ಮಂಗಳನೆಡೆಗೆ ಇಸ್ರೋ ನಡಿಗೆ ಹೀಗೆ...

By Ashwath
|

ವಿಜ್ಞಾನಿಗಳಲ್ಲಿ ಮಂಗಳ ಗ್ರಹದ ಕುತೂಹಲ ದಿನೆ ದಿನೇ ಹೆಚ್ಚಾಗುತ್ತಿದೆ. ಕ್ಯೂರಿಯಾಸಿಟಿ ನೌಕೆ ಈಗಾಗಲೇ ಮಂಗಳ ಗ್ರಹದ ಚಿತ್ರಗಳನ್ನು ಕಳುಹಿಸುತ್ತಿದೆ.ಇನ್ನೊಂದು ಕಡೆ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸುವ ಯೋಜನೆ ಆರಂಭವಾಗಿದೆ ಈ ಮಧ್ಯೆ ಮಂಗಳ ಗ್ರಹಕ್ಕೆ ಹೊಸ ಸ್ನೇಕ್‌ ರೊಬೊಟ್‌ ಕಳುಹಿಸಲು ವಿಜ್ಞಾನಿಗಳು ಮುಂದಾಗುತ್ತಿದ್ದಾರೆ.

ಈ ಮಧ್ಯೆ ವಿಶ್ವದ ದೊಡ್ಡ ದೊಡ್ಡ ದೇಶಗಳು ಮಂಗಳ ಗ್ರಹದ ಬಗ್ಗೆಅಧ್ಯಯನ ನಡೆಸುತ್ತಿರುವಾಗಲೇ ಭಾರತವು ಮಂಗಳ ಗ್ರಹದ ಅಧ್ಯಯನಕ್ಕೆ ನಾನೇನು ಕಡಿಮೆ ಇಲ್ಲ ಎಂದು ತೋರಿಸಲು ಉಪಗ್ರಹ ಕಳುಹಿಸಲು ಸಜ್ಜಾಗಿದೆ. ಇಸ್ರೋದ ವಿಜ್ಞಾನಿಗಳು ಯೋಜನೆಗೆ ಅನುಮತಿ ದೊರೆತ ಒಂದೇ ವರ್ಷದಲ್ಲಿ ಉಪಗ್ರಹವನ್ನು ತಯಾರಿಸಿ ಮಂಗಳ ಗ್ರಹಕ್ಕೆ ಕಳುಹಿಸಿಲು ರೆಡಿಯಾಗಿದ್ದಾರೆ. ನಿಗದಿಯಾದಂತೆ ಇಸ್ರೋ ಅಕ್ಟೋಬರ್‌ 28 ರಂದು ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಪೆಸಿಫಿಕ್‌ ಮಹಾಸಾಗರದಲ್ಲಿನ ಪ್ರತಿಕೂಲ ವಾತಾವರಣದಿಂದಾಗಿ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಈಗ ಒಂದು ವಾರ ಮುಂದೂಡಲ್ಪಟ್ಟಿದ್ದು,ನವೆಂಬರ್‌ 5ರಂದು ಮಧ್ಯಾಹ್ನ2.38ಕ್ಕೆ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆಯಾಗಲಿದೆ.ಹೀಗಾಗಿ ಇಲ್ಲಿ ಇಸ್ರೋ ಮತ್ತು ಭಾರತದ ಪಾಲಿಗೆ ಪ್ರತಿಷ್ಠೆ ವಿಚಾರ ಮತ್ತು ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಯೋಜನೆಗೆ ಸಂಬಂಧಿಸಿದಂತೆ ಕಿರು ಮಾಹಿತಿಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮಂಗಳ ಗ್ರಹದಲ್ಲಿ ನೀರು ಪತ್ತೆ!

1

1


ಇಸ್ರೋದ ಮಂಗಳಯಾನಕ್ಕೆ ಕೇಂದ್ರ ಸರ್ಕಾರ 2012 ಅಗಸ್ಟ್‌ 3ರಂದು ಅನುಮತಿ ನೀಡಿತ್ತು. ಅನುಮತಿ ದೊರಕಿದ ಒಂದೇ ವರ್ಷ‌ದಲ್ಲಿ ಇಸ್ರೋ ಈ ಉಪಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.

ಯೋಜನೆಗೆ 450 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಹಣದಲ್ಲಿ150 ಕೋಟಿ ರೂ. ಬಾಹ್ಯಾಕಾಶ ನೌಕೆ ನಿರ್ಮಾಣಕ್ಕೆ, 110 ಕೋಟಿ ರೂ. ಉಡಾವಣೆಗೆ ವೆಚ್ಚವಾಗಲಿದೆ. ಈ ಮೂಲಕ ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಮಂಗಳಯಾನಕ್ಕೆ ಸಂಬಂಧಿಸಿದ ಯೋಜನೆ ರೂಪಿಸಿದ ಕೀರ್ತಿಗೆ ಇಸ್ರೋ ಪಾತ್ರವಾಗಿದೆ.

2

2


ಅಧ್ಯಯನಕ್ಕಾಗಿ 15 ಕೆ.ಜಿ. ಭಾರದ ಐದು ಉಪಕರಣಗಳು ಉಪಗ್ರಹದಲ್ಲಿದ್ದು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಉಪಕರಣಗಳನ್ನು ಬೆಂಗಳೂರಿನ ಐಸಾಕ್‌ ಕೇಂದ್ರದ ಕ್ಲೀನ್‌ ರೂಮ್‌‌ನಲ್ಲಿ ತಪಾಸಣೆ ಮಾಡಲಾಗಿದೆ.ಉಪಗ್ರಹದ ತೂಕ 1,340 ಕೆ.ಜಿ. ಇದು ಮಂಗಳನ ಕಕ್ಷೆಗೆ ಸೇರಿದಾಗ 582 ಕೆ.ಜಿ.ಗೆ ಕುಗ್ಗಲಿದೆ.

3

3


ವಾತಾವರಣದ ಅಧ್ಯಯನ:
ಡ್ಯೂಟೇರಿಯಂ ಮತ್ತು ಹೈಡ್ರೋಜನ್ ಬಗ್ಗೆ ಅಧ್ಯಯನ ನಡೆಸಲು ಎಲ್‌ಎಪಿ(Lyman-Alpha Photometer )
ಮೀಥೇನ್ ಇರುವಿಕೆ ಪತ್ತೆಗೆ ಎಂಎಸ್‌ಎಂ(Methane Sensor For Mars) ಹೆಸರಿನ ವೈಜ್ಞಾನಿಕ ಉಪಕರಣ ಉಪಗ್ರಹದಲ್ಲಿದೆ.

ಪರಿಸರಕ್ಕೆ ಅಧ್ಯಯನಕ್ಕಾಗಿ ಎಂಇಎನ್‌ಸಿಎ(Mars Exospheric Neutral Composition Analyzer) ಉಪಕರಣವಿದೆ


ಮಂಗಳದ ಗ್ರಹದ ಚಿತ್ರಣದ ಅಧ್ಯಯನ:
ಮಂಗಳದ ಮೇಲ್ಮೈ ರಚನೆ ಸೆರೆ ಹಿಡಿಯಲು ಎಂಸಿಸಿ (Mars Colour Camera)ಕ್ಯಾಮೆರಾವಿದೆ

ಮಂಗಳ ಗ್ರಹದಲ್ಲಿರುವ ತಾಪಮಾನ ಮತ್ತು ಅಲ್ಲಿನ ಭೂಮಿಯನ್ನು ಅಧ್ಯಯನ ಮಾಡಲು ಟಿಐಎಸ್‌(Thermal Infrared Imaging Spectrometer ) ಉಪಕರಣವಿದೆ.

4

4


ಉಪಗ್ರಹ ಹಾರಿಸಿದ ಬಳಿಕ ಮಂಗಳ ಗ್ರಹ ತಲುಪಲು ಸುಮಾರು 10 ತಿಂಗಳು ಬೇಕಾಗುತ್ತದೆ.ಉಪಗ್ರಹದ ಕನಿಷ್ಠ ಅವಧಿ 6 ತಿಂಗಳು. ಗರಿಷ್ಟ ಅವಧಿ10 ತಿಂಗಳು.ಉಪಗ್ರಹ ಮೊದಲ ಪೂರ್ಣ ಪ್ರಮಾಣದ ಚಿತ್ರವನ್ನು 9 ತಿಂಗಳ ಬಳಿಕ(ಸೆ.21, 2014) ಭೂಮಿಗೆ ಕಳುಹಿಸುವಂತೆ ಇಸ್ರೋ ಯೋಜನೆ ರೂಪಿಸಿದೆ.

5

5


ಉಪಗ್ರಹದದಿಂದ ಕಳುಹಿಸಿದ ಚಿತ್ರ/ಮಾಹಿತಿಗಳು ಭೂಮಿಗೆ ತಲುಪಲು 20 ನಿಮಿಷದ ಬೇಕು. ಇಸ್ರೋ ಚಂದ್ರಯಾನದಲ್ಲಿ ಮೂರು ಸೆಕೆಂಡ್‌‌ನಲ್ಲಿ ಸಂಕೇತಗಳು ಭೂಮಿಗೆ ತಲುಪುತಿತ್ತು.ಉಪಗ್ರಹ ಪ್ರತಿ ಮೂರು ದಿನಕ್ಕೊಮ್ಮೆ ಮಂಗಳನ ಸುತ್ತ ಪರಿಭ್ರಮಿಸಲಿದೆ..

6

6

ಉಪಹಗ್ರಹ ಒಯ್ಯುವ ಪಿಎಸ್‌ಎಲ್‌ವಿ-ಸಿ25 ವಾಹಕ ನೌಕೆ ಶ್ರೀಹರಿಕೋಟಾದಿಂದ ನಭಕ್ಕೆ ಹಾರಲು ತಯಾರಾಗಿದೆ.ಉಪಗ್ರಹದ ಕೊನೆ ಕ್ಷಣದ ತಪಾಸಣೆ ಬೆಂಗಳೂರಿನ ಇಸ್ರೋದ ಐಸೆಕ್ ಕೇಂದ್ರದಲ್ಲಿ ನಡೆದಿದೆ.

7

7


ಇಸ್ರೋ ತನ್ನದೇ ಆದ ದಿಕ್ಸೂಚಿ ಮತ್ತು ಸಂವಹನ ವ್ಯವಸ್ಥೆಯನ್ನು ಹೊಂದಿದ್ದರೂ ಇದಕ್ಕೆ ಕೆಲವು ಇತಿಮಿತಿಗಳಿವೆ. ಹೀಗಾಗಿ ಈ ಇತಿಮಿತಿಯ ಹೊರಗೆ ವ್ಯೋಮನೌಕೆ ಸಂಚರಿಸಿದಾಗ ಅದಕ್ಕೆ ನಾಸಾದ ಸಂವಹನ ಮತ್ತು ದಿಕ್ಸೂಚಿ ವ್ಯವಸ್ಥೆಯ ಬೆಂಬಲ ಅನಿವಾರ್ಯವಾಗಿದೆ. ಹೀಗಾಗಿ ನಾಸಾದ Deep Space Network ಸಹಾಯವನ್ನು ಪಡೆಯುವುದರಿಂದ ಇಸ್ರೋ ನಾಸಾಗೆ 70 ಕೋಟಿ ರೂ.ಗಳನ್ನು ನೀಡಲಿದೆ.


ಕೆಲ ದಿನಗಳ ಹಿಂದೆ ಅಮೆರಿಕ ಧನವಿನಿಯೋಗ ಮಸೂದೆ ಪಾಸಾಗದೇ ಇದ್ದರಿಂದ ನಾಸಾ ಸಿಬ್ಬಂದಿಗೆ ಸಂಬಳ ಸಿಗದ ಕಾರಣ ಇಸ್ರೋದ ಈ ಯೋಜನೆಗೆ ಹಿನ್ನೆಡೆಯಾಗಿತ್ತು.ಆದರೆ ಈಗ ಸಮಸ್ಯೆ ನಿವಾರಣೆಯಾಗಿದೆ.

8

8


ಪೂರ್ವ ನಿಗದಿಯಂತೆ ಅ.28ರ ಸಂಜೆ 4.15ಕ್ಕೆ (ಎಂಒಎಂ) ವ್ಯೋಮನೌಕೆಯ ಉಡಾವಣೆ ನಡೆಯಬೇಕಿತ್ತು. ಅ.28ರಂದು ಉಡಾವಣೆ ನಡೆಯದಿದ್ದರೂ ನ.19ರೊಳಗೆ ಯೋಜನೆ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇಸ್ರೋಗೆ ಇದೆ. ಒಂದು ವೇಳೆ ನ.19ರ ದಿನಾಂಕದ ಗಡಿ ದಾಟಿದ್ದಲ್ಲಿ ಇನ್ನು 2 ವರ್ಷ ಕಾಲ ಇಸ್ರೋಗೆ ಮಂಗಳಯಾನ ಯೋಜನೆ ಕೈ ಗೊಳ್ಳಲು ಸಾಧ್ಯವಿಲ್ಲ.

9

9

ಇಸ್ರೋದ ಈ ಮಹತ್ವಕಾಂಕ್ಷಿ ಯೋಜನೆಗೆ ಈಗಾಗಲೇ ಅಪಸ್ವರಗಳು ಹೊರ ಬಿದ್ದಿದೆ. ದೇಶದಲ್ಲಿ ಸಂವಹನ ಉಪಗ್ರಹ ವ್ಯಾಪಕ ಕೊರತೆಯ ನಡುವೆ ಮಂಗಳಯಾನದ ಯೋಜನೆ ಇಸ್ರೋ ಕೈ ಹಾಕಿದ್ದು. ಮಂಗಳಯಾನ ಒಂದು ಪ್ರಚಾರ ತಂತ್ರ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಹೇಳಿದ್ದಾರೆ.

10

10


ಇಸ್ರೋದ ಈ ಮಂಗಳಯಾನ ಯೋಜನೆ ಯಶಸ್ವಿಯಾದಲ್ಲಿ ಮಂಗಳನ ಅಧ್ಯಯನಕ್ಕೆ ಉಪಗ್ರಹವನ್ನು ಕಳುಹಿಸಿದ ನಾಲ್ಕನೇಯ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಮಂಗಳಯಾನಕ್ಕೆ ರಷ್ಯಾ, ಅಮೆರಿಕ,ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಉಪಗ್ರಹವನ್ನು ಕಳುಹಿಸಿ ಅಧ್ಯಯನ ನಡೆಸುತ್ತಿದೆ.

11

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X