ಐಬಾಲ್ ಆಂಡಿಯಿಂದ ಎರಡು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್
ಐ ಬಾಲ್ ಆಂಡಿ ಕಂಪೆನಿ ಎರಡು ಕಡಿಮೆ ಬೆಲೆಯ ಜೆಲ್ಲಿ ಬೀನ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಐ ಬಾಲ್ ಆಂಡಿ 5 ಇ7 ಸ್ಮಾರ್ಟ್‌ಫೋನಿಗೆ 8,199 ರೂಪಾಯಿ,ಐ ಬಾಲ್ ಆಂಡಿ 5- ಎಂ8 ಸ್ಮಾರ್ಟ್‌ಫೋನಿಗೆ 8,999 ರೂಪಾಯಿಯನ್ನು ಕಂಪೆನಿ ನಿಗದಿ ಮಾಡಿದೆ.
ಈ ಎರಡು ಸ್ಮಾರ್ಟ್‌ಫೋನ್‌ಗಳ ವಿಶೇಷತೆಗಳು ಎಲ್ಲವೂ ಒಂದೇ ಆಗಿದ್ದು ಕ್ಯಾಮೆರಾದಲ್ಲಿ ಮಾತ್ರ ಬದಲಾವಣೆಯಾಗಿದೆ.ಐ ಬಾಲ್ ಆಂಡಿ 5 ಇ7 ಸ್ಮಾರ್ಟ್‌ಫೋನ್ ಹಿಂದುಗಡೆ 5 ಎಂಪಿ ಕ್ಯಾಮೆರಾವಿದ್ದರೆ ಐ ಬಾಲ್ ಆಂಡಿ 5- ಎಂ8 ಹಿಂದುಗಡೆ 8 ಎಂಪಿ ಕ್ಯಾಮೆರಾವನ್ನು ಹೊಂದಿದೆ.3ಜಿ,ಜಿಪಿಎಸ್,ಬ್ಲೂಟೂತ್ ವಿಶೇಷತೆಯನ್ನು ಎರಡು ಸ್ಮಾರ್ಟ್‌ಫೋನ್‌ಗಳು ಹೊಂದಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಐ ಬಾಲ್ ಆಂಡಿ 5 ಇ7
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3GHz ಡ್ಯುಯಲ್ ಕೋರ್ ಪ್ರೊಸೆಸರ್
512MB ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೆಮೊರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1850mAh ಬ್ಯಾಟರಿ
ಐ ಬಾಲ್ ಆಂಡಿ 5- ಎಂ8
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ FWVGA ಸ್ಕ್ರೀನ್(480x854 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.3GHz ಡ್ಯುಯಲ್ ಕೋರ್ ಪ್ರೊಸೆಸೆರ್
4GB ಆಂತರಿಕ ಮೆಮೊರಿ
512MB ರ್‍ಯಾಮ್
8 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1850mAh ಬ್ಯಾಟರಿ
ಇದನ್ನೂ ಓದಿ: ಡೀಲ್ 2013:ಟೆಕ್ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು


Click it and Unblock the Notifications








