ಐಬಾಲ್‌ನ ನೂತನ ಆಂಡಿ 4.5 ಹೆಚ್ ಸ್ಮಾರ್ಟ್‌ಫೋನ್ ಬಿಡುಗಡೆ

ಅಂದಹಾಗೆ ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ನೂತನ ಐಬಾಲ್ ಆಂಡಿ 4.5 ಹೆಚ್ ಸ್ಮಾರ್ಟ್‌ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.
ವಿಶೇಷತೆ:
ದರ್ಶಕ: ಆಂಡಿ 4.5ಹೆಚ್ ಸ್ಮಾರ್ಟ್‌ಫೋನ್‌ನಲ್ಲಿ 4.5 ಇಂಚಿನ qHD ಐಪಿಎಸ್ ದರ್ಶಕ ಹಾಗೂ 960 x 540 ಪಿಕ್ಸೆಲ್ ರೆಸೆಲ್ಯೂಷನ್ ನೀಡಲಾಗಿದೆ.
ಪ್ರೊಸೆಸರ್: 1GHz ಡ್ಯುಯೆಲ್ ಕೋರ್ ನೊಂದಿಗೆ ಕಾರ್ಟೆಕ್ಸ್ ಎ9 ಪ್ರೊಸೆಸರ್ ನೀಡಲಾಗಿದೆ.
ಆಪರೇಟಿಂಗ್ ಸಿಸ್ಟಂ: ನೂತನ ಸ್ಮಾರ್ಟ್‌ಫೋನ್‌ನಲ್ಲಿ ಆಂಡ್ರಾಯ್ಡ್ 4.0.4 ಐಸಿಎಸ್ ಆಪರೇಟೊಂಗ್ ಸಿಸ್ಟಂ ನೀಡಲಾಗಿದೆ.
ಕ್ಯಾಮೆರಾ: ಆಟೋ ಫೋಕಸ್ ಹಾಗೂ ಎಲ್‌ಇಡಿ ಫ್ಲಾಶ್ ಸಹಿತ ಹಿಂಬದಿಯ 8MP ಕ್ಯಾಮೆರಾ ಹಾಗೂ ವಿಡಿಯೋ ಕರೆಗಾಗಿ 0.3 MP ನ ಮುಂಬದಿಯ ಕ್ಯಾಮೆರಾ ನೀಡಲಾಗಿದೆ.
ಸ್ಟೋರೇಜ್: 4GB ಆಂತರಿಕ ಸ್ಟೋರೇಜ್ ಸಾಮರ್ತ್ಯದೊಂದಿಗೆ 1GB RAM. ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದ್ದು ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.
ಕನೆಕ್ಟಿವಿಟಿ: 3ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್ ಹಾಗೂ ಮೈಕ್ರೋ ಯುಎಸ್‌ಬಿ 2.0 ನಂತಹ ಕನೆಕ್ಟಿವಿಟಿ ಫೀಚರ್ಸ್ ನೀಡಲಾಗಿದೆ.
ಬ್ಯಾಟರಿ: ಆಂಡಿ 4.5ಹೆಚ್ ಸ್ಮಾರ್ಟ್‌ಫೋನ್‌ನಲ್ಲಿ 1,600 mAh ಸಾಮರ್ತ್ಯದ ಬ್ಯಾಟರಿ ನೀಡಲಾಗಿದೆ.
ಹೆಚ್ಚುವರಿ ಫೀಚರ್ಸ್
ಅಂದಹಾಗೆ ನೂತನ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್‌ಆಪ್, ಫೇಸ್‌ಬುಕ್, ಒಪೇರಾ ಮಿನಿ, ನಿಂಬಝ್, ಝೊಮೊಟೊ, ಐಬಿಎನ್ ಲೈವ್, ಮನಿ ಕಂಟ್ರೋಲ್ ಹಾಗೂ ಕ್ರಿಕೆಟ್ ನೆಕ್ಸ್ಟ ನಂತಹ ಹಲವಾರು ಪ್ರಿ ಲೋಡೆಡ್ ಅಪ್ಲಿಕೇಷನ್‌ಗಳನ್ನು ನೀಡಲಾಗಿದೆ.
ಬೆಲೆ
ಖರೀದಿಸುವುದಾದರೆ ನೂತನ ಐಬಾಲ್ ಆಂಡಿ 4.5ಹೆಚ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರೂ. 12,490, ದರದಲ್ಲಿ ಲಭ್ಯವಿದೆ.


Click it and Unblock the Notifications








