ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

By Ashwath
|

ಟೆಕ್‌ ಜಗತ್ತಿನ ಬಲಾಢ್ಯ ಕಂಪೆನಿಗಳು ಸಣ್ಣ ಸಣ್ಣಕಂಪೆನಿಗಳನ್ನು ಖರೀದಿಸುವುದು ಈಗ ಸಾಮಾನ್ಯವಾಗಿದೆ. ಈ ವರ್ಷ‌ವು ಇದಕ್ಕೆ ಹೊರತಾಗಿಲ್ಲ. ಈ ವರ್ಷದಲ್ಲಿ ಟೆಕ್‌ ದಿಗ್ಗಜ ಕಂಪೆನಿಗಳಾದ ಗೂಗಲ್‌,ಯಾಹೂ,ಮೈಕ್ರೋಸಾಫ್ಟ್‌‌, ಕಂಪೆನಿಗಳು ಕೋಟಿಗಟ್ಟಲೇ ಹಣ ನೀಡಿ ಖರೀದಿಸಿದೆ.

ಹೀಗಾಗಿ ಇಲ್ಲಿ ಈ ವರ್ಷ‌ ವಿಶ್ವದ ಟಾಪ್‌ ಬ್ರ್ಯಾಂಡ್‌ ಕಂಪೆನಿಗಳು ದುಬಾರಿ ಹಣ ನೀಡಿ ಖರೀದಿಸಿದ ಕಂಪೆನಿಗಳ ಕಿರು ವಿವರ ಇಲ್ಲಿದೆ,ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

  ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಜಿಪಿಎಸ್‌ ಆಧಾರಿತ ನ್ಯಾವಿಗೇಶನ್‌ ಆಪ್ಲಿಕೇಶನ್‌ ಕಂಪೆನಿ ವೇಝ್‌ನ್ನು ಗೂಗಲ್‌ ಖರೀದಿಸಿದೆ. ಇಸ್ರೇಲ್‌ ಕಂಪೆನಿ ವೇಝ್‌ ಆಪ್ ಆಂಡ್ರಾಯ್ಡ್‌‌,ಐಓಎಸ್‌‌,ಸಿಂಬಿಯನ್‌‌, ಬ್ಲ್ಯಾಕ್‌ಬೆರಿ 10 ಓಎಸ್‌ ನಲ್ಲಿದ್ದು 2013 ಜೂನ್‌ 11 ರಂದು ಗೂಗಲ್‌ ಈ ಕಂಪೆನಿಯನ್ನು 1.3 ಶತಕೋಟಿ ಡಾಲರ್‌ ನೀಡಿ ಖರೀದಿಸಿದೆ.2013ರ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಡ್ರಾಪ್‌ ಬಾಕ್ಸ್‌‌‌,ಫ್ಲಿಪ್‌ ಬೋರ್ಡ್‌ ಸೇರಿದಂತೆ ಹಲವಾರು ಆಪ್‌‌ಗಳನ್ನು ಸೋಲಿಸಿ ಅತ್ಯುತ್ತಮ ಮೊಬೈಲ್‌ ಆಪ್‌ ಎನ್ನುವ ಪ್ರಶಸ್ತಿಯನ್ನು ವೇಝ್‌ ಗಳಿಸಿತ್ತು.

  ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಬ್ಲಾಗಿಂಗ್ ಪ್ಲಾಟ್‌ಫಾರಂ ಟಂಬ್ಲರ್‌‌ನ್ನು ಯಾಹೂ 2013 ಮೇ ತಿಂಗಳಿನಲ್ಲಿ 1.1 ಶತಕೋಟಿ ಡಾಲರ್‌ ನೀಡಿ ಖರೀದಿಸಿದೆ. 2007ರಲ್ಲಿ ಟಂಬ್ಲರ್ ಸ್ಥಾಪನೆಯಾಗಿದ್ದು, ನ್ಯೂಯಾರ್ಕ್‌ನಲ್ಲಿ ಮುಖ್ಯ ಕಚೇರಿ ಹೊಂದಿದೆ.13.9 ಕೋಟಿಗೂ ಹೆಚ್ಚು ಬ್ಲಾಗ್‌ಗಳು,192 ನೌಕರರನ್ನು ಹೊಂದಿರುವ ಟಂಬ್ಲರ್‌,ವೆಬ್‌ಸೈಟ್‌‌ಗಳಿಗೆ ರ್‍ಯಾಕಿಂಗ್‌ ನೀಡುವ ಅಲೆಕ್ಸಾ ಸೈಟ್‌ ಪ್ರಕಾರ ಸದ್ಯಕ್ಕೆ(ನವೆಂಬರ್‌,2013) 25ನೇ ಸ್ಥಾನದಲ್ಲಿದೆ.

  ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಗೆಶ್ಚರ್‌ ರೆಕಗ್ನಿಶನ್‌ ಕಂಪೆನಿ ಫ್ಲಟರ್‌ನ್ನು ಗೂಗಲ್‌ 2013 ಅಕ್ಟೋಬರ್‌ನಲ್ಲಿ 40 ದಶಲಕ್ಷ ಡಾಲರ್‌ ನೀಡಿ ಖರೀದಿಸಿದೆ.2010 ರಲ್ಲಿ ಆರಂಭಗೊಂಡ ಈ ಕಂಪೆನಿ ಗೆಶ್ಚರ್‌ ವೆಬ್‌ ಕ್ಯಾಮೆರಾ ಆಪ್‌‌ನ್ನು ಅಭಿವೃದ್ಧಿ ಪಡಿಸಿದ್ದು, ಈ ಆಪ್‌ನ್ನು ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ ಆರು ಅಡಿ ದೂರದಿಂದ ಕೈ ಸನ್ನೆಯ ಮೂಲಕವೇ ಕಂಪ್ಯೂಟರ್‌ಗೆ ನಿರ್ದೆಶನ ನೀಡಬಹುದಾಗಿದೆ.

  ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ವಿಶ್ವದ ಮೊಬೈಲ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಸಾಧನಗಳ ಮುಂದೆ ಬೇಡಿಕೆ ಕುಸಿದಿರುವ ನೋಕಿಯಾ ಕಂಪೆನಿಗೆ ಪುನಶ್ಚೇತನ ನೀಡಲು ಮೈಕ್ರೋಸಾಫ್ಟ್‌‌ ಮುಂದಾಗಿದೆ. 3.79 ಬಿಲಿಯನ್‌ ಯುರೋ ನೋಕಿಯಾ ಸಾಧನಗಳು ಮತ್ತು ಸೇವೆಗಳಿಗಾಗಿ,1.65 ಬಿಲಿಯನ್‌ ಯುರೋ ನೋಕಿಯಾದ ಪೇಟೆಂಟ್‌ಗಳಿಗಾಗಿ, ಒಟ್ಟು 5.44 ಬಿಲಿಯನ್‌ಯುರೋ ನೀಡಿ ಮೈಕ್ರೋಸಾಫ್ಟ್‌ ನೋಕಿಯಾ ಕಂಪೆನಿಯನ್ನು ಖರೀದಿಸಿದೆ.

ಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿಮೈಕ್ರೋಸಾಫ್ಟ್‌ನಿಂದ ನೋಕಿಯಾ ಕಂಪೆನಿ ಖರೀದಿ

  ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಡೀಲ್‌ 2013:ಟೆಕ್‌ ಕಂಪೆನಿಗಳ ತೆಕ್ಕೆಗೆ ಬಿದ್ದ ಕಂಪೆನಿಗಳು

ಇಸ್ರೇಲ್‌ನ 3ಡಿ ಗೆಶ್ಚರ್ ಕಂಪೆನಿ ಪ್ರೈಮ್‌ಸೆನ್ಸ್‌ನ್ನು 2013 ನವೆಂಬರ್‌ನಲ್ಲಿ 350 ದಶಲಕ್ಷ ಡಾಲರ್‌ ನೀಡಿ ಆಪಲ್‌ ಖರೀದಿಸಿದೆ. 3ಡಿ ಗೆಶ್ಚರ್(ಕೇವಲ ಕೈಸನ್ನೆ ಅಥವಾ ಆಂಗಿಕ ಚಲನೆಯಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ಹೊಸ ತಂತ್ರಜ್ಞಾನ) ಕಂಪೆನಿಯಾಗಿದ್ದು ಈಗಾಗಲೇ ಹಲವು ಕಂಪೆನಿಗಳಿಗೆ ತನ್ನ ತಂತ್ರಜ್ಞಾನವನ್ನು ಬಳಸಲು ಅನುಮತಿ ನೀಡಿದೆ.ಆಪಲ್‌ ಮುಂದಿನ ದಿನಗಳಲ್ಲಿ ಗೆಶ್ಚರ್‌ ನಿಯಂತ್ರಣ ಹೊಂದಿರುವ ಆಪಲ್‌ ಟಿವಿಗಳನ್ನು ತಯಾರಿಸಲಿದೆ ಎನ್ನುವ ವದಂತಿ ಇದ್ದು ಅದಕ್ಕೆ ಸಂಬಂಧಿಸಿದಂತೆ ಈ ಪ್ರೈಮ್‌ಸೆನ್ಸ್‌ಕಂಪೆನಿಯನ್ನು ಖರೀದಿಸಿದೆ ಎನ್ನಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X