ಕಾಲೇಜು ಹುಡುಗರು ಜಿಯೋ ಬಿಟ್ಟು ವೊಡಾಫೋನ್ ಕಡೆ ಬರ್ತಾರೆ! ಯಾಕೆ?

ಜಿಯೋ ಕಾಲೇಜು ವಿದ್ಯಾರ್ಥಿಗಳಿಗೆ ಗಾಳ ಹಾಕಲು ಹೊಸ ಆಫರ್ ಘೋಷಣೆ ಮಾಡಿದ ಬೆನ್ನಲೇ ವೊಡಾಪೋನ್ ಸಹ ಹೊಸದೊಂದು ಸಾಹಸಕ್ಕೆ ಮುಂದಾಗಿದೆ.

|

ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಟ್ರೆಂಡ್ ಸೆಟರ್ ಆಗಿದ್ದು, ಇತರೆ ಕಂಪನಿಗಳು ಜಿಯೋ ಹಾದಿಯಲ್ಲಿ ಸಾಗುವ ಕಾರ್ಯವನ್ನು ಮಾಡುತ್ತಿದೆ. ಜಿಯೋ ಕಾಲೇಜು ವಿದ್ಯಾರ್ಥಿಗಳಿಗೆ ಗಾಳ ಹಾಕಲು ಹೊಸ ಆಫರ್ ಘೋಷಣೆ ಮಾಡಿದ ಬೆನ್ನಲೇ ವೊಡಾಫೋನ್ ಸಹ ಹೊಸದೊಂದು ಸಾಹಸಕ್ಕೆ ಮುಂದಾಗಿದೆ.

ಕಾಲೇಜು ಹುಡುಗರು ಜಿಯೋ ಬಿಟ್ಟು ವೊಡಾಫೋನ್ ಕಡೆ ಬರ್ತಾರೆ! ಯಾಕೆ?

ಓದಿರಿ: ಆನ್‌ಲೈನಿನಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವವರಿಗೆ ಶಾಕ್ ಕೊಟ್ಟ ಆದಾಯ ತೆರಿಗೆ ಇಲಾಖೆ.!!

ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ವೊಡಾಫೋನ್ ಕ್ಯಾಂಪಸ್ ಸರ್‌ವೈವಲ್ ಕಿಟ್ ಎಂಬ ಆಫರ್ ಅನ್ನು ಲಾಂಚ್ ಮಾಡಿದೆ. ಈ ಆಫರ್ ಅನ್ನು ಕಾಲೇಜು ಹುಡುಗರನ್ನು ಗಮನದಲ್ಲಿಟ್ಟುಕೊಂಡು ವೊಡಾಪೋನ್ ಈ ಆಫರ್ ವಿನ್ಯಾಸ ಮಾಡಿದ್ದು, ಕಡಿಮೆ ಬೆಲೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ.

ಪ್ರತಿ ದಿನ 1GB 4G/3G ಡೇಟಾ:

ಪ್ರತಿ ದಿನ 1GB 4G/3G ಡೇಟಾ:

ಕಾಲೇಜು ವಿದ್ಯಾರ್ಥಿಗಳಿಗೆ ವೊಡಾಫೋನ್ ಕ್ಯಾಂಪಸ್ ಆಫರ್ ನೀಡಲಾಗಿದ್ದು, ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ವೊಡಾಫೋನ್ 84 ದಿನಗಳಿಗೆ ಪ್ರತಿ ನಿತ್ಯ 1GB 4G/3G ಡೇಟಾವನ್ನು ನೀಡಲು ಮುಂದಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಬೆಲೆ ರೂ. 352 ಮಾತ್ರವೇ:

ಬೆಲೆ ರೂ. 352 ಮಾತ್ರವೇ:

84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಬೆಲೆ ರೂ.352 ಆಗಿದ್ದು, ಇದರಲ್ಲಿ ಬಳಕೆದಾರರು ದಿನಕ್ಕೆ ಒಂದು GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ವಿದ್ಯಾರ್ಥಿ ಸಮುದಾಯಕ್ಕೆ ಗಾಳ:

ವಿದ್ಯಾರ್ಥಿ ಸಮುದಾಯಕ್ಕೆ ಗಾಳ:

ಇಂದಿನ ದಿನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ದೊಡ್ಡ ಸಮುದಾಯವನ್ನು ಸೆಳೆಯಲು ವೊಡಾಫೋನ್ ಮುಂದಾಗಿದೆ ಎನ್ನಲಾಗಿದೆ.

ಜಿಯೋ ಗಿಂತಲೂ ಕಡಿಮೆ ಬೆಲೆ:

ಜಿಯೋ ಗಿಂತಲೂ ಕಡಿಮೆ ಬೆಲೆ:

ಈ ಆಫರ್ ನಲ್ಲಿ ವೊಡಾಫೋನ್ ಜಿಯೋ ಗಿಂತಲೂ ಹೆಚ್ಚಿನ ಆಯ್ಕೆಯನ್ನು ನೀಡಿದ್ದು, ಅಲ್ಲದೇ ಬೆಲೆಯನ್ನು ತೀರಾ ಕಡಿಮೆ ಇಟ್ಟಿದೆ. ಜಿಯೋ ರೂ.399 ಪ್ಲಾನ್ ಲಾಭಗಳು ಇದರಲ್ಲಿ ದೊರೆತರೂ ಬೆಲೆ ಕಡಿಮೆಯೇ ಇದೆ.

ಕಿಟ್ ನಲ್ಲಿ ಇನ್ನೂ ಇದೆ:

ಕಿಟ್ ನಲ್ಲಿ ಇನ್ನೂ ಇದೆ:

ವೊಡಾಫೋನ್ ಕ್ಯಾಂಪಸ್ ಸರ್‌ವೈವಲ್ ಕಿಟ್ ನಲ್ಲಿ ಇನ್ನು ಹಲವು ಅಂಶಗಳಿದ್ದು, ಇದರಲ್ಲಿ ಓಲಾ, ಜೊಮಾಟೋ ಕೂಪನ್ ಗಳು ಸೇರಿದಂತೆ ಹಲವು ಆಫರ್ ಇರುವ ಕೂಪನ್ ಗಳು ದೊರೆಯಲಿದ್ದು, ಇದರ ಬೆಲೆ ರೂ. 445 ಆಗಿದೆ. ಅಲ್ಲದೇ ಇದು ಬೇಡ ಎಂದವರು ರೂ. 352ಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

Best Mobiles in India

Read more about:
English summary
To counter Reliance Jio, Vodafone is targeting students with a new scheme that will offer unlimited calls with 1GB of 4G/3G data every day for 84 days, according to a company official. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X