'ಮೇಟ್ 30' ಹೊಂದಿರುವ ಈ ವಿಶೇಷ ಫೀಚರ್ ಅಚ್ಚರಿ ಮೂಡಿಸುವುದು ಗ್ಯಾರಂಟಿ!

|

ಚೀನಾದ ಪ್ರಮುಖ ಸ್ಮಾರ್ಟ್‌ಪೋನ್ ಕಂಪನಿಗಳಲ್ಲಿಯೇ ಮುಂಚಿಣಿಯಲ್ಲಿರುವ ಹುವಾಯಿ ಮೊಬೈಲ್ ಸಂಸ್ಥೆಯು ಕಡಿಮೆ ಬಜೆಟ್‌ನಿಂದ ಹಿಡಿದು ದುಬಾರಿ ಬೆಲೆಯವರುಗೂ ತನ್ನ ಸ್ಮಾರ್ಟ್‌ಫೋನ್‌ಗಳ ಶ್ರೇಣಿಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಹೊಸ ಹೊಸ ತಂತ್ರಜ್ಞಾನಗಳ ಮೂಲಕ ಮೊಬೈಲ್ ಮಾರುಕಟ್ಟೆಗೆ ಕಾಲಿಡುವ ಹುವಾಯಿ ಕಂಪೆನಿ ಇದೀಗ ಮತ್ತೊಂದು ಕೂತುಹಲ ಮೂಡಿಸಿದ್ದು, ಭವಿಷ್ಯದ 'ಹುವಾಯಿ ಮೇಟ್ 30' ಸ್ಮಾರ್ಟ್‌ಪೋನಿನಲ್ಲಿ ಭಾರೀ ವಿಶೇಷ ಫೀಚರ್ ಒಂದನ್ನು ತರಲು ಸಜ್ಜಾಗಿದೆ.

'ಮೇಟ್ 30' ಹೊಂದಿರುವ ಈ ವಿಶೇಷ ಫೀಚರ್ ಅಚ್ಚರಿ ಮೂಡಿಸುವುದು ಗ್ಯಾರಂಟಿ!

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕ ಬಳಗ ಹೊಂದಿರುವ ಚೀನಾದ ಹುವಾಯಿ ಸ್ಮಾರ್ಟ್‌ಫೋನ್ ಸಂಸ್ಥೆ ಮೊಟ್ಟ ಮೊದಲು ತ್ರಿಪ್ಪಲ್ ಕ್ಯಾಮರಾ ಇರುವ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಮೇಟ್ 20 ಮೂಲಕ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಈ ಹುವಾಯಿ ಸ್ಮಾರ್ಟ್‌ಫೋನ್ ಸಂಸ್ಥೆ ಮತ್ತೋಂದು ಅಚ್ಚರಿ ಮೂಡಿಸಲು ಸಜ್ಜಾಗಿದೆ. ಹಾಗಾದರೆ, ಆ ಅಚ್ಚರಿ ವಿಶೇಷಯತೆ ಏನು?, ಮಾರ್ಚ್‌ ಅಂತ್ಯದೊಂಳಗೆ ಬಿಡುಗಡೆಯಾಗಲಿದೆ ಎನ್ನಲಾದ ಮೇಟ್ 30 ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಐದು ಕ್ಯಾಮರಾ.!

ಐದು ಕ್ಯಾಮರಾ.!

ಹುವಾಯಿ ಕಂಪನಿ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್ ಮೇಟ್ 30 ಮಾರುಕಟ್ಟೆಯಲ್ಲಿ ತನ್ನ ಕ್ಯಾಮರಾದಿಂದ ಸುದ್ಧಿಯಾಗಿತ್ತಿದೆ. ಹೌದು ಹುವಾಯಿ ಮೇಟ್ 30, ಎರಡಲ್ಲ, ಮೂರಲ್ಲ, ಒಟ್ಟು ಐದು ಬ್ಯಾಕ್ ರೇರ್ ಕ್ಯಾಮರಾಗಳನ್ನು ಹೊಂದಿರಲಿದೆ ಎಂಬ ವರದಿಯೊಂದು ಪ್ರಕಟವಾಗಿದೆ.

ವಿನ್ಯಾಸ ಮತ್ತು ಡಿಸ್‌ಪ್ಲೇ

ವಿನ್ಯಾಸ ಮತ್ತು ಡಿಸ್‌ಪ್ಲೇ

ಹುವಾಯಿ ಮೇಟ್ 30 ನೋಡಲು ಬಹುತೇಕ ಈ ಹಿಂದಿನ ಮೇಟ್‌ಮಾದರಿಗಳಂತೆ ಇರಲಿದೆ. ಇದರ ಡಿಸ್‌ಪ್ಲೇ ಗಾತ್ರ 6.1 ಇಂಚು ಇರಲಿದೆ, ಇದರೊಂದಿಗೆ ಸ್ಕ್ರೀನ್‌ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗುತ್ತಿದೆ. ಸ್ಕ್ರೀನ್‌ನ ರೆಸೂಲ್ಯೂಷನ್ 1440x2880 ಪಿಕ್ಸಲ್‌ಗಳನ್ನು ಹೊಂದಿರಲಿದೆ ಎನ್ನಲಾಗುತ್ತದೆ.

ಇತರೆ ತಾಂತ್ರಿಕ ವಿಶೇಷತೆಗಳು ಎನಿರಬಹುದು.

ಇತರೆ ತಾಂತ್ರಿಕ ವಿಶೇಷತೆಗಳು ಎನಿರಬಹುದು.

ಹುವಾಯಿ ಮೇಟ್ 30 ಸ್ಮಾರ್ಟ್‌ಫೋನಿನ್ ಇತರೆ ಫೀಚರ್ಸ್‌ಗಳೆಂದರೆ,
* ಆಂಡ್ರಾಯ್ಡ್ 9.1 ಅಪ್‌ಡೇಟ್ ವರ್ಷನ್‌ ಇರಲಿದೆ.
* 5G ಕೆಪ್ಯಾಬಲಿದೆ ಹೊಂದಿರಲಿದೆ.
* ಹಿಸಿಲಿಕಾನ್ ಕಿರಿನ್ 990 ಸಿಪಿಯು ಜೊತೆಗೆ ಆಕ್ಟಾ ಪ್ರೋಸ್ಸೆಸ್ಸರ್ ಇರಲಿದೆ.
* 6GB RAM ಇರುತ್ತದೆ ಇದರೊಂದಿಗೆ 64GB ಮತ್ತು 128GB ಆಂತರಿಕ ಸಂಗ್ರಹ ಸ್ಥಳಾವಕಾಶ ಆಯ್ಕೆ ಇರಬಹುದು.
* ಬ್ಯಾಟರಿ 4200mAh ರಿಂದ 4500mAh ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
is likely to bring five cameras at the back for its next phone in the Mate series -- the Mate 30 Pro, the media reported citing a new patent. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X