ಈ ವರ್ಷ ಭಾರತದಲ್ಲಿ 270 ಮಿಲಿಯನ್ ಮೊಬೈಲ್ ಮಾರಾಟವಾಗಲಿದೆಯಂತೆ..!

Written By:

ಸದ್ಯ ಬೆಳೆಯುತ್ತಿರುವ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಈ ಬಾರಿ 270 ಮಿಲಿಯನ್ ಮೊಬೈಲ್ ಮಾರಾಟವಾಗುವ ಗುರಿಯನ್ನು ಹೊಂದಲಾಗಿದೆ. ಇದರಲ್ಲಿ 130 ಮಿಲಿಯನ್ ಸ್ಮಾರ್ಟ್‌ಪೋನುಗಳಾಗಿರಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಈ ವರ್ಷ ಭಾರತದಲ್ಲಿ 270 ಮಿಲಿಯನ್ ಮೊಬೈಲ್ ಮಾರಾಟವಾಗಲಿದೆಯಂತೆ..!

ಓದಿರಿ: ಕೇಂದ್ರ ಬಜೆಟ್ 2017-18: 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೌಲಭ್ಯ

ಈ ಕುರಿತು ಸಮೀಕ್ಷೆ ನಡೆಸಿರುವ ಗುರುಗಾವ್ ಮೂಲಕ ಸೈಬರ್ ಮೀಡಿಯಾ ರಿಸರ್ಚ್ ಎನ್ನುವ ಸಂಸ್ಥೆ, ಈ ವರ್ಷದಲ್ಲಿ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನುಗಳು ಹೆಚ್ಚಾಗಲಿದೆ. ಅದರಲ್ಲಿಯೂ 10,000 ಬೆಲೆಯ ಸ್ಮಾರ್ಟ್‌ಪೋನುಗಳೇ ಅಧಿಕ ಪ್ರಮಾಣದಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ.

ಸಾಮ್‌ಸಂಗ್ ಸೇರಿದಂತೆ ಚೈನಾ ಮೂಲದ ಕಂಪನಿಗಳಾದ ಲಿನೊವೋ, ಓಪ್ಪೋ, ವಿವೋ ಮತ್ತು ಕ್ಸಿಯೋಮಿ ಗಳು ಈ ವರ್ಷದಲ್ಲಿ ಭಾರತೀಯಾ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಲಿವೆ. ಅಲ್ಲದೇ ಶೇ.75 ರಷ್ಟು ಸ್ಮಾರ್ಟ್‌ಪೋನುಗಳು ಈ ಕಂಪನಿಗಳದ್ದೇ ಆಗಿರಲಿದೆ.

ಈ ವರ್ಷ ಭಾರತದಲ್ಲಿ 270 ಮಿಲಿಯನ್ ಮೊಬೈಲ್ ಮಾರಾಟವಾಗಲಿದೆಯಂತೆ..!

ಓದಿರಿ: ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಭಾರತೀಯ ಮಾರುಕಟ್ಟೆಯೂ ಸದ್ಯ ಬೆಳೆಯುತ್ತಿದ್ದು, ಹೊಸ ಮಾದರಿಯ ತಂತ್ರಜ್ಞಾನಗಳು ಅತೀ ವೇಗವಾಗಿ ಭಾರತೀಯರಿಗೆ ಮೈಗೂಡಲಿದೆ, ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆ ಸ್ಮಾರ್ಟ್‌ಪೋನುಗಳು ಮಾರಾಟವಾಗಲಿದೆ ಎಂದು ಭವಿಷ್ಯ ನುಡಿದಿದೆ.

Read more about:
English summary
The Indian market is estimated to ship 270 million mobile phones in 2017, of which 130 million (48 percent) will be smartphones. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot