ಮಂಗಳನೆಡೆ ಭಾರತದ ಪಯಣಕ್ಕೆ ಕೌಂಟ್‌ಡೌನ್‌ ಶುರು

By Ashwath
|

ಮಂಗಳಗ್ರಹದಲ್ಲಿರುವ ಮಿಥೇನ್‌ ಅನಿಲ ಪತ್ತೆ ಹಚ್ಚಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕಳುಹಿಸುತ್ತಿರುವ ಮಂಗಳ ನೌಕೆ ಉಡಾವಣೆಯಾಗಲು ಕೌಂಟ್‌ಡೌನ್‌ ಆರಂಭವಾಗಿದೆ.

ಮಂಗಳವಾರ(ನ. 5) ಮಧ್ಯಾಹ್ನ 2.38ಕ್ಕೆ ಪಿಎಸ್‌ಎಲ್‌ವಿ ನ ಉಡಾವಣಾ ವಾಹನದಲ್ಲಿ ಹಾರಿಬಿಡಲಾಗುತ್ತಿರುವ ಉಪಗ್ರಹದ ಕೊನೆಯ ಕ್ಷಣದ ತಯಾರಿಯನ್ನು ಇಸ್ರೋ ವಿಜ್ಞಾನಿಗಳು ನಡೆಸುತ್ತಿದ್ದಾರೆ. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.ಇಸ್ರೋದ ಹೆಮ್ಮೆಯ ಉಡಾವಣಾ ವಾಹನ ಪಿಎಸ್‌ಎಲ್‌ವಿ 25ನೇ ಉಡ್ಡಯನವಿದು. ಹೀಗಾಗಿ ಪಿಎಸ್‌ಎಲ್‌ವಿ ಮತ್ತು ಮಂಗಳಯಾನಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಮಂಗಳನೆಡೆಗೆ ಇಸ್ರೋ ನಡಿಗೆ ಹೀಗೆ..

  ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಭಾರತದ 24 ಪಿಎಸ್‌ಎಲ್‌ವಿ ನೌಕೆಗಳು ಕಳೆದ 20 ವರ್ಷಗಳಿಂದ ಉಡ್ಡಯನ ಮಾಡಿದೆ. ಇದು ಪಿಎಸ್‌ಎಲ್‌ವಿ ನೌಕೆಯ 25ನೇ ಉಡ್ಡಯನ. ಈ ಕಾರಣಕ್ಕಾಗಿ ನೌಕೆಗೆ ಪಿಎಸ್‌ಎಲ್‌ವಿ ಸಿ25 ಹೆಸರನ್ನು ಇರಿಸಲಾಗಿದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಇಸ್ರೋದ ಮಹತ್ವಾಕಾಂಕ್ಷಿ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ನೌಕೆ ಯಶಸ್ವಿಯಾಗಿ ಕಕ್ಷಗೆ ತಲುಪಿಸಿದೆ.ಚಂದ್ರಯಾನಕ್ಕಾಗಿ ಪಿಎಸ್‌ಎಲ್‌ವಿ ಸಿ 11 ,ಸಂವಹನ ಉಪಗ್ರಹ ಕಳುಹಿಸಲು ಪಿಎಸ್‌ಎಲ್‌ವಿ ಸಿ17,ರಿಮೋಟ್‌ ಸೆನ್ಸಿಂಗ್‌ ರಿಸ್ಯಾಟ್ ಉಪಗ್ರಹ ಕಳುಹಿಸಲು ಪಿಎಸ್‌ಎಲ್‌ವಿ ಸಿ 19,ದಿಕ್ಸೂಚಿ ಉಪಗ್ರಹ ಕಳುಹಿಸಲು ಪಿಎಸ್‌ಎಲ್‌ವಿ ಸಿ 22 ಇಸ್ರೋ ಬಳಸಿ ಯಶಸ್ವಿಯಾಗಿದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


44.4 ಮೀಟರ್‌ ಎತ್ತರದ ರಾಕೆಟನ್ನು ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕಟ್ಟೆಯಲ್ಲಿ ಅಳವಡಿಸಲಾಗಿದೆ. ರಾಕೆಟ್‌‌ಗೆ ಗಾಳಿಯಿಂದ ರಕ್ಷಣೆ ನೀಡಲು 76 ಮೀಟರ್‌ ಎತ್ತರದ ತಾತ್ಕಾಲಿಕ ಟವರ್‌‌ನ್ನು ನಿರ್ಮಿಸಲಾಗಿದೆ.ಈ ತಾತ್ಕಾಲಿಕ ಟವರ್‌ 230 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ.ರಾಕೆಟ್‌ ಉಡಾವಣೆ ಸಮಯ ಹತ್ತಿರವಾಗುತ್ತಿದ್ದಂತೆ ಟವರ್‌ನ್ನು ಸರಿಸಲಾಗುತ್ತದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಬೆಂಗಳೂರಿನ ಬ್ಯಾಲಾಳು,ಪೋರ್ಟ್‌ಬ್ಲೇರ್‌, ಮಲೇಷ್ಯಾ ಸಮೀಪದ ಬ್ರೂನೈನಲ್ಲಿರುವ ಇಸ್ರೋ ಕೇಂದ್ರಗಳು ಉಪಗ್ರಹದ ಮೇಲೆ ನಿಗಾ ಇಡಲು ಸಜ್ಜಾಗಿವೆ.ಅಲ್ಲದೆ, ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ಭಾರತದ ನಳಂದಾ ಮತ್ತು ಯಮುನಾ ಎರಡು ಹಡಗುಗಳು ಪಿಎಸ್‌ಎಲ್‌ವಿ ನೌಕೆಯಿಂದ ಉಪಗ್ರಹ ಬೇರ್ಪಡುವ ಪ್ರಕ್ರಿಯೆ ಸೆರೆ ಹಿಡಿಯಲಿದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಉಪಗ್ರಹ ಬೇರ್ಪಡುವ ಪ್ರಕ್ರಿಯೆ ಸೆರೆ ಹಿಡಿಯಲಿರುವ ಎಸ್‌ಸಿಐ ಯಮುನಾ ಹಡಗು

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಪಿಎಸ್‌ಎಲ್‌ವಿ ನೌಕೆಯ ಉಡ್ಡಯನ ಯಂತ್ರಕ್ಕೆ ಆರಂಭಿಕ ವೇಗವನ್ನು ನೀಡುವ ಭಾಗವನ್ನು ವಿಜ್ಞಾನಿಗಳು ಜೋಡಿಸುತ್ತಿರುವುದು.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಆರಂಭದ ಇಂಧನ ಮುಗಿದ ಬಳಿಕ ನಂತರ ಚಾಲನೆಗೊಳ್ಳುವ ಭಾಗವನ್ನು ಜೋಡಿಸುತ್ತಿರುವ ವಿಜ್ಞಾನಿಗಳು

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಎರಡನೇ ಹಂತ ಮಗಿದ ಬಳಿಕ ಚಾಲನೆಗೊಳ್ಳುವ ಭಾಗವನ್ನು ವಿಜ್ಞಾನಿಗಳು ಜೋಡಿಸುತ್ತಿರುವುದು.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಪಿಎಸ್‌ಎಲ್‌ವಿ ನೌಕೆ ಕೊನೆಯದಾಗಿ ಕಳಚಿ ಬೀಳುವ ಭಾಗವನ್ನು ವಿಜ್ಞಾನಿಗಳು ಜೋಡಿಸುತ್ತಿರುವುದು.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಪಿಎಸ್‌ಎಲ್‌ವಿ ನೌಕೆಯ ಉಪಗ್ರಹ ಇರುವ ಸ್ಥಳ ಪೇ ಲೋಡ್‌

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಮಂಗಳಯಾನ ಯಶಸ್ಸಿಗಾಗಿ ಇಸ್ರೋ ಅಧ್ಯಕ್ಷ ರಾಧಾಕೃಷ್ಣನ್‌ ಸೋಮವಾರ ಪತ್ನಿ ಸಮೇತರಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಂಗಳಯಾನ ಪಿಎಸ್‌ಎಲ್‌ವಿ 25 ರಾಕೆಟ್‌ನ ಪ್ರತಿಕೃತಿಯನ್ನೂ ಅವರು ತಮ್ಮೊಂದಿಗೆ ತಂದು ಅದಕ್ಕೂ ಪೂಜೆ ಮಾಡಿದ್ದಾರೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಮಧ್ಯಾಹ್ನ ಉಡಾವಣೆಯಾಗಲಿರುವ ಉಪಗ್ರಹವನ್ನು ಭೂಕಕ್ಷೆಗೆ ಸೇರಿಸಲು ಪಿಎಸ್‌ಎಲ್‌ವಿ ನೌಕೆ ಸರಿಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳಲಿದ್ದು ನಂತರ ಉಪಗ್ರಹ 20ರಿಂದ 25 ದಿನಗಳ ಕಾಲ ಭೂಕಕ್ಷೆಯಲ್ಲೇ ಸುತ್ತಾಡಲಿದೆ.ಉಪಗ್ರಹ 9 ತಿಂಗಳ ಮಂಗಳ ಯಾನವನ್ನು ಡಿ.1ರಿಂದ ಕೈಗೊಳ್ಳಲಿದ್ದು,2014ರ ಸೆ.24ರಂದು ಮಂಗಳ ಕಕ್ಷೆ ತಲುಪಲಿದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಇಸ್ರೋ ಮಂಗಳ ಯಾನ ಯಶಸ್ವಿಯಾದಲ್ಲಿ ಈ ಸಾಧನೆ ಮಾಡಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಮಂಗಳ ಯಾನಕ್ಕೆ ವಿವಿಧ ಕೈಗೊಂಡ 51 ಯೋಜನೆಗಳಲ್ಲಿ 21 ಸಫಲವಾಗಿದೆ. 1999ರಲ್ಲಿ ಜಪಾನ್, 2011ರಲ್ಲಿ ಚೀನಾದ ಯೋಜನೆ ವಿಫಲಗೊಂಡಿದೆ.

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ

ಮಂಗಳನೆಡೆ ಪಯಣಕ್ಕೆ ಇಸ್ರೋ ರೆಡಿ


ಇಸ್ರೋದ ಮಂಗಳ ಯಾನಕ್ಕೆ ನಾಸಾ ಶುಭಾಶಯ ಹೇಳಿದ್ದು ಮಾತ್ರವಲ್ಲದೇ
ಉಡಾವಣೆ ವೇಳೆ ಶೇಂಗಾ ಬೀಜ ತಿನ್ನಿ, ಮಂಗಳ ಯಾನ ಯಶಸ್ವಿಯಾಗುತ್ತೆ ಎನ್ನುವ ಸಲಹೆಯನ್ನು ನೀಡಿದ್ದಾರೆ. 1960ರಿಂದ ನಾವು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ. ನೀವು ಈ ಸಂಪ್ರದಾಯವನ್ನು ಆರಂಭಿಸಿ ಎಂದು ನಾಸಾದ ಜೆಪಿಎಲ್‌ ಸಲಹೆ ಮಾಡಿದೆ. ಜೆಪಿಎಲ್‌ನ ನಿರ್ದೇಶಕರು ಇಸ್ರೋಕ್ಕೆ ಇಮೇಲ್‌ ಮಾಡಿ ಈ ಸಲಹೆ ನೀಡಿದ್ದು ಇಸ್ರೋ ಈ ಸಲಹೆಯನ್ನು ತನ್ನ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X