ರೂ. 7,990 ದರದಲ್ಲಿ ಐಬಾಲ್ ಸ್ಲೈಡ್ i6516 ಟ್ಯಾಬ್ಲೆಟ್ ಬಿಡುಗಡೆ

ಅಂದಹಾಗೆ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಬಜೆಟ್ ಟ್ಯಾಬ್ಲೆಟ್‌ಗಳು ಲಭ್ಯವಿದ್ದು ಐಬಾಲ್‌ನ ನೂತನ ಐಸ್ಲೈಡ್ i6516 ಟ್ಯಾಬ್ಲೆಟ್‌ನಲ್ಲಿ ಅವುಗಳನ್ನು ಮೀರಿಸುವಂತಹ ಫೀಚರ್ಸ್‌ಗಳನ್ನು ನೀಡಲಾಗಿದೆ ಎಂಬುದನ್ನು ಒಮ್ಮೆ ನೋಡಿ ಬರೋಣ.
ದರ್ಶಕ: ನೂತನ ಐಸ್ಲೈಡ್ i6516 ಟ್ಯಾಬ್ಲೆಟ್‌ನಲ್ಲಿ 7 ಇಂಚಿನ IPS HD ಕೆಪಾಸಿಟೀವ್ ಟಚ್‌ಸ್ಕ್ರೀನ್ ದರ್ಶಕ ನೀಡಲಾಗಿದೆ.
ಪ್ರೊಸೆಸರ್ ಹಾಗೂ ಸ್ಟೋರೇಜ್: 1.2GHz ಕಾರ್ಟೆಕ್ಸ್ A8 ಪ್ರೊಸೆಸರ್ ನೊಂದಿಗೆ 1GB RAM ನೀಡಲಾಗಿದೆ.
ಆಪರೇಟಿಂಗ್ ಸಿಸ್ಟಂ: ಉಳಿದೆಲ್ಲಾ ಬಜೆಟ್ ಟ್ಯಾಬ್ಲೆಟ್‌ಗಳಂತೆಯೇ ನೂತನ ಐಸ್ಲೈಡ್ ಟ್ಯಾಬ್ಲೆಟ್‌ನಲ್ಲಿಯೂ ಕೂಡಾ ಆಂಡ್ರಾಯ್ಡ್ 4.0 ಐಸಿಎಸ್ ಆಪರೇಟಿಂಗ್ ಸಿಸ್ಟಂ ನೀಡಲಾಗಿದೆ.
ಕ್ಯಾಮೆರಾ: ವಿಡಿಯೋ ಕರೆಗಾಗಿ ಮುಂಬದಿಯ ವಿಜಿಎ ಕ್ಯಾಮೆರಾ ಹಾಗೂ 2MP ಹಿಂಬದಿಯ ಕ್ಯಾಮೆರಾ ನೀಡಲಾಗಿದೆ.
ಕನೆಕ್ಟಿವಿಟಿ: ಐಸ್ಲೈಡ್ i6516 ಟ್ಯಾಬ್ಲೆಟ್‌ನಲ್ಲಿ ವೈ-ಫೈ, ಮೈಕ್ರೋ ಯುಎಸ್‌ಬಿ ಪೋರ್ಟ್, HDMI ಪೋರ್ಟ್ ಹಾಗೂ ಬ್ಲೂಟೂತ್ ಫೀಚರ್ಸ್ ನೀಡಲಾಗಿದೆ.
ಬ್ಯಾಟರಿ: ಸಂಸ್ಥೆ ತಿಳಿಸಿರುವಂತೆ ನೂತನ ಟ್ಯಾಬ್ಲೆಟ್‌ನಲ್ಲಿ 4,000 mAh ಬ್ಯಾಟರಿ ನೀಡಲಾಗಿದ್ದು ಉತ್ತಮ ಬ್ಯಾಕಪ್ ಹೊಂದಿದೆ.
ಹೆಚ್ಚುವರಿ ಫೀಚರ್ಸ್
ಇದಲ್ಲದೆ ಐಸ್ಲೈಡ್ i6516 ಟ್ಯಾಬ್ಲೆಟ್‌ನಲ್ಲಿ ವಾಟ್ಸ್ ಆಪ್, ಫೇಸ್‌ಬುಕ್, ಝೋಮೋಟೋ ಹಾಗು ಕ್ರಿಕೆಟ್ ನೆಕ್ಸ್ಟ ನಂತಹ ಫೀಚರ್ಸ್ ನೀಡಲಾಗಿದೆ.
ಬೆಲೆ ಹಾಗೂ ಲಭ್ಯತೆ
ಖರೀದಿಸುವುದಾದರೆ ನೂತನ ಐಸ್ಲೈಡ್ i6516 ಆಂಡ್ರಾಯ್ಡ್ ಟ್ಯಾಬ್ಲೆಟ್ ರೂ. 7,990 ದರದಲ್ಲಿ ಲಭ್ಯವಿದ್ದು ಆನ್‌ಲೈನ್ ಸೈಟ್‌ಗಳ ಮೂಲಕ ಖರೀದಿಸಿಕೊಳ್ಳ ಬಹುದಾಗಿದೆ.
6,000 ರೂ. ದರದಲ್ಲಿನ ಟಾಪ್ 5 ಆಂಡ್ರಾಯ್ಡ್ ಟ್ಯಾಬ್ಲೆಟ್
ಟಾಪ್ 5 ಆಂಡ್ರಾಯ್ಡ್ ಜೆಲ್ಲಿ ಬೀನ್ ಟ್ಯಾಬ್ಲೆಟ್ಸ್


Click it and Unblock the Notifications








