Subscribe to Gizbot

30 ಸೆಕೆಂಡ್‌ನಲ್ಲಿ ಮೊಬೈಲ್‌ ಚಾರ್ಜ್‌‌ ಮಾಡಿ!

Posted By:

ಮೊಬೈಲ್ ನಲ್ಲಿ ಚಾರ್ಚ್ ಇಲ್ಲ ಎಂದು ಪರದಾಡುವವರಿಗೆ ಒಂದು ಸಿಹಿ ಸುದ್ದಿ.ಕೇವಲ 30 ಸೆಕೆಂಡ್‌ಗಳಲ್ಲಿ ಮೊಬೈಲ್‌ ಫೋನ್‌ಗಳ ಬ್ಯಾಟರಿ ಚಾರ್ಜ್ ಮಾಡುವ ಸಾಧನವನ್ನು ಇಸ್ರೆಲ್‌ನ ಕಂಪೆನಿಯೊಂದು ಅಭಿವೃದ್ಧಿಪಡಿಸಿದೆ.

ಇಸ್ರೆಲ್‌ನ ಸ್ಟೋರ್‌ಡಾಟ್‌(StoreDot) ಕಂಪೆನಿ ಟೆಲ್ ಅವಿವ್ ವಿಶ್ವವಿದ್ಯಾನಿಲಯದ ನ್ಯಾನೋ ಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಹೊಸ ಬ್ಯಾಟರಿ ಮತ್ತು ಚಾರ್ಜಿಂಗ್ ಕಾಂಬೊವನ್ನು ಸಂಶೋಧಿಸಿದೆ.

ಇಸ್ರೆಲ್‌ನಲ್ಲಿ ನಡೆಯುತ್ತಿರುವ ಮೈಕ್ರೋಸಾಫ್ಟ್‌‌ ಥಿಂಕ್‌ ನೆಕ್ಸ್ಟ್‌‌ ಕಾನ್ಫರೆನ್ಸ್‌ನಲ್ಲಿ ಕಂಪೆನಿ ಹೊಸ ಬ್ಯಾಟರಿ ತಂತ್ರಜ್ಞಾನವನ್ನು ಪ್ರದರ್ಶಿ‌ಸಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈಗ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಲಿಥಿಯಂ ಬ್ಯಾಟರಿ ತಂತ್ರಜ್ಞಾನದ ಬದಲಾಗಿ ಜೈವಿಕ ಅರೆವಾಹಕ(biological semiconductors) ತಂತ್ರಜ್ಞಾನದ ಬ್ಯಾಟರಿಯನ್ನು ಕಂಪೆನಿ ತಯಾರಿಸಿದೆ. ಸಮ್ಮೇಳನದಲ್ಲಿ ಸ್ಯಾಮ್‌ಸಂಗ್‌ಗೆಲಾಕ್ಸಿ ಎಸ್‌4 ಸ್ಮಾರ್ಟ್‌‌ಫೋನ್‌ನ್ನು ಮೂವತ್ತು ಸೆಕೆಂಡ್‌‌ನಲ್ಲಿ ಚಾರ್ಜ್‌ ಮಾಡುವ ಮೂಲಕ ಮಾಧ್ಯಮದವರಿಗೆ ವಿವರಿಸಿದ್ದಾರೆ.

ಈ ಬ್ಯಾಟರಿ ದುಬಾರಿಯಾಗಿರದೇ ಕೇವಲ 30 ಡಾಲರ್‌ನಲ್ಲಿ( 1800ರೂಪಾಯಿ) ಅಭಿವೃದ್ಧಿ ಪಡಿಸಬಹುದು ಎಂದು ಕಂಪೆನಿ ಹೇಳಿದೆ.ಈ ತಂತ್ರಜ್ಞಾನದ ಬ್ಯಾಟರಿಯನ್ನು ಮಾರುಕಟ್ಟೆಗೆ 2016ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

<center><iframe width="100%" height="360" src="//www.youtube.com/embed/9DhJZAhjbcI?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot