ವಿಶ್ವದ ಅತ್ಯಂತ ಅಗ್ಗದ ಆಂಡ್ರಾಯ್ಡ್ 4.1 ಟ್ಯಾಬ್ಲೆಟ್

ಭಾರತದ ಮೊಬೈಲ್ ಹಾಗು ಟ್ಯಾಬ್ಲೆಟ್ ಉತ್ಪಾದಕ ಕಾರ್ಬನ್, ಗೂಗಲ್ ನ ಟ್ಯಾಬ್ಲೆಟ್ ಗೆ ಸಡ್ಡು ಹೊಡೆಯಲು ತಾನೂ ಆಂಡ್ರಾಯ್ಡ್ ಜೆಲ್ಲಿ ಬೀನ್ ಟ್ಯಾಬ್ಲೆಟ್ ಅನ್ನು ಹೊರತರಲಿದೆ ಎಂದು ಕಳೆದ ತಿಂಗಳು ಘೋಷಿಸಿತ್ತು.
ಹೇಳಿದಂತೆಯೇ ಮಾಡಿರುವ ಕಾರ್ಬನ್ ಈಗ ಕೇವಲ 6,990 ರೂಪಾಯಿಗೆ ಕಾರ್ಬನ್ ಸ್ಮಾರ್ಟ್ ಟ್ಯಾಬ್ 1 ಹೆಸರಿನ ಟ್ಯಾಬ್ಲೆಟ್ ಅನ್ನು ಹೊರತಂದಿದೆ. ಸದ್ಯಕ್ಕೆ ಗೂಗಲ್ ನ ನೆಕ್ಸಸ್ ಟ್ಯಾಬ್ಲೆಟ್ ಮಾತ್ರ ಆಂಡ್ರಾಯ್ಡ್ ಜೆಲ್ಲಿ ಬೀನ್ ( ಆಂಡ್ರಾಯ್ಡ್ 4.1) ಆವೃತ್ತಿ ಇರುವ ಟ್ಯಾಬ್ಲೆಟ್ ಆಗಿದ್ದು, ಅದು ಭಾರತಕ್ಕೆ ಬರುವುದು ಲೇಟಾಗುವುದರಿಂದ ಕಾರ್ಬನ್ ಈ ಸಮಯದಲ್ಲಿ ಬಿಡುಗಡೆ ಮಾಡಿರುವುದು ಗ್ರಾಹಕರಿಗೆ ಒಳ್ಳೆಯದೇ ಆಗಿದೆ.
ಅಂದ ಹಾಗೆ ಕಾರ್ಬನ್ ಸ್ಮಾರ್ಟ್ ಟ್ಯಾಬ್ 1 ನ ಹಿಂದಿನ ಮಾಡೆಲ್ ನಲ್ಲಿ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶವಿದ್ದು, ಆ ಟ್ಯಾಬ್ಲೆಟ್ ಗಳನ್ನು ಬಳಸುತ್ತಿರುವ ಗ್ರಾಹಕರೂ ಜೆಲ್ಲಿ ಬೀನ್ ತಂತ್ರಾಂಶಕ್ಕೆ upgrade ಮಾಡಿಕೊಳ್ಳುವ ಅವಕಾಶವಿದೆ.
ಹಾಗಿದ್ದರೆ ಜೆಲ್ಲಿ ಬೀನ್ ಟ್ಯಾಬ್ಲೆಟ್ ಇರುವ ಸ್ಮಾರ್ಟ್ ಟ್ಯಾಬ್ 1 ನಲ್ಲಿ ಏನೇನಿದೆ ನೋಡೋಣವೆ:
- 7 ಇಂಚು 5 ಪಾಯಿಂಟ್ ಕೆಪಾಸಿಟಿವ್ ಟಚ್ ಸ್ಕ್ರೀನ್
- ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್
- 1.2 GHz ಪ್ರೊಸೆಸರ್
- 2 ಮೆಗಾಪಿಕ್ಸೆಲ್ ಕ್ಯಾಮೆರಾ
- 1 GB ಆಂತರಿಕ ಮೆಮೊರಿ
- ವೈಫೈ 802.11 b/g/n
- ಮಿನಿ HDMI ಪೋರ್ಟ್ (ಟಿವಿಗೆ ಸಂಪರ್ಕ ಕಲ್ಪಿಸಬಹುದು)
- ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 1080p HD ವೀಡಿಯೋ ಪ್ಲೇಬ್ಯಾಕ್
- 3G ಸಂಪರ್ಕ, USB ಡಾ೦ಗಲ್ ಮೂಲಕ
- 3 D ಗ್ರಾವಿಟಿ ಸೆನ್ಸರ್,
- 7 ಗಂಟೆ ಬ್ಯಾಕಪ್ ಇರುವ 3700 mAh ಬ್ಯಾಟರಿ
ಭಾರತದ ಮೊದಲ ಹಾಗುವಿಶ್ವದ ಅತಿ ಅಗ್ಗದ ಜೆಲ್ಲಿ ಬೀನ್ ತಂತ್ರಾಂಶದ ಟ್ಯಾಬ್ಲೆಟ್ ಆದ ಕಾರ್ಬನ್ ಸ್ಮಾರ್ಟ್ ಟ್ಯಾಬ್ 1 ಅನ್ನು ನೀವು ಕಾರ್ಬನ್ ಆನ್ಲೈನ್ ಮಳಿಗೆಯಲ್ಲಿ ಬುಕ್ ಮಾಡಬಹುದಾಗಿದೆ.


Click it and Unblock the Notifications