Subscribe to Gizbot

ಜಿಯೋಗೆ ಸೆಡ್ಡು ಐಡಿಯಾದಿಂದ 4G ಪೋನ್: ಬೆಲೆ ಎಷ್ಟು ಗೊತ್ತಾ..?

Written By:

ರಿಲಯನ್ಸ್ ಮಾಲೀಕತ್ವದ ಜಿಯೋ 4G VoLTE ಸಫೋರ್ಟ್ ಮಾಡುವ ಜಿಯೋ ಫೋನ್ ಲಾಂಚ್ ಮಾಡಿ ಹೊಸ ಕ್ರಾಂತಿಯನ್ನು ಹುಟ್ಟಿಹಾಕಿತ್ತು. ಇದೇ ಮಾದರಿಯಲ್ಲಿ ಐಡಿಯಾ ಸಹ ಹೊಸದೊಂದು ಫೋನ್ ಲಾಂಚ್ ಮಾಡಲು ಭರ್ಜರಿ ತಯಾರಿ ನಡೆಸಿದೆ.

ಜಿಯೋಗೆ ಸೆಡ್ಡು ಐಡಿಯಾದಿಂದ 4G ಪೋನ್: ಬೆಲೆ ಎಷ್ಟು ಗೊತ್ತಾ..?

ಓದಿರಿ: ಕಾಲೇಜು ಹುಡುಗರು ಜಿಯೋ ಬಿಟ್ಟು ವೊಡಾಫೋನ್ ಕಡೆ ಬರ್ತಾರೆ! ಯಾಕೆ?

ಜಿಯೋ ಹಾದಿಯನ್ನು ಹಿಡಿದಿರುವ ಐಡಿಯಾ ಸಹ ಫೀಚರ್ ಫೋನ್ ಲಾಂಚ್ ಮಾಡಲು ತಯಾರಿ ನಡೆಸಿದ್ದು, ಇದರ ಬೆಲೆ ರೂ.2,500 ಆಗಿರಲಿದೆ. ತನ್ನ ಫೋನಿನೊಂದಿಗೆ ಐಡಿಯಾ ಗ್ರಾಹಕರಿಗೆ ಜಿಯೋ ಮಾದರಿಯಲ್ಲಿ ಭರ್ಜರಿ ಆಫರ್ ಸಹ ನೀಡಲಿದೆಯಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4G VoLTE ಸೇವೆ:

4G VoLTE ಸೇವೆ:

ಐಡಿಯಾ ಸಹ ಜಿಯೋ ಮಾದರಿಯಲ್ಲಿ 4G VoLTE ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಿದ್ದು, ಸದ್ಯ ಏರ್‌ಟೆಲ್ ಈ ಕಾರ್ಯದಲ್ಲಿ ನಿರತವಾಗಿದ್ದು, ಇದಾದ ನಂತರ ಐಡಿಯಾ ಸಹ VoLTE ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಉಚಿತ ಕರೆಗಳು:

ಉಚಿತ ಕರೆಗಳು:

ಜಿಯೋ ಮಾದರಿಯಲ್ಲಿ ಐಡಿಯಾ ಸಹ VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ಉಚಿತ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನವ ಮಾಹಿತಿ ಲೀಕ್ ಆಗಿದೆ. ಜಿಯೋ ಸಹ ಸೇವೆ ಆರಂಭಿಸಿದ ಸಂದರ್ಭದಲ್ಲಿ ಉಚಿತ ಕರೆ ಸೇವೆಯನ್ನು ನೀಡಲು ಮುಂದಾಗಿತ್ತು.

ರೂ.2500 ರ ಫೀಚರ್ ಫೋನ್‌:

ರೂ.2500 ರ ಫೀಚರ್ ಫೋನ್‌:

ಜಿಯೋ ಲಾಂಚ್ ಮಾಡಿದಂತೆ ತನ್ನದೇ ಬ್ರಾಂಡಿನ ಫೋನ ಲಾಂಚ್ ಮಾಡಲು ಐಡಿಯಾ ಮುಂದಾಗಿದೆ. ಈ ಫೋನಿನ ಬೆಲೆ ಬಂದು ರೂ. 2,500 ಗಳಾಗಲಿದೆ ಎನ್ನುವ ಮಾಹಿತಿ ದೊರೆತಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ವೇಗದ ಇಂಟರ್ನೆಟ್:

ವೇಗದ ಇಂಟರ್ನೆಟ್:

ಐಡಿಯಾ ಸಹ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ ವೇಗದ ಇಂಟರ್ ನೆಟ್ ಸೇವೆಯನ್ನು ನೀಡುವುದಾಗಿ ಐಡಿಯಾ ತಿಳಿಸಿದೆ. 4G VoLTE ವೇಗದ ಸೇವೆಯನ್ನು ನೀಡಲಿದ, ಅಲ್ಲದೇ ಇದರ ಬೆಲೆಯೂ ತೀರಾ ಕಡಿಮೆ ಇರಲಿದೆ ಎನ್ನಲಾಗಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
To counter Reliance Jio's, JioPhone, India's third largest telecom operator Idea Cellular is also planning to launch a new phone in the market. The phone is said to be priced starting at Rs. 2,500. T0 Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot