Subscribe to Gizbot

ಜಿಯೋ ಫೋನ್‌ ಸಫೋರ್ಟ್‌ ಮಾಡಲಿದೆ ವಾಟ್ಸ್‌ಆಪ್..!

Written By:

ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಹೊಂದುವ ಮೂಲಕ, 2017ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಫೀಚರ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ರಿಲಯನ್ಸ್ ಮಾಲೀಕತ್ವದ ಜಿಯೋ ಫೋನ್, ಈ ವರ್ಷದಲ್ಲಿಯೂ ನಂಬರ್ ಒನ್ ಪಟ್ಟವನ್ನು ಅಲಂಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವ ಜಿಯೋ ಫೋನ್, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ದಿನಗಳು ಹತ್ತಿರವಾಗುತ್ತಿದೆ.

ಜಿಯೋ ಫೋನ್‌ ಸಫೋರ್ಟ್‌ ಮಾಡಲಿದೆ ವಾಟ್ಸ್‌ಆಪ್..!

ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಫೀಚರ್ ಫೋನ್ ಜಿಯೋ ಫೋನಿನಲ್ಲಿ ಇತ್ತೀಚೆಗೆ ಫೇಸ್‌ಬುಕ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿತ್ತು. ಇದಲ್ಲದೇ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಅನ್ನು ಜಿಯೋ ಫೋನಿನಲ್ಲಿ ಅಳವಡಿಸಲಾಗಿತ್ತು. ಇದೇ ಮೊದಲ ಬಾರಿಗೆ ಬಹು ದಿನಗಳ ನಿರೀಕ್ಷೆಯಾದ ವಾಟ್ಸ್‌ಆಪ್ ಅನ್ನು ಜಿಯೋ ಫೋನಿನಲ್ಲಿ ಅಳವಡಿಸುವ ಕಾರ್ಯವೂ ನಡೆಯುತ್ತಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಜಿಯೋ ಫೋನಿನಲ್ಲಿ ವಾಟ್ಸ್ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಓದಿರಿ: ಫ್ಲಾಷ್ ಸೇಲಿನಲ್ಲಿ ಮತ್ತೊಮ್ಮೆ ರೆಡ್‌ಮಿ 5A ಸ್ಮಾರ್ಟ್‌ಫೋನ್: ಖರೀದಿದಾರರಿಗೆ ಬೊಂಬಾಟ್ ಆಫರ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಫೋನಿನಲ್ಲಿ ವಾಟ್ಸ್‌ಆಪ್

ಜಿಯೋ ಫೋನಿನಲ್ಲಿ ವಾಟ್ಸ್‌ಆಪ್

ವಾಟ್ಸ್‌ಆಪ್ ಡೆವಲಪರ್ ಗಳು ಈ ಹಿಂದೆಯೇ ಜಿಯೋ ಫೋನಿನಲ್ಲಿ ವಾಟ್ಸ್‌ಆಪ್ ಬಳಕೆ ಮಾಡಿಕೊಳ್ಳಲು ಸಹಾಯವಾಗುವಂತೆ ನೂತನ ಲೈಟ್ ವಾಟ್ಸ್‌ಆಪ್ ಅನ್ನು ವಿನ್ಯಾಸ ಮಾಡುತ್ತಿರುವುದಾಗಿ ಮಾಹಿತಿಯೊಂದು ಲಭ್ಯವಾಗಿತ್ತು. ಇದು ಸತ್ಯವಾಗಿದ್ದು, ಜಿಯೋ ಪೋನಿನಲ್ಲಿ ಬಳಕೆ ಮಾಡಿಕೊಳ್ಳುವ ಮಾದರಿಯಲ್ಲಿ ವಾಟ್ಸ್‌ಆಪ್ ಅನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

KaiOSಗಾಗಿ ವಾಟ್ಸ್‌ಆಪ್:

KaiOSಗಾಗಿ ವಾಟ್ಸ್‌ಆಪ್:

ವಾಟ್ಸ್‌ಆಪ್ ಡೆವಲಪರ್ ಗಳು ಜಿಯೋ ಫೋನಿನಲ್ಲಿ ಬಳಕೆ ಮಾಡಿಕೊಂಡಿರುವ ಫೈಯರ್ ಫಾಕ್ಸ್ KaiOSಗಾಗಿ ವಾಟ್ಸ್‌ಆಪ್ ಅನ್ನು ಅಭಿವೃದ್ಧಿ ಮಾಡಿದ್ದು, ಈಗಾಗಲೇ ಬೀಟಾ ಹಂತದಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಇದು ಯಶಸ್ವಿಯಾದ ನಂತರದಲ್ಲಿ ಶೀಘ್ರವೇ ಜಿಯೋ ಫೋನ್ ಬಳಕೆದಾರರು ವಾಟ್ಸ್‌ಆಪ್‌ಅನ್ನು ತಮ್ಮ ಪೋನಿನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

6 ಮಿಲಿಯನ್ ಜಿಯೋ ಫೋನ್:

6 ಮಿಲಿಯನ್ ಜಿಯೋ ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ರಿಲಯನ್ಸ್ 6 ಮಿಲಿಯನ್ ಗೂ ಅಧಿಕ ಜಿಯೋ ಫೋನ್ ಗಳನ್ನು ಮಾರಾಟ ಮಾಡಿದ್ದು, ಈ ಹಿನ್ನಲೆಯಲ್ಲಿ ಇಷ್ಟು ಪ್ರಮಾಣದ ಬಳಕೆದಾರರನ್ನು ವಾಟ್ಸ್‌ಆಪ್ ಒಂದೇ ಎಟಿಗೆ ಪಡೆದುಕೊಳ್ಳಲಿದೆ. ಈಗಾಗಲೇ 1.5 ಬಿಲಿಯನ್ ಬಳಕೆದಾರರನ್ನು ಪಡೆದುಕೊಂಡಿರುವ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆ ಇದರಿಂದ ಇನಷ್ಟು ಹೆಚ್ಚಾಗಲಿದೆ.

ಬೇಡಿಕೆ ಹೆಚ್ಚಾಗಿದೆ:

ಬೇಡಿಕೆ ಹೆಚ್ಚಾಗಿದೆ:

ಸದ್ಯ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತಿರುವ ಜಿಯೋ ಫೋನಿನ ಬೇಡಿಕೆಯೂ ಇದಕ್ಕಿದಂತೆ ಏರಿಕೆಯಾಗಿದ್ದು, ವಾಟ್ಸ್‌ಆಪ್ ಅನ್ನು ಬಳಕೆ ಮಾಡಿಕೊಳ್ಳಬಹುದು ಎನ್ನುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ವಾಟ್ಸ್‌ಆಪ್ ಬಳಕೆಗೆ ಜಿಯೋ ಫೋನಿನಲ್ಲಿ ಅವಕಾಶ ನೀಡುತ್ತಿರುವುದು ಬಳಕೆದಾರರಿಗೆ ಸಂತಸದ ವಿಚಾರವಾಗಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಕಳೆದ ತಿಂಗಳಿನಲ್ಲಿ ಫೇಸ್‌ಬುಕ್ ಆಪ್:

ಕಳೆದ ತಿಂಗಳಿನಲ್ಲಿ ಫೇಸ್‌ಬುಕ್ ಆಪ್:

ಕಳೆದ ತಿಂಗಳಿನಲ್ಲಿ ಜಿಯ ಫೋನ್ ನಲ್ಲಿ ಫೇಸ್‌ ಬುಕ್ ಆಪ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಫೇಸ್ ಬುಕ್ ಆಪ್ ಬಳಕೆದಾರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯನ್ನು ಕಾಣಬಹುದಾಗಿತ್ತು. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ಬಳಕೆದಾರರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಶೀಘ್ರವೇ ಕಾಣಬಹುದಾಗಿದೆ.

ಮೂರು ಕಡೆಗಳಲ್ಲಿ ಲಭ್ಯ:

ಮೂರು ಕಡೆಗಳಲ್ಲಿ ಲಭ್ಯ:

ಜಿಯೋ ಫೋನ್ ಅನ್ನು ಮನೆಯಲ್ಲಿ ಕುಳಿತು ಖರೀದಿಸಲು ಬಯಸುವವರಿಗೆ ಮೂರು ಕಡೆಗಳಲ್ಲಿ ಜಿಯೋ ಫೋನ್ ಲಭ್ಯವಿರಲಿದೆ. ಒಂದು ಅಮೆಜಾನ್, ಮೊಬಿಕ್ವೀಕ್ ಮತ್ತು ಜಿಯೋ ಡಾಟ್ ಕಾಮ್ ನಲ್ಲಿಯೂ ದೊರೆಯಲಿದೆ. ಎಲ್ಲಾ ಕಡೆಗಳಲ್ಲಿಯೂ ಒಂದೇ ಬೆಲೆಗೆ ದೊರೆಯುತ್ತಿದೆ.

ಜಿಯೋ ಫೋನ್ ವಿಶೇಷತೆ

ಜಿಯೋ ಫೋನ್ ವಿಶೇಷತೆ

ಜಿಯೋ ಫೋನಿನಲ್ಲಿ 2.4 ಇಂಚಿನ QVGA ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದರಲ್ಲಿ 512MB RAM ಜೊತೆಗೆ 4GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಫೋನ್ ಹಿಂಭಾಗದಲ್ಲಿ 2MP ಕ್ಯಾಮೆರಾ ಮುಂಭಾಗದಲ್ಲಿ VGA ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಗೂಗಲ್ ವಾಯ್ಸ್ ಅಸಿಸ್ಟೆಂಟ್ ಹೊಂದಿರುವ ಮೊದಲ ಫೀಚರ್ ಫೋನ್ ಎಂಬ ಖ್ಯಾತಿಗೆ ಜಿಯೋ ಫೋನ್ ಪಾತ್ರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
WhatsApp and will try developing a seperate app for the JioPhone. It seems that this will soon become a reality. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot