Subscribe to Gizbot

ಒಂದೇ ಬಾರಿಗೆ 40 ಫೋನ್‌ ಚಾರ್ಜ್‌ ಮಾಡಿ!

Posted By:

ವೈರ್‌ಲೆಸ್‌ ಚಾರ್ಜರ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ ಮಾಡುವುದುಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಇನ್ನು ಮುಂದೆ 40 ಫೋನ್‌ಗಳನ್ನು ಒಂದೇ ಬಾರಿಗೆ ವೈರ್‌‌ಲೆಸ್‌ ಮೂಲಕ ಚಾರ್ಚ್‌ ಮಾಡಬಹುದು.

ದಕ್ಷಿಣ ಕೊರಿಯದ ಸಂಶೋಧಕರು 40 ಫೋನ್‌‌ಗಳನ್ನು ಒಂದೇ ಬಾರಿಗೆ ಚಾರ್ಜ್‌ ಮಾಡಬಲ್ಲ ಹೊಸ ವೈರ್‌ಲೆಸ್‌ ಚಾರ್ಜಿಂಗ್‌ ಸಿಸ್ಟಂನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಚಾರ್ಜಿಂಗ್‌ ವ್ಯವಸ್ಥೆಯಲ್ಲಿ 5 ಮೀಟರ್‌ ದೂರದಲ್ಲಿ ಎಲ್ಲೇ ಮೊಬೈಲ್‌, ಲ್ಯಾಪ್‌ಟಾಪ್‌,ಎಂಪಿ3 ಪ್ಲೇಯರ್‌ ಸೇರಿದಂತೆ ಇನ್ನಿತರ ಯಾವುದೇ ಚಾರ್ಜಿಂಗ್‌ ಸಾಧಗಳನ್ನು ಇರಿಸಿದರೂ ಇದರಲ್ಲಿ ಚಾರ್ಜ್‌ ಮಾಡಬಹುದು ಎಂದು Korea Advanced Institute of Science and Technology ಸಂಶೋಧಕರು ಹೇಳಿದ್ದಾರೆ.

ಸಂಶೋಧಕರು Dipole Coil Resonant System ಬಳಸಿ ಈ ವೈರ್‌ಲೆಸ್‌ ಚಾರ್ಜಿಂಗ್‌‌ನ್ನು ಅಭಿವೃದ್ಧಿ ಪಡಿಸಿದ್ದಾರೆ. ಪ್ರಸ್ತುತ ವೈಫೈ ಝೋನ್‌ ಸೃಷ್ಟಿಸಿ ಇಂಟರ್‌ನೆಟ್‌ ಬಳಸುತ್ತಿದ್ದೇವೋ ಅದೇ ರೀತಿಯಾಗಿ ವೈರ್‌‌ಲಾಸ್‌ ಚಾರ್ಜರ್‌ನ್ನು ಬಳಸಬಹುದಾಗಿದ್ದು ಇನ್ನು ಇದು ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಈ ತಂತ್ರಜ್ಞಾನ ಪ್ರಾಯೋಗಿಕ ಹಂತದಲ್ಲಿದ್ದು ವೈಯಕ್ತಿಕ ಬಳಕೆಗೆ ದುಬಾರಿಯಾದರೂ, ಕಂಪೆನಿ,ರೆಸ್ಟೋರೆಂಟ್‌‌ ಸಾರ್ವ‌ಜನಿಕ ಸ್ಥಳಗಳಲ್ಲಿ ಈ ವೈರ್‌ಲೆಸ್‌ ಚಾರ್ಜಿಂಗ್‌ ತುಂಬಾ ಸಹಕಾರಿಯಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ: 30 ಸೆಕೆಂಡ್‌ನಲ್ಲಿ ಮೊಬೈಲ್‌ ಚಾರ್ಜ್‌‌ ಮಾಡಿ!

<center><iframe width="100%" height="360" src="//www.youtube.com/embed/R6UCwqjdpo0?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot