Home
ಮೊಬೈಲ್

ವಿಶ್ವದಲ್ಲಿ ಅತೀ ಹೆಚ್ಚು ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್..!

By Srinidhi

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್-ಸ್ಯಾಮ್‌ಸಂಗ್ ಕಂಪನಿಗಳಗೆ ಸೆಡ್ಡು ಹೊಡೆಯುವ ಸಾಮರ್ಥ್ಯ ಹೊಂದಿರುವ ಚೀನಾ ಮೂಲದ ಹುವಾವೆ ಕಂಪನಿ, ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ನಂಬರ್ 3ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೊಸ ಸಾಹಸವೊಂದಕ್ಕೆ ಕೈ ಹಾಕಲು ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹುವಾವೆ P20 ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದ್ದು, ಇದರಲ್ಲಿ ಅತೀ ಹೆಚ್ಚಿನ ಪ್ರಮಾಣದ ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ವಿಶ್ವದಲ್ಲಿ ಅತೀ ಹೆಚ್ಚು ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್..!

ಈಗಾಗಲೇ ಹುವಾವೆ P20 ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಇದರೊಂದಿಗೆ 512GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಳ್ಳಿದೆ. ಇಷ್ಟು ದೊಡ್ಡ ಪ್ರಮಾಣದ ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿ ಈ ಸ್ಮಾರ್ಟ್‌ಫೋನ್‌ನದಾಗಲಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿಬಂದಿದೆ.

ಓದಿರಿ: ಜಿಯೋ ಫೋನ್‌ ಸಫೋರ್ಟ್‌ ಮಾಡಲಿದೆ ವಾಟ್ಸ್‌ಆಪ್..!

ಹುವಾವೆ P20 ಸ್ಮಾರ್ಟ್‌ಫೋನ್ ನಲ್ಲಿ 6GB RAM ಮತ್ತು 512 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ ಎಂಬ ಮಾಹಿತಿಯೂ ಲೀಕ್ ಆಗಿದ್ದು, ಇದು ಟಾಪ್ ಎಂಡ್ ಆವೃತ್ತಿಯಾಗಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚಿವರಿ ಮೆಮೊರಿ ಕಾರ್ಡ್ ಬಳಕೆ ಮಾಡಿಕೊಳ್ಳುವ ಅಗತ್ಯತೆಯೇ ನಿರ್ಮಾಣವಾಗುವುದಿಲ್ಲ, ಕಾರಣ ದೊಡ್ಡ ಪ್ರಮಾಣದ ಇಂಟರ್ನಲ್ ಮೆಮೊರಿ ಈ ಸ್ಮಾರ್ಟ್‌ಫೋನಿನಲ್ಲಿಯೇ ಅಡಕವಾಗಿದೆ.

ವಿಶ್ವದಲ್ಲಿ ಅತೀ ಹೆಚ್ಚು ಇಂಟರ್ನಲ್ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್..!

ಹುವಾವೆ P20 ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆವೃತ್ತಿಯಾಗಿದ್ದು, ಈ ಸ್ಮಾರ್ಟ್‌ಫೋನಿನಲ್ಲಿ 24MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, FHD+ ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಪೋನಿನಲ್ಲಿ ಹುವಾವೆ ಅಭಿವೃದ್ಧಿ ಪಡಿಸಿರುವ ಕಿರನ್ 970 ಚಿಪ್‌ ಸೆಟ್ ಅನ್ನು ಅಳವಡಿಸಲಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ಕೃತಕ ಬುದ್ದಿ ಮತ್ತೆಯನ್ನು ಹುವಾವೆ ಅಳವಡಿಸಿದೆ ಎನ್ನಲಾಗಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಮಾರುಕಟ್ಟೆಯಲ್ಲಿ ಲಾಂಚ್ ಆಗಲಿರುವ ಹುವಾವೆ P20 ಸ್ಮಾರ್ಟ್‌ಫೋನ್ ಬೆಲೆಗಳ ಕುರಿತ ರೂಮರ್ ಹೆಚ್ಚಾಗಿದ್ದು, ಒಟ್ಟು ಮೂರು ಮಾದರಿಯಲ್ಲಿ ಈ ಸ್ಮಾರ್ಟ್‌ಫೋನ್ ಮಾರಾಟವಾಗಲಿದೆ. ಹುವಾವೆ P20 ಪ್ರೋ ಈ ಸರಣಿಯಲ್ಲಿ ಟಾಪ್ ಫೋನ್‌ ಆಗಿದ್ದು ರೂ.73000ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಹುವಾವೆ P20 ಮಧ್ಯಮ ಬೆಲೆಯದಾಗಿದ್ದು, ರೂ.54000ಕ್ಕೆ ದೊರೆಯಲಿದೆ. ಇದರಲ್ಲಿ ಲೈಟ್ ಆವೃತ್ತಿಯೂ ದೊರೆಯಲಿದ್ದು, ರೂ.29,000ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

Best Mobiles in India

English summary
P20 Pro will be offered with 64GB or 128GB of internal storage, while some markets may even see a 256GB variant as well. It is possible that the mysterious 512GB phone is a variant of the P20 Pro. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+