್ಯಾಮೆರಾದೊಂದಿಗೆ ಬಂದಿದ್ದು ಸಿಂಗಲ್ ಲೆನ್ಸ್ ಕ್ಯಾಮೆರಾ ಆಗಿದೆ.

ಎರಡೂ ಡಿವೈಸ್‌ಗಳಲ್ಲಿ ಕ್ಯಾಮೆರಾ ಹೇಗಿದೆ

ಎರಡೂ ಡಿವೈಸ್‌ಗಳಲ್ಲಿ ಕ್ಯಾಮೆರಾ ಹೇಗಿದೆ

ಹುವಾವೆ ಪಿ9 ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಗ್ಯಾಲಕ್ಸಿ ಎಸ್7 ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here is a comparison of the specifications of the Huawei P9 with the Samsung Galaxy S7, which is also a specs heavy smartphone, however is priced on the higher side. Samsung launched the flagship Galaxy S7 smartphone at a price of Rs 48,900.
Opinion Poll

Social Counting

Gadget Finder

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot